ಫಿಫಾ ವಿಶ್ವಕಪ್ ಪುಟ್ಬಾಲ್: ಪ್ರಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ಮೆಕ್ಸಿಕೊ
ಮಾಸ್ಕೋ: ಗೆಲುವಿನಯಾನ ಮುಂದುವರೆಸಿರುವ ಮೆಕ್ಸಿಕೋ ತಂಡವು ಶನಿವಾರದಂದು ದಕ್ಷಿಣ ಕೊರಿಯಾ ವಿರುದ್ದ ಭರ್ಜರಿ 2-1 ರ ಅಂತರದಲ್ಲಿ ಗೆಲುವನ್ನು ಸಾಧಿಸಿದೆ.ಆ ಮೂಲಕ ಫಿಫಾ ವಿಶ್ವಕಪ್ ಪುಟ್ಬಾಲ್ ನ ಫ್ರೀ ಕ್ವಾರ್ಟರ್ ಫೈನಲ್ ಹಂತಕ್ಕೆ ಕಾಲಿಟ್ಟಿದೆ.
26ನೇ ನಿಮಿಷದಲ್ಲಿ ಕಾರ್ಲೋಸ್ ವೆಲಾಗಳಿಸಿದ ಮತ್ತು 66ನೇ ನಿಮಿಷದಲ್ಲನ ಗೋಲ್ ನೆರವಿಂದ ಮೆಕ್ಸಿಕೊ ತಂಡವು ಫಿಫಾ ವಿಶ್ವಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಜಯ ಸಾಧಿಸಿತು. ಆ ಮೂಲಕ ಒಟ್ಟು ಎರಡು ಪಂದ್ಯಗಳಲ್ಲಿ ಒಟ್ಟು ಆರು ಅಂಕ ಕಲೆ ಹಾಕಿ ಮೆಕ್ಸಿಕೊ ತಂಡವು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ 1-0 ರಿಂದ ಮುನ್ನಡೆ ಇದ್ದ ಮೆಕ್ಸಿಕೊ ದ್ವಿತೀಯಾರ್ಧದಲ್ಲಿಯೂ ಮತ್ತೊಂದು ಗೋಲ್ ಗಳಿಸುವ ಮೂಲಕ ಗೆಲುವಿನತ್ತ ಹೆಜ್ಜೆ ಹಾಕಿತು. ಪಂಧ್ಯದ ಮೊದಲಾರ್ಧದಲ್ಲಿ ಕೊರಿಯಾ ಆಟಗಾರರು ಮಾಡಿದ ತಪ್ಪಿನಿಂದಾಗಿ ಪೆನಾಲ್ಟಿ ಅವಕಾಶ ಪಡೆದ ಮೆಕ್ಸಿಕೊ ತಂಡದ ಕಾರ್ಲೋಸ್ ಸುಲಭವಾಗಿ ಗೋಲ್ ಗಳಿಸಿದರು.