Women umpires in Ranji Trophy: ಪುರುಷರ ದೇಶೀಯ ಕ್ರಿಕೆಟ್ ನಲ್ಲಿ ಮಹಿಳಾ ಅಂಪೈರ್‌ಗಳನ್ನು ಸೇರ್ಪಡೆ ಮಾಡಲು ಭಾರತೀಯ ಮಂಡಳಿಯು ನಿರ್ಧರಿಸುವುದರೊಂದಿಗೆ ಮೂರು ದಿಗ್ಗಜರು ಈ ಋತುವಿನ ರಣಜಿ ಟ್ರೋಫಿ ಪಂದ್ಯಗಳಲ್ಲಿ ಮೈದಾನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದು ಕೇವಲ ಆರಂಭ. ಪುರುಷರ ಆಟದಲ್ಲೂ ಅವರಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವೃಂದ ರತಿ, ಜನನಿ ನಾರಾಯಣನ್ ಮತ್ತು ಗಾಯತ್ರಿ ವೇಣುಗೋಪಾಲನ್ ಅವರು ಭಾರತ-ಆಸ್ಟ್ರೇಲಿಯಾ ಮಹಿಳಾ T20I ಸರಣಿಯಲ್ಲಿ ಅಂಪೈರ್ ಗಳಾಗಿ ಮುಂದಿನ ವಾರ ಪ್ರಾರಂಭವಾಗುವ 2 ನೇ ಹಂತದಿಂದ ಆರಂಭಿಸುತ್ತಾರೆ. ಬಿಸಿಸಿಐನಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.


ಇದನ್ನೂ ಓದಿ: ಬಾಲ್ ಕ್ಯಾಚ್ ಹಿಡಿಯಲು ಹೋಗಿ ಹಲ್ಲು ಮುರಿದುಕೊಂಡ ಆಟಗಾರ! Video ನೋಡಿ


ಅನೇಕ ರಾಜ್ಯ ಸಂಘಗಳು ಮಹಿಳೆಯರ ಕ್ರಿಕೆಟ್‌ನ ಹೊರತಾಗಿ ಸ್ಥಳೀಯವಾಗಿ ಪುರುಷರ ಆಟಗಳಲ್ಲಿ ಕಾರ್ಯನಿರ್ವಹಿಸಲು ಮಹಿಳೆಯರ ತಂಡವನ್ನು ರಚಿಸುತ್ತವೆ. ಆದರೆ ಇಲ್ಲಿಯವರೆಗೆ, ಪುರುಷರ ಹಿರಿಯ ಪಂದ್ಯಾವಳಿಗಳಲ್ಲಿ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲು ಮಹಿಳೆಯರಿಗೆ ಬಿಸಿಸಿಐ ಎಂದಿಗೂ ಅವಕಾಶ ನೀಡಿರಲಿಲ್ಲ.


ಭಾರತೀಯ ಕ್ರಿಕೆಟ್ ಮಂಡಳಿಯು ಗುತ್ತಿಗೆ ಅಂಪೈರ್‌ಗಳಿಗೆ ಮಾಧ್ಯಮಗಳೊಂದಿಗೆ ಸಂವಹನ ನಡೆಸಲು ಅನುಮತಿಸುವುದಿಲ್ಲ. ಆದರೆ ಸರ್ಕ್ಯೂಟ್‌ನಲ್ಲಿರುವ ನಿಯಮಿತರು ಇತಿಹಾಸವನ್ನು ನಿರ್ಮಿಸಲಿರುವ ಈ ಮೂವರು ಮಹಿಳೆಯರ ಬಗ್ಗೆ  ಮಾಹಿತಿ ನೀಡಿದ್ದಾರೆ.


ಮುಂಬೈನ ರತಿ ಅವರು 32 ವರ್ಷ ವಯಸ್ಸಿನವರಾಗಿದ್ದು, ಮಧ್ಯಮ ವೇಗಿ ಆಟಗಾರ್ತಿ. ಈ ಹಿಂದೆ ಮುಂಬೈ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಅವರು ಮುಂಬೈನಲ್ಲಿ ಸ್ಥಳೀಯ ಪಂದ್ಯಗಳಲ್ಲಿ ನಿಯಮಿತ ಸ್ಕೋರರ್ ಆಗಿದ್ದರು. 2010 ರಲ್ಲಿ BCCI ನಡೆಸಿದ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಪರೀಕ್ಷೆಗಳಲ್ಲಿ  ಮತ್ತು ಬಿಸಿಸಿಐ ಪರೀಕ್ಷೆಯಲ್ಲಿ ತೇರ್ಗಡೆಯಾದರು.


ಇನ್ನು 36 ವರ್ಷದ ನಾರಾಯಣನ್ ಅವರು ಎಂದಿಗೂ ಗಂಭೀರ ಮಟ್ಟದಲ್ಲಿ ಕ್ರಿಕೆಟ್ ಆಡಿಲ್ಲ. ಆದರೆ ಯಾವಾಗಲೂ ಆಟದತ್ತ ಆಕರ್ಷಿತರಾಗಿದ್ದರು. ಅವರು 2009 ಮತ್ತು 2012 ರಲ್ಲಿ TNCA ಯನ್ನು ಸಂಪರ್ಕಿಸಿ, ಅಂಪೈರ್ ಆಗಲು ಅರ್ಜಿ ನಮೂನೆಯನ್ನು ಕೇಳಿದರು. ಸ್ಥಳೀಯ ಅಧಿಕಾರಿಗಳಿಗೆ  ಇವರ ಮಾತು ಕೇಳಿ ಆಶ್ಚರ್ಯವಾಯಿತು. 2015 ರಲ್ಲಿ, ರಾಜ್ಯ ಸಂಘವು ಅಂತಿಮವಾಗಿ ತಮ್ಮ ನಿಯಮಗಳು ಮತ್ತು ಗ್ರಹಿಕೆಗಳನ್ನು ಬದಲಾಯಿಸಿ ಆಕೆಗೆ ಒಂದು ಫಾರ್ಮ್ ನ್ನು ನೀಡಿತು. 2018 ರಲ್ಲಿ, ಅವರು BCCI ಯ ಲೆವೆಲ್ 2 ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ತಮ್ಮ ಐಟಿ ಕೆಲಸವನ್ನು ತ್ಯಜಿಸಲು ನಿರ್ಧರಿಸಿದರು.


ದೆಹಲಿಯ ವೇಣುಗೋಪಾಲನ್ 43 ವರ್ಷದ ವೃತ್ತಿಪರ ಕ್ರಿಕೆಟಿಗನಾಗಲು ಬಯಸಿದ್ದರು. ಆದರೆ ಭುಜದ ಗಾಯವು ಅವರ ಕನಸನ್ನು ಕಮರುವಂತೆ ಮಾಡಿತು. ಬಳಿಕ ಅವರು ತಮ್ಮ ಕಾರ್ಪೊರೇಟ್ ವೃತ್ತಿಜೀವನವನ್ನು ತ್ಯಜಿಸಿದರು. BCCI ಅಂಪೈರಿಂಗ್ ಪರೀಕ್ಷೆಗಳನ್ನು ಪೂರ್ಣಗೊಳಿಸಿ 2019 ರಲ್ಲಿ ಅಂಪೈರ್ ಆಗಿ ಸೇರಿಕೊಂಡರು.


ಇದನ್ನೂ ಓದಿ: IPLನಿಂದ ವಿದೇಶಿ ಆಟಗಾರರಿಗೆ ಬಿಗ್ ಶಾಕ್: ಈ ನಿಯಮದ ಪ್ರಕಾರ ತಂಡಕ್ಕೆ ಸೇರ್ಪಡೆಯಿಲ್ಲ!!


ರತಿ ಮತ್ತು ನಾರಾಯಣನ್ ಅಂಡರ್-23 ಬಾಲಕರ ಸಿಕೆ ನಾಯುಡು ಟ್ರೋಫಿ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ಆದರೆ ಈ ಬಾರಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ ಎನ್ನಬಹುದು. ಪುರುಷರು ತುಂಬಿರುವ ಕ್ಷೇತ್ರದಲ್ಲಿ ಮಹಿಳೆಯರ ತೀರ್ಪು ಅಂತಿಮವಾಗಲಿದೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.