Lionel Messi Retirement: 2022ರ ಫಿಫಾ ವಿಶ್ವಕಪ್ ಫೈನಲ್ ನಲ್ಲಿ ಅರ್ಜೆಂಟೀನಾಗಾಗಿ ಆಡುತ್ತಿರುವ ತನ್ನ ಕೊನೆಯ ಪಂದ್ಯ ಎಂದು ಲಿಯೋನೆಲ್ ಮೆಸ್ಸಿ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ 3-0 ಗೋಲುಗಳಿಂದ ಕ್ರೊಯೇಷಿಯಾವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಪಂದ್ಯಾವಳಿಯಲ್ಲಿ ಇದುವರೆಗೆ ಐದು ಗೋಲುಗಳನ್ನು ಗಳಿಸಿರುವ ಮೆಸ್ಸಿ, ವಿಶ್ವಕಪ್‌ಗಳಲ್ಲಿ ಅರ್ಜೆಂಟೀನಾದ ಪ್ರಮುಖ ಗೋಲ್‌ಸ್ಕೋರರ್ ಆಗಿದ್ದಾರೆ. 35ರ ಹರೆಯದ ಮೆಸ್ಸಿ ಇಲ್ಲಿಯವರೆಗೆ 11 ವಿಶ್ವಕಪ್ ಗೋಲುಗಳನ್ನು ಬಾರಿಸಿದ್ದಾರೆ.


COMMERCIAL BREAK
SCROLL TO CONTINUE READING

"ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಮೆಸ್ಸಿ ಅರ್ಜೆಂಟೀನಾದ ಮಾಧ್ಯಮ ಔಟ್‌ಲೆಟ್ ಡಿಯಾರಿಯೊ ಡಿಪೋರ್ಟಿವೊ ಓಲೆಗೆ ತಿಳಿಸಿದ್ದಾರೆ.


ಇದನ್ನೂ ಓದಿ: FIFA World Cup: The Hand of God ಬಗ್ಗೆ ನಿಮಗೆಷ್ಟು ಗೊತ್ತು?


"ಮುಂದಿನ ಪಯಣಕ್ಕೆ ಇನ್ನೂ ಹಲವು ವರ್ಷಗಳಿವೆ. ಆದರೆ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಈ ಸಂದರ್ಭ ಅತ್ಯುತ್ತಮವಾಗಿದೆ” ಎಂದು ಹೇಳಿದ್ದಾರೆ. "ಅರ್ಜೆಂಟೀನಾ ಮತ್ತೊಮ್ಮೆ ವಿಶ್ವಕಪ್ ಫೈನಲ್‌ನಲ್ಲಿದೆ. ಅದನ್ನು ಆನಂದಿಸಿ!" ಎಂದು ಮೆಸ್ಸಿ ಹೇಳಿದರು.


" ಇತರ ಉತ್ತಮಗಳ ನಡುವೆ ನಾವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಆದರೆ ಇಂದು ನಾವು ಅದ್ಭುತವಾದದ್ದನ್ನು ಅನುಭವಿಸುತ್ತಿದ್ದೇವೆ" ಎಂದು ಹೇಳಿದರು.


ಅರ್ಜೆಂಟೀನಾ ಪಂದ್ಯಾವಳಿಯ ಮೆಚ್ಚಿನ ತಂಡಗಳಲ್ಲಿ ಒಂದಾಗಿ ಕತಾರ್‌ಗೆ ಆಗಮಿಸಿತು. ಆದರೆ ತಮ್ಮ ಆರಂಭಿಕ ಗುಂಪಿನ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 1-2 ರಿಂದ ಸೋಲು ಕಂಡಿತ್ತು. ಎರಡು ಬಾರಿಯ ಚಾಂಪಿಯನ್ ಅರ್ಜೆಂಟಿನಾ ಈಗ ಭಾನುವಾರ ಲುಸೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಹೋಲ್ಡರ್ಸ್ ಫ್ರಾನ್ಸ್ ವಿರುದ್ಧ ಸೆಣಸಲಿದೆ.


ಪತ್ರಕರ್ತನ ಕಣ್ಣೀರಿಗೆ ಮೆಸ್ಸಿ ಪ್ರತಿಕ್ರಿಯೆ:


ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಫುಟ್‌ಬಾಲ್ ಲೋಕದ ಸೂಪರ್‌ಸ್ಟಾರ್. ಅರ್ಜೆಂಟೀನಾವನ್ನು FIFA ವಿಶ್ವಕಪ್ 2022 ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಇನ್ನು ಅರ್ಜೆಂಟೀನಾ ಫೈನಲ್‌ಗೆ ಲಗ್ಗೆ ಇಡುತ್ತಿದ್ದಂತೆ, ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ವರದಿಗಾರನೋರ್ವ ಭಾವುಕನಾಗಿದ್ದಾನೆ.


"ನಾನು ನಿಮಗೆ ಕೊನೆಯದಾಗಿ ಹೇಳಲು ಬಯಸುತ್ತೇನೆ. ಇದು ಪ್ರಶ್ನೆಯಲ್ಲ. ವಿಶ್ವಕಪ್ ಫೈನಲ್ ಬರಲಿದ್ದು, ನಾವೆಲ್ಲರೂ [ಅರ್ಜೆಂಟೀನಾದವರು] ಕಪ್ ಗೆಲ್ಲಲು ಬಯಸುತ್ತೇವೆ" ಎಂದು ವರದಿಗಾರ ಸಂದರ್ಶನದಲ್ಲಿ ಹೇಳಿದರು.


"ಫಲಿತಾಂಶಗಳು ಏನೇ ಇರಲಿ, ನಿಮ್ಮಿಂದ ಯಾರೂ ಅವುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನೀವು ಅರ್ಜೆಂಟೀನಾದ ಪ್ರತಿಯೊಬ್ಬರೊಂದಿಗೆ ಪ್ರತಿಧ್ವನಿಸಿದ ಸತ್ಯ. ನಾನು ಗಂಭೀರವಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ನಿಜವಾಗಿ, ನೀವು ಪ್ರತಿಯೊಬ್ಬರ ಜೀವನದಲ್ಲಿ ನಿಮ್ಮ ಛಾಪು ಮೂಡಿಸಿದ್ದೀರಿ. ಅದು ನನಗೆ ವಿಶ್ವಕಪ್ ಗೆಲುವುಗಳನ್ನು ಮೀರಿಸುವಣಂತಹದ್ದು ಎಂದನಿಸುತ್ತದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: FIFA World Cup 2022: ಮೊರೊಕೊ ಕನಸು ಭಗ್ನಗೊಳಿಸಿದ ಫ್ರಾನ್ಸ್: ಫೈನಲ್ ನಲ್ಲಿ ಅರ್ಜೆಂಟಿನಾ ಮುಖಾಮುಖಿ


"ಯಾರೂ ನಿಮ್ಮಿಂದ ಏನನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ಬಹಳಷ್ಟು ಜನರಿಗೆ ತಂದ ಸಂತೋಷಕ್ಕಾಗಿ ಇದು ನನ್ನ ಕೃತಜ್ಞತೆಯಾಗಿದೆ" ಎಂದು ಅವರು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.