Indian Women squad for England tour: ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಘೋಷಣೆ

ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆಲ್-ಫಾರ್ಮ್ಯಾಟ್ ಸರಣಿಗಾಗಿ ಭಾರತೀಯ ಮಹಿಳಾ ತಂಡವನ್ನು ಹಿರಿಯ ಮಹಿಳಾ ಆಯ್ಕೆ ಸಮಿತಿ ಶುಕ್ರವಾರ ಘೋಷಿಸಿತು.

Written by - Yashaswini V | Last Updated : May 15, 2021, 10:10 AM IST
  • ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ
  • ಮಹಿಳಾ ತಂಡವು ಜೂನ್ 16 ರಿಂದ ಪ್ರವಾಸವನ್ನು ಬ್ರಿಸ್ಟಲ್‌ನಲ್ಲಿ ಪ್ರಾರಂಭಿಸಲಿದ್ದು, ಇದು ಕೇವಲ ಟೆಸ್ಟ್ ಪಂದ್ಯವಾಗಿದೆ
  • ಟೆಸ್ಟ್ ಸರಣಿಯ ನಂತರ, ಮೊದಲ ಏಕದಿನ ಪಂದ್ಯವನ್ನು ಜೂನ್ 27 ರಂದು ಬ್ರಿಸ್ಟಲ್‌ನಲ್ಲಿ ಆರಂಭಿಸಲಿದೆ
Indian Women squad for England tour: ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಘೋಷಣೆ

Indian Women squad for England tour: ಹಿರಿಯ ಮಹಿಳಾ ಆಯ್ಕೆ ಸಮಿತಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಬೇಕಾಗಿದೆ. 

ಮಹಿಳಾ ತಂಡವು (Indian Women squad) ಜೂನ್ 16 ರಿಂದ ಪ್ರವಾಸವನ್ನು ಬ್ರಿಸ್ಟಲ್‌ನಲ್ಲಿ ಪ್ರಾರಂಭಿಸಲಿದ್ದು, ಇದು ಕೇವಲ ಟೆಸ್ಟ್ ಪಂದ್ಯವಾಗಿದೆ. ಟೆಸ್ಟ್ ಸರಣಿಯ ನಂತರ, ಮೊದಲ ಏಕದಿನ ಪಂದ್ಯವನ್ನು ಜೂನ್ 27 ರಂದು ಬ್ರಿಸ್ಟಲ್‌ನಲ್ಲಿ, ಎರಡನೇ ಏಕದಿನವನ್ನು ಜೂನ್ 30 ರಂದು ಟೊಂಟನ್‌ನಲ್ಲಿ ಮತ್ತು ಜುಲೈ 3 ರಂದು ವೋರ್ಸೆಸ್ಟರ್‌ನಲ್ಲಿ ಮೂರನೇ ಏಕದಿನ ಪಂದ್ಯವನ್ನು ಆಡಲಾಗುವುದು. ಇದರ ನಂತರ ಜುಲೈ 9 ರಿಂದ 15 ರವರೆಗೆ ಮೂರು ಪಂದ್ಯಗಳ ಟಿ 20 ಸರಣಿ ನಡೆಯಲಿದೆ.

ಇದನ್ನೂ ಓದಿ - "ಕ್ರಿಕೆಟರ್ ಮಿಥಾಲಿ ರಾಜ್ ಯಶಸ್ಸಿನ ಕಥೆ ಮಹಿಳೆಯರಿಗೆ ಮಾತ್ರವಲ್ಲ ಪುರುಷ ಕ್ರಿಕೆಟಿಗರಿಗೂ ಸ್ಫೂರ್ತಿ"

ಟೆಸ್ಟ್ ಮತ್ತು ಏಕದಿನ ಪಂದ್ಯಗಳ ತಂಡ ಹೀಗಿದೆ: 
ಮಿಥಾಲಿ ರಾಜ್ (Mithali Raj) (ಕ್ಯಾಪ್ಟನ್), ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ವೈಸ್ ಕ್ಯಾಪ್ಟನ್), ಪೂನಂ ರೌತ್, ಪ್ರಿಯಾ ಪುನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್ ಮತ್ತು ರಾಧಾ ಯಾದವ್.

ಟಿ 20 ಸರಣಿಯ ಭಾರತೀಯ ಮಹಿಳಾ ತಂಡ ಹೀಗಿದೆ: 
ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಸ್ಮೃತಿ ಮಂಧಾನಾ (ವೈಸ್ ಕ್ಯಾಪ್ಟನ್), ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್, ಹಾರ್ಲಿನ್ ಡಿಯೋಲ್, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್ ಮತ್ತು ಸಿಮ್ರಾನ್ ದಿಲ್ ಬಹದ್ದೂರ್.

ಇದನ್ನೂ ಓದಿ - ICC Test Team rankings: ಟೆಸ್ಟ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಭಾರತ ತಂಡ

England Women vs India Women ವೇಳಾ ಪಟ್ಟಿ (Test, ODI & T20I)
>> ಜೂನ್ 16-19 - ಮೊದಲ ಟೆಸ್ಟ್ ಪಂದ್ಯ, ಬ್ರಿಸ್ಟಲ್ (ಮಧ್ಯಾಹ್ನ 3.30 ರಿಂದ)

>> ಜೂನ್ 27 - ಮೊದಲ ಏಕದಿನ ಪಂದ್ಯ, ಬ್ರಿಸ್ಟಲ್ (ಮಧ್ಯಾಹ್ನ 3.30 ರಿಂದ)

>> ಜೂನ್ 30 - ಎರಡನೇ ಏಕದಿನ, ಟೌಂಟನ್ (ಸಂಜೆ 6.30 ರಿಂದ)

>> ಜುಲೈ 3 - ಮೂರನೇ ಏಕದಿನ ಪಂದ್ಯ, ವೋರ್ಸೆಸ್ಟರ್ (ಮಧ್ಯಾಹ್ನ 3)

>> ಜುಲೈ 9 - ಮೊದಲ ಟಿ 20 ಪಂದ್ಯ, ನಾರ್ಥಾಂಪ್ಟನ್ (ರಾತ್ರಿ 11 ರಿಂದ)

>> 11 ಜುಲೈ - ಎರಡನೇ ಟಿ 20 ಪಂದ್ಯ, ಹೋವ್ (ಸಂಜೆ 7 ರಿಂದ)

>> ಜುಲೈ 15 - ಮೂರನೇ ಟಿ 20 ಪಂದ್ಯ, ಚೆಲ್ಮ್ಸ್ಫೋರ್ಡ್ (ರಾತ್ರಿ 11 ರಿಂದ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News