Most Successful Captain in ICC: ಕ್ರಿಕೆಟ್‌ನಲ್ಲಿ ಶ್ರೇಷ್ಠತೆಯ ಉಲ್ಲೇಖ ಬಂದಾಗಲೆಲ್ಲಾ, ಡಾನ್ ಬ್ರಾಡ್‌ಮನ್ ಹೆಸರು ಮೊದಲು ಬರುತ್ತದೆ. ಅದರ ನಂತರ ಗ್ಯಾರಿ ಸೋಬರ್ಸ್, ವಿವಿಯನ್ ರಿಚರ್ಡ್ಸ್, ಸುನಿಲ್ ಗವಾಸ್ಕರ್, ಕಪಿಲ್ ದೇವ್, ಇಯಾನ್ ಬೋಥಮ್, ರಿಚರ್ಡ್ ಹ್ಯಾಡ್ಲಿ, ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ಗ್ಲೆನ್ ಮೆಕ್‌’ಗ್ರಾತ್ ಹೀಗೆ ಹತ್ತು ಹಲವಾರು ಹೆಸರುಗಳು ಬರುತ್ತೆ. ಆದರೆ ಮಹಿಳಾ ಆಟಗಾರ್ತಿಯ ಹೆಸರು ಬರುವುದೇ ಇಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 0, 0, 0, 0, 0, 0, 0… ಕೇವಲ 2 ಎಸೆತ...ಮುಗಿದ ಟಿ-20 ಪಂದ್ಯ! ಕ್ರಿಕೆಟ್ ಇತಿಹಾಸದಲ್ಲೇ ನಡೆದಿಲ್ಲ ಇಂಥಾ ಕಳಪೆ ಆಟ!


ಬಹುಶಃ ಈ ಪಟ್ಟಿಯಲ್ಲಿ ಮೆಗ್ ಲ್ಯಾನಿಂಗ್, ಅಲಿಸ್ಸಾ ಹೀಲಿ, ಆಲಿಸ್ ಪೆರ್ರಿ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಕ್ಯಾಥರೀನ್ ಬ್ರಂಟ್, ಚಾರ್ಲೊಟ್ ಎಡ್ವರ್ಡ್ಸ್ ಅವರ ಹೆಸರುಗಳನ್ನು ಸೇರಿಸಬಹುದು. ಇವೆಲ್ಲದರ ಹೊರತಾಗಿ ತನ್ನ ದೇಶಕ್ಕಾಗಿ 5 ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಮೆಗ್ ಲ್ಯಾನಿಂಗ್ ಬಗ್ಗೆ ನಿಮಗೆ ತಿಳಿದಿದೆಯೇ? ಇಂದು ನಾವು ಆಸ್ಟ್ರೇಲಿಯದ ಮಹಿಳಾ ತಂಡವನ್ನು ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ ಮೆಗ್ ಲ್ಯಾನಿಂಗ್ ಬಗ್ಗೆ ಮಾತನಾಡಲಿದ್ದೇವೆ.


ಕ್ರಿಕೆಟ್ ಇತಿಹಾಸದಲ್ಲಿ ನಾಯಕರೊಬ್ಬರು 5 ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವುದು ಇದೇ ಮೊದಲು. ಮೆಗ್ ಲ್ಯಾನಿಂಗ್ ಈ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ಚಿನ್ನ ಗೆದ್ದ ನಂತರ ಲ್ಯಾನಿಂಗ್ ದೀರ್ಘ ವಿರಾಮ ತೆಗೆದುಕೊಂಡರು. ಆ ಬಳಿಕ ಎಂಟ್ರಿಕೊಟ್ಟ ಅವರು ತಮ್ಮ ತಂಡವನ್ನು ಮತ್ತೆ ವಿಶ್ವ ಚಾಂಪಿಯನ್ ಆಗಿ ಮಾಡಿದರು.


ಮಹಿಳಾ ಟಿ20 ವಿಶ್ವಕಪ್‌’ನ ಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಟಿ20 ವಿಶ್ವಕಪ್ ವಶಪಡಿಸಿಕೊಂಡಿದೆ. ಲ್ಯಾನಿಂಗ್ ನಾಯಕನಾಗಿ ಐದನೇ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದರು. ಇದರೊಂದಿಗೆ ಅವರು ನಾಯಕತ್ವದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ರಿಕಿ ಪಾಂಟಿಂಗ್ ಅವರನ್ನು ಬೀಟ್ ಮಾಡಿದ್ದಾರೆ. ರಿಕಿ ಪಾಂಟಿಂಗ್ ನಾಯಕನಾಗಿ 4 ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ ಮತ್ತು ಧೋನಿ ನಾಯಕನಾಗಿ 3 ಪ್ರಶಸ್ತಿ ಗೆದ್ದಿದ್ದಾರೆ.


ಇದನ್ನೂ ಓದಿ: Virat Kohli : ಇಂದೋರ್ ಟೆಸ್ಟ್‌ನಲ್ಲಿ 'ಟ್ರಿಪಲ್ ಸೆಂಚುರಿ' ಸಿಡಿಸಲಿದ್ದಾರೆ ವಿರಾಟ್ ಕೊಹ್ಲಿ!


ಮೆಗ್ ಲ್ಯಾನಿಂಗ್ ಅವರು 2014 ರಲ್ಲಿ ಆಸ್ಟ್ರೇಲಿಯಾದ ಮಹಿಳಾ ತಂಡದ ನಾಯಕಿಯಾಗಿದ್ದರು. ಮೆಗ್ ಲ್ಯಾನಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2014, 2018, 2020, 2023ರಲ್ಲಿ ಟಿ20 ವಿಶ್ವಕಪ್ ಗೆದ್ದಿದೆ. ಒಂದು ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.