ನವದೆಹಲಿ : ಭಾರತದಲ್ಲಿ ಕೊರೋನಾ ಅಟ್ಟಹಾಸ ಮಿತಿಮೀರಿರುವಂತೆಯೇ ಇತ್ತ ಭಾರತದ ಪರಿಸ್ಥಿತಿಗೆ ಆಸಿಸ್ ಕ್ರಿಕೆಟರ್ ಆಸಿಸ್ ಕ್ರಿಕೆಟ್ ಮ್ಯಾಥ್ಯೂ ಹೇಡನ್ ಭಾವುಕ ಪತ್ರ ಬರೆದಿದ್ದಾರೆ. 


COMMERCIAL BREAK
SCROLL TO CONTINUE READING

ಹೇಡನ್ ಬರೆದ ಪತ್ರದಲ್ಲೇನಿದೆ...


'ಹಿಂದೆಂದೂ ನೋಡಿರದಂತೆ ಭಾರತವು ಸಾಂಕ್ರಾಮಿಕ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದೆ. 140 ಕೋಟಿ ಜನರಿರುವ ಈ ದೇಶ ವೈರಸ್(Coronavirus) ಸೋಂಕು ವಿರುದ್ಧ ಹೋರಾಡುತ್ತಿರುವಾಗ, ವಿಶ್ವ ಮಾಧ್ಯಮಗಳು ದೇಶದ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ಅಲ್ಲಿ ಯಾವುದೇ ಸಾರ್ವಜನಿಕ ಯೋಜನೆಯ ಅನುಷ್ಠಾನ ಮತ್ತು ಅದರ ಯಶಸ್ಸು ದೊಡ್ಡ ಸವಾಲಾಗಿರುತ್ತದೆ. ನಾನು ಒಂದು ದಶಕದಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ವಿಶೇಷವಾಗಿ ತಮಿಳುನಾಡು ನನ್ನ ಆಧ್ಯಾತ್ಮಿಕ ನೆಲೆ ಎಂದು ನಾನು ಪರಿಗಣಿಸುತ್ತೇನೆ. ಅಂತಹ ವೈವಿಧ್ಯಮಯ ಮತ್ತು ವಿಶಾಲವಾದ ದೇಶವನ್ನು ನಡೆಸುವ ಕಾರ್ಯವನ್ನು ವಹಿಸಿಕೊಂಡಿರುವ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವವಿದೆ.


ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾಗೆ ಮೂರು ತರಹದ ಕೊರೊನಾ ಟೆಸ್ಟ್


ನಾನು ಹೋದಲ್ಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದ ಮತ್ತು ವಾತ್ಸಲ್ಯದಿದ ಸ್ವಾಗತಿಸಿದರು, ಅದಕ್ಕಾಗಿ ನಾನು ಅವರಿಗೆ ಆಭಾರಿ. ನಾನು ಹಲವಾರು ವರ್ಷಗಳಿಂದ ಭಾರತ(India)ನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದ್ದರಿಂದಲೇ ಈ ಕ್ಷಣದಲ್ಲಿ ನೋವಿಗೆ ನನ್ನ ಹೃದಯ ಮಿಡಿಯುತ್ತಿದೆ. ಈ ಹೊತ್ತಲ್ಲಿ ಕೆಟ್ಟ ಮಾಧ್ಯಮಗಳು ಸಹ ಭಾರತದ ಜನರ ಮತ್ತು ಅವರ ಅಸಂಖ್ಯಾತ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ವ್ಯಾಪ್ತಿಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟ ಕ್ರಿಕೆಟಿಗ ಮತ್ತು ಕ್ರೀಡಾ ಪ್ರೇಮಿಯಾಗಿ ನಾನು ಕ್ರೀಡೆಯೊಂದಿಗಿನ ನನ್ನ ಒಡನಾಟವನ್ನು ಉಳಿಸಿಕೊಂಡಿದ್ದೇನೆ. ನನ್ನ ಸಹವರ್ತಿ ದೇಶವಾಸಿಗಳು ಅನೇಕ ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಪಂಚವು ಭಾರತದತ್ತ ಬಾಗಿಲು ಮುಚ್ಚುವ ಮತ್ತು ಸರ್ಕಾರವನ್ನು ದೂಷಿಸುತ್ತಿರುವಾಗ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವವರಿಗೆ ಲಭ್ಯವಿಲ್ಲದ ದೃಷ್ಟಿಕೋನವನ್ನು ನೀಡುವುದಕ್ಕಾಗಿ ಭಾರತದಲ್ಲಿದ್ದಾಗ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಯೋಚಿಸಿದೆ ಎಂದು ಹೇಡನ್ ಬರೆದಿದ್ದಾರೆ.


ಇದನ್ನೂ ಓದಿ : Indian Women squad for England tour: ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಘೋಷಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.