6,6,6,6,4,4,4,4,4,4… 10 ಎಸೆತದಲ್ಲಿ 48 ರನ್ ಗಳಿಸಿ ಮಿಂಚಿದ ಸ್ಟಾರ್ ಬ್ಯಾಟರ್- ಈತನೆಂದರೆ ಕೆಎಲ್ ರಾಹುಲ್’ಗೆ ಅಚ್ಚುಮೆಚ್ಚು
Marcus Stoinis, BBL 13: ಬಿಗ್ ಬ್ಯಾಷ್ ಲೀಗ್’ನಲ್ಲಿ ಈ ಸ್ಟಾರ್ ಬ್ಯಾಟರ್ ಕೇವಲ 10 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಸುರಿಮಳೆ ಸುರಿಸಿ, 48 ರನ್ ಗಳಿಸಿದ್ದಾರೆ. 19 ಎಸೆತಗಳಲ್ಲಿ 55 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ ಅವರು 6 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ, ಮೆಲ್ಬೋರ್ನ್ ಸ್ಟಾರ್ಸ್, ಈ ಪಂದ್ಯವನ್ನು 7 ವಿಕೆಟ್’ಗಳಿಂದ ಗೆಲ್ಲಲು ನೆರವಾದರು.
Marcus Stoinis, BBL 13: ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿರುವ ಆಸ್ಟ್ರೇಲಿಯಾದ ಅದ್ಭುತ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಬ್ಯಾಟ್’ನಿಂದ ಸಂಚಲನ ಮೂಡಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದಂತೆ ಹೃದಯಾಘಾತ.. ಮೈದಾನದಲ್ಲೇ ಕೊನೆಯುಸಿರೆಳೆದ 22 ಹರೆಯದ ಭಾರತದ ಕ್ರಿಕೆಟಿಗ
ಬಿಗ್ ಬ್ಯಾಷ್ ಲೀಗ್’ನಲ್ಲಿ ಈ ಸ್ಟಾರ್ ಬ್ಯಾಟರ್ ಕೇವಲ 10 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಸುರಿಮಳೆ ಸುರಿಸಿ, 48 ರನ್ ಗಳಿಸಿದ್ದಾರೆ. 19 ಎಸೆತಗಳಲ್ಲಿ 55 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ ಅವರು 6 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ, ಮೆಲ್ಬೋರ್ನ್ ಸ್ಟಾರ್ಸ್, ಈ ಪಂದ್ಯವನ್ನು 7 ವಿಕೆಟ್’ಗಳಿಂದ ಗೆಲ್ಲಲು ನೆರವಾದರು.
ಪಂದ್ಯದಲ್ಲಿ 5 ಅರ್ಧ ಶತಕಗಳು:
ಈ ಪಂದ್ಯದಲ್ಲಿ ಐವರು ಬ್ಯಾಟ್ಸ್‌ಮನ್’ಗಳು ಅರ್ಧಶತಕ ಸಿಡಿಸಿದ್ದರು. ಅಡಿಲೇಡ್ ತಂಡದ ಆರಂಭಿಕರಾದ ಮ್ಯಾಥ್ಯೂ ಶಾರ್ಟ್ (56 ರನ್) ಮತ್ತು ಕ್ರಿಸ್ ಲಿನ್ (ಔಟಾಗದೆ 83) ಅರ್ಧಶತಕ ಗಳಿಸಿದರು. ಶಾರ್ಟ್ ಅವರ ಇನ್ನಿಂಗ್ಸ್’ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್’ಗಳನ್ನು ಬಾರಿಸಿದರೆ, ಲಿನ್ 10 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ ಅಜೇಯ 83 ರನ್ ಗಳಿಸಿದರು. ಆದರೆ, ಈ ಇಬ್ಬರು ಬ್ಯಾಟ್ಸ್‌ಮನ್’ಗಳ ಕಠಿಣ ಪರಿಶ್ರಮವನ್ನು ಬ್ಯೂ ವೆಬ್‌ಸ್ಟರ್ (ಅಜೇಯ 66) ಮತ್ತು ಮಾರ್ಕಸ್ ಸ್ಟೊಯಿನಿಸ್ (ಅಜೇಯ 55) ಕೆಡವಿದರು.
ಇದನ್ನೂ ಓದಿ: 2024ರಲ್ಲಿ ಈ ರಾಶಿಯವರ ಅದೃಷ್ಟಕ್ಕೆ ಸರಿಸಾಟಿ ಯಾರೂ ಇರಲ್ಲ: ಸಂಪತ್ತು ತುಂಬಿ ತುಳುಕಲಿದೆ
ಐಪಿಎಲ್ 2023 ರಲ್ಲಿ, ಮಾರ್ಕ್ಸ್ ಸ್ಟೊಯಿನಿಸ್ ಲಕ್ನೋ ಸೂಪರ್ ಜೈಂಟ್ಸ್ ಪರ ಅನೇಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್’ಗಳನ್ನು ಆಡಿದ್ದಾರೆ. ಈ ಋತುವಿನಲ್ಲಿ 15 ಪಂದ್ಯಗಳನ್ನು ಆಡಿರುವ ಅವರು 150 ಸ್ಟ್ರೈಕ್ ರೇಟ್’ನಲ್ಲಿ 408 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 89 ರನ್ ಆಗಿತ್ತು. ಈ ಋತುವಿನಲ್ಲಿ 3 ಅರ್ಧಶತಕಗಳನ್ನು ಗಳಿಸುವಲ್ಲಿಯೂ ಅವರು ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲದೆ, ಬೌಲಿಂಗ್ ವೇಳೆಯೂ 5 ವಿಕೆಟ್ ಪಡೆದದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ