India`s Richest Cricketer : ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರು ಯಾರು ಗೊತ್ತಾ? ಇವರ ನೆಟ್ ವರ್ತ್ ಸುಮಾರು 1100 ಕೋಟಿ..!
ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್(Yuvraj Singh) ಭಾರತದ ಐದನೇ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದು
ನವದೆಹಲಿ : ಭಾರತೀಯ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿ ನಿಧಿಸುವುದಕ್ಕೆ ತುಂಬಾ ಹಣವನ್ನು ನೀಡಲಾಗುತ್ತದೆ. ಇದಷ್ಟೇ ಅಲ್ಲದೆ ಜಾಹೀರಾತುಗಳ ಮೂಲಕ ಒಪ್ಪಂದ ಮಾಡಿಕೊಂಡು ಮತ್ತೆ ಕೆಲ ಕಂಪನಿಗಳ ಅಂಬಾಸಿಡರ್ ಆಗಿ ಕೂಡ ಹಣ ಗಳಿಸುತ್ತಾರೆ. ಭಾರತದ ಅಗ್ರಮಾನ್ಯ ಕ್ರಿಕೆಟಿಗರು ಹಲವಾರು ಜನಪ್ರಿಯ ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿ ಕೂಡ ಹೆಚ್ಚಿನ ಹಣ ಗಳಿಸುತ್ತಾರೆ.
ಭಾರತದ ಟಾಪ್ 5 ಶ್ರೀಮಂತ ಕ್ರಿಕೆಟಿಗರನ್ನ ನೋಡೋಣ ಬನ್ನಿ..
ಇದನ್ನೂ ಓದಿ : IND vs ENG: ಇಂಗ್ಲೆಂಡ್ ಆಟಗಾರರ ಜೀವನ ನರಕವಾಗಬೇಕು; ಕೊಹ್ಲಿ ಹೇಳಿಕೆ ವೈರಲ್..!
ಸಚಿನ್ ತೆಂಡೂಲ್ಕರ್
ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್(Sachin Tendulkar) 1090 ಕೋಟಿ ರೂ. ನೆಟ್ ವರ್ತ್ ಹೊಂದಿರುವ ಭಾರತ ಮಾತ್ರವಲ್ಲ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ. ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರೂ ಅವರು ಇನ್ನೂ ಹಲವಾರು ಬ್ರಾಂಡ್ ಗಳ ಅಂಬಾಸಿಡರ್ ಮತ್ತು ಪ್ರಾಯೋಜಕತ್ವ ಒಪ್ಪಂದಗಳಿಂದ ಹಣ ಗಳಿಸುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ
767 ಕೋಟಿ ರೂ. ನೆಟ್ ವರ್ತ್ ಹೊಂದಿರುವ ಟೀಮ್ ಇಂಡಿಯಾ(Team India) ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ವಿಶ್ವದ ಎರಡನೇ ಶ್ರೀಮಂತ ಕ್ರಿಕೆಟಿಗರಾಗಿದ್ದರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಐಪಿಎಲ್ ಟೀಮ್ ಆದ CSK ಕ್ಯಾಪಟನ್ ಕೂಡ ಆಗಿದ್ದರೆ. ಐಪಿಎಲ್‌ನಲ್ಲಿ ಬಹಳಷ್ಟು ಬ್ರ್ಯಾಂಡ್‌ಗಳ ಅಂಬಾಸಿಡರ್ ಕೂಡ ಆಗಿದ್ದಾರೆ.
ಇದನ್ನೂ ಓದಿ : T20 World Cup: ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ?
ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) 638 ಕೋಟಿ ನೆಟ್ ವರ್ತ್ ಹೊಂದಿರುವ ಭಾರತದ ಮೂರನೇ ಶ್ರೀಮಂತ ಕ್ರಿಕೆಟಿಗ. ಕೊಹ್ಲಿ ಫ್ಯಾಶನ್ ಬ್ರ್ಯಾಂಡ್ ಗಳಾದ ವ್ರೋಗನ್ ಮತ್ತು ಒನ್ 8 (ಪೂಮಾ ಜೊತೆ ಪಾಲುದಾರಿಕೆ) ಯ ಹೆಮ್ಮೆಯ ಮಾಲೀಕ ಕೂಡ ಆಗಿದ್ದಾರೆ.
ವೀರೇಂದ್ರ ಸೆಹ್ವಾಗ್
ಟೀಂ ಇಂಡಿಯಾ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್(Virender Sehwag) 277 ಕೋಟಿ ನೆಟ್ ವರ್ತ್ ಹೊಂದಿರುವ ಭಾರತದ ನಾಲ್ಕನೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.
ಇದನ್ನೂ ಓದಿ : Heartbreaking!: ಎಂ.ಎಸ್.ಧೋನಿ ಭೇಟಿಯಾಗಲು 1,400 ಕಿ.ಮೀ ನಡೆದುಹೋದ ಅಭಿಮಾನಿ..!
ಯುವರಾಜ್ ಸಿಂಗ್
ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್(Yuvraj Singh) ಭಾರತದ ಐದನೇ ಅತ್ಯಂತ ಶ್ರೀಮಂತ ಕ್ರಿಕೆಟಿಗರಾಗಿದ್ದು, ಅವರ ಆಸ್ತಿ ಮೌಲ್ಯ ಸುಮಾರು 245 ಕೋಟಿ ರೂ. ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ