Mayank Yadav IPL 2025: ಟೀಂ ಇಂಡಿಯಾದ ಭವಿಷ್ಯದ ಭರವಸೆಯ ಆಟಗಾರ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಈ ಬಾರಿ ಅದೃಷ್ಟವನ್ನೇ ಹೊತ್ತುಕೊಂಡು ಸವಾರಿ ಮಾಡುತ್ತಿದ್ದಂತಿದೆ. ಕಳೆದ ವರ್ಷ ರೂ. 20 ಲಕ್ಷಕ್ಕೆ ಖರೀದಿಸಲ್ಪಟ್ಟಿದ್ದ ಈ ಆಟಗಾರ ಈಗ ಮೆಗಾ ಹರಾಜಿಗೂ ಮುನ್ನ ರೂ. 14 ಕೋಟಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ದೇಶದಲ್ಲಿ ನಾಯಿ-ಬೆಕ್ಕುಗಳೂ ಕೂಡ ಕೆಲಸಕ್ಕೆ ಹೋಗುತ್ತವೆ..! ಅಷ್ಟಕ್ಕೂ ಅವು ಪಡೆಯುವ ಸಂಬಳ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್‌ ಆಗ್ತೀರ


ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಲಕ್ನೋ ಸೂಪರ್‌ ಜೈಂಟ್ಸ್ ಫ್ರಾಂಚೈಸ್ ಯುವ ವೇಗಿ ಮಯಾಂಕ್ ಯಾದವ್ ಅವರನ್ನು ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಅದೂ ಕೂಡ ಬರೋಬ್ಬರಿ ರೂ. 14 ಕೋಟಿಗೆ...


ಲಕ್ನೋ ಸೂಪರ್‌ ಜೈಂಟ್ಸ್ ಫ್ರಾಂಚೈಸ್ ತಮ್ಮ ಎರಡನೇ ಆಯ್ಕೆಯಾಗಿ ಬಲಗೈ ಸ್ಪೀಡ್‌ಸ್ಟರ್ ಅನ್ನು ಉಳಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಮೆಗಾ ಹರಾಜು ನಿಯಮಗಳ ಪ್ರಕಾರ ಮಯಾಂಕ್ ಯಾದವ್ ರೂ. 14 ಕೋಟಿ ಸಂಭಾವನೆ ಪಡೆಯಲಿದ್ದಾರೆ.


ಈ ಹಿಂದೆ ಮಯಾಂಕ್‌ ಅವರನ್ನು, ಅನ್‌ಕ್ಯಾಪ್ಡ್ ಪಟ್ಟಿಗೆ ಸೇರಿಸಿಕೊಳ್ಳಲು ಫ್ರಾಂಚೈಸಿ ತೀರ್ಮಾನಿಸಿತ್ತು. ಆದರೆ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಮೂಲಕ ಮಯಾಂಕ್ ಯಾದವ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ, ಆ ಮೂಲಕ ಅದ್ಭುತ ಸೃಷ್ಟಿಸಿ ತಮ್ಮ ಕನಿಷ್ಠ ಬೆಲೆಯನ್ನು ಗರಿಷ್ಠ ಬೆಲೆಯತ್ತ ಕರೆದುಕೊಂಡು ಹೋಗಿದ್ದಾರೆ.


ಇದನ್ನೂ ಓದಿ:  ಈ ಭಾರಿಯೂ RCB ಕೈ ತಪ್ಪುತ್ತಾ ಕಪ್‌..? ಕರ್ನಾಟಕ ಸರ್ಕಾದಿಂದ ಈ ನಿಯಮ ಪಾಲಿಸುವಂತೆ ತಂಡಕ್ಕೆ ಬಾರಿ ಒತ್ತಡ..!  


ಮಯಾಂಕ್ ಯಾದವ್ ಕಳೆದ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ 4 ಪಂದ್ಯಗಳನ್ನು ಆಡಿದ್ದರು. ಸುಮಾರು 150 ಕಿ.ಮೀ ಬೌಲ್ ಮಾಡಿದ ಮಯಾಂಕ್ 73 ಎಸೆತಗಳಲ್ಲಿ ಕೇವಲ 85 ರನ್ ನೀಡಿ ಒಟ್ಟು 7 ವಿಕೆಟ್ ಪಡೆದಿದ್ದರು. ಈ ಪ್ರಭಾವಶಾಲಿ ಪ್ರದರ್ಶನದ ಆಧಾರದ ಮೇಲೆ, ಲಕ್ನೋ ಸೂಪರ್‌ಜೈಂಟ್ಸ್ ಫ್ರಾಂಚೈಸ್ ಈಗ ಯುವ ವೇಗಿಗಳನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ