Galle Gladiators vs Kandy Falcons LPL : ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಕ್ಯಾಂಡಿ ಫಾಲ್ಕನ್ಸ್ ಮತ್ತು ಗಾಲೆ ಗ್ಲಾಡಿಯೇಟರ್ಸ್ ನಡುವೆ ಪಂದ್ಯ ನಡೆಯಿತು. ಇದರಲ್ಲಿ ಕ್ಯಾಂಡಿ ಫಾಲ್ಕನ್ಸ್ 5 ವಿಕೆಟ್ ಗಳ ಜಯ ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಕ್ಯಾಂಡಿ ಫಾಲ್ಕನ್ಸ್ ತಂಡದ ಸ್ಟಾರ್ ಆಟಗಾರನೊಬ್ಬ ಹಲ್ಲು ಮುರಿದುಕೊಂಡಿದ್ದಾರೆ.
ಹಲ್ಲು ಮುರಿದುಕೊಂಡ ಈ ಆಟಗಾರ
ನುವಾನಿಂದು ಫೆರ್ನಾಂಡೊ ಅವರು ಕಾರ್ಲೋಸ್ ಬ್ರಾಥ್‌ವೈಟ್ ಅವರ ಬಾಲ್‌ಗೆ ಲಾಂಗ್ ಸ್ಟ್ರೋಕ್ ಹಾಕಲು ಪ್ರಯತ್ನಿಸಿದರು, ಆದರೆ ಚೆಂಡು ಬ್ಯಾಟ್‌ಗೆ ಸರಿಯಾಗಿ ಬಡಿಯಲಿಲ್ಲ. ಆಗ ಚಾಮಿಕ್ ಕರುಣಾರತ್ನೆ ಬಾಲ್ ಹಿಡಿಯಲು ಹಿಮ್ಮುಖವಾಗಿ ಓಡಿ ಹೋಗಿ ಅತ್ಯುತ್ತಮ ಕ್ಯಾಚ್ ಹಿಡಿದರು, ಆದರೆ ಕ್ಯಾಚ್ ತೆಗೆದುಕೊಳ್ಳುವಾಗ, ಚೆಂಡು ಕಾಯಿಂದ ಜಾರಿ ನೇರವಾಗಿ ಬಾಯಿಗೆ ಬಡಿಯಿತು. ಬಾಲ್ ಬಡೆದ ರಭಸಕ್ಕೆ ಚಾಮಿಕ್ ನ ಮೂರು-ನಾಲ್ಕು ಹಲ್ಲುಗಳು ಮುರಿದವು. ತಕ್ಷಣವೇ ಅವರನ್ನು ಮೈದಾನದಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈಗ ಅವರು ಆರೋಗ್ಯವಾಗಿದ್ದು, ಉಳಿದ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ : Virender Sehwag : ಟೀಂ ಇಂಡಿಯಾ ಹೀನಾಯ ಸೋಲನ್ನು ಲೇವಡಿ ಮಾಡಿದ ವೀರೇಂದ್ರ ಸೆಹ್ವಾಗ್
ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
ಚಾಮಿಕ್ ಕರುಣಾರತ್ನೆ ಗಾಯಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಚಾಮಿಕಾಗೆ ಬಾಲ್ ಬಡಿದ ತಕ್ಷಣ ಅವರು ಚೆಂಡನ್ನು ಪಕ್ಕದಲ್ಲಿದ್ದ ಇನ್ನೊಬ್ಬ ಆಟಗಾರನಿಗೆ ನೀಡುತ್ತಾರೆ. ಬಾಯಿಗೆ ಬಾಲ;ಲ್ ತುಂಬಾ ಸ್ಪೀಡ್ ಆಗಿ ಬಂದು ಬಡಿದಿದೆ. ಆ ಬಾಲ್ ಬಡಿದೆ ರಭಸಕ್ಕೆ ಹಲ್ಲು ಮುರಿದಿವೆ. ಹಾಗಿದ್ರೆ ಆ ಬಾಲ್ ಅಷ್ಟು ಸ್ಪೀಡ್ ಅಲ್ಲಿ ಬಂದು ಅವರ ಬಾಯಿಗೆ ಬಡೆದಿರಬಹುದು ನೀವೇ ಊಹಿಸಿಕೊಳ್ಳಿ. ಆದ್ರೆ, ಅವರ ಬಾಯಿಗೆ ನೋವಾದ್ರೂ ಚಾಮಿಕ್ ಬಾಲ್ ಬಿಡುವುದಿಲ್ಲ. ಈ ಕೆಳಗಿದೆ ನೀವು ವಿಡಿಯೋ ನೋಡಿ..
Chamika hospitalized while attempting catch for Kandy Falcons#LPL2022 #LPL #ChamikaKarunaratne #Cricket pic.twitter.com/yrkT2bbhoG
— Ada Derana Sports (@AdaDeranaSports) December 7, 2022
ಪಂದ್ಯ ಗೆದ್ದ ಕ್ಯಾಂಡಿ ಫಾಲ್ಕನ್ಸ್ ಟೀಂ
ಮೊದಲು ಬ್ಯಾಟಿಂಗ್ ಮಾಡಿದ ಗಾಲೆ ಗ್ಲಾಡಿಯೇಟರ್ಸ್ ಫಾಲ್ಕನ್ಸ್‌ಗೆ 122 ರನ್‌ಗಳ ಗುರಿ ನೀಡಿತು, ಕ್ಯಾಂಡಿ ಫಾಲ್ಕನ್ಸ್ 5 ವಿಕೆಟ್ ಕಳೆದುಕೊಂಡು ಸಾಧಿಸಿತು. ಫಾಲ್ಕನ್ಸ್ ಪರ ಕಾರ್ಲೋಸ್ ಬ್ರಾಥ್ ವೈಟ್ ಅದ್ಭುತ ಬೌಲಿಂಗ್ ಮಾಡಿದರು. ನಾಲ್ಕು ಓವರ್ ಗಳಲ್ಲಿ 14 ರನ್ ನೀಡಿ 4 ವಿಕೆಟ್ ಪಡೆದರು. ಇವರಿಂದಾಗಿಯೇ ಗಾಲೆ ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದೆ ಪಂದ್ಯ ಸೋತಿತ್ತು.
ಇದನ್ನೂ ಓದಿ : Rohit Sharma Batting : ಹೆಬ್ಬೆರಳು ಮುರಿದರು ಬ್ಯಾಟಿಂಗ್ ಮಾಡಿದ ರೋಹಿತ್ : ಫ್ಯಾನ್ಸ್ ಮನ ಗೆದ್ದ ಹಿಟ್ ಮ್ಯಾನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.