ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿ(Indian Premier League 2022)ಯ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 23 ರನ್‌ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಉತ್ತರವಾಗಿ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಸತತ 2ನೇ ಸೋಲು ಕಂಡ ಬಳಿಕ ನಿರಾಸೆಗೊಳಗಾದ ಮುಂಬೈ ನಾಯಕ ರೋಹಿತ್ ಶರ್ಮಾ(Rohit Sharma) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಲಿನ ನಂತರ ಕೋಪಗೊಂಡ ಹಿಟ್‍ಮ್ಯಾನ್!


ಮೊದಲ ಪಂದ್ಯದಲ್ಲಿಯೇ ದೆಹಲಿ ಕ್ಯಾಪಿಟಲ್ಸ್(Delhi Capitals) ಎದುರು 4 ವಿಕೆಟ್‍ಗಳ ಹೀನಾಯ ಸೋಲಿನ ಬಳಿಕ ಮುಂಬೈ ಗೆಲ್ಲುವ ವಿಶ್ವಾಸದಲ್ಲಿತ್ತು. ಪ್ರಸಕ್ತ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯುವ ಉತ್ಸಾಹದಿಂದಲೇ ಕಣಕ್ಕಿಳಿದ ರೋಹಿತ್ ಪಡೆಗೆ ಮತ್ತೊಮ್ಮೆ ನಿರಾಸೆಯಾಯಿತು. ರಾಜಸ್ಥಾನ್(Rajasthan Royals) ನೀಡಿದ್ದ194 ರನ್‌ಗಳ ಗುರಿಯನ್ನು ತಮ್ಮ ತಂಡ ಚೇಸ್ ಮಾಡಬೇಕಿತ್ತು ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಮುಂಬೈ ತಂಡ 23 ರನ್‌ಗಳಿಂದ ಸೋಲು ಕಾಣಬೇಕಾಯಿತು. ಈ ಸಂದರ್ಭದಲ್ಲಿ ಗಾಯಗೊಂಡ ಹಿರಿಯ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್(Suryakumar Yadav) ಅನುಪಸ್ಥಿತಿಯು ಸ್ಪಷ್ಟವಾಗಿ ಗೋಚರಿಸಿತು.


ಇದನ್ನೂ ಓದಿ: IPL 2022: ತೀವ್ರ ಕುತೂಹಲ ಕೆರಳಿಸಿದ ಎಂ.ಎಸ್.ಧೋನಿ – ಗೌತಮ್ ಗಂಭಿರ್ ಭೇಟಿ!


ಸೂರ್ಯಕುಮಾರ್ ಯಾದವ್ ಅವರ ಕೈಗೆ ಆಗಿರುವ ಗಾಯವು ಸಂಪೂರ್ಣವಾಗಿ ಚೇತರಿಕೆ ಕಾಣುವವರೆಗೂ ಅವರನ್ನು ಆಡಿಸುವುದಿಲ್ಲವೆಂದು ರೋಹಿತ್ ಹೇಳಿದ್ದಾರೆ. ಇದೇ ವೇಳೆ ತಮ್ಮ ತಂಡ ಮತ್ತೊಮ್ಮೆ ಎಡವಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಹಳೆ ಪಂದ್ಯದಲ್ಲಿ ಮಾಡಿದ ತಪ್ಪುಗಳೇ ಪುನರಾವರ್ತನೆಯಾಗಿದ್ದಕ್ಕೆ ಅವರು ಕೋಪಿಸಿಕೊಂಡಿದ್ದಾರೆ.  


ಟಾರ್ಗೆಟ್ ಚೇಸ್ ಮಾಡಬೇಕಿತ್ತು


ಪಂದ್ಯದ ನಂತರ ಮಾತನಾಡಿದ ರೋಹಿತ್, ‘ದೆಹಲಿ ಕ್ಯಾಪಿಟಲ್ಸ್(Delhi Capitals) ಉತ್ತಮವಾಗಿ ಬ್ಯಾಟಿಂಗ್ ಮಾಡಿ 193 ರನ್ ಗಳಿಸಿದರು. ಬಟ್ಲರ್ ಉತ್ತಮ ಇನ್ನಿಂಗ್ಸ್ ಆಡಿದರು, ನಾವು ಅವರನ್ನು ಕಡಿಮೆ ರನ್‍ಗಳಿಗೆ ಕಟ್ಟಿಹಾಕಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆವು. ಆದರೆ ನನ್ನ ಪ್ರಕಾರ ಈ ಪಿಚ್‌ನಲ್ಲಿ 193 ರನ್‌ಗಳನ್ನು ನಾವು ಚೇಸ್ ಮಾಡಬೇಕಿತ್ತು. ಕೊನೆಯ 7 ಓವರ್‌ಗಳಲ್ಲಿ 70 ರನ್‌ಗಳು ಬೇಕಾದಾಗ ಬ್ಯಾಟ್ಸ್‌ಮನ್‌ಗಳು ನೋಡಿಕೊಂಡು ಆಡಬೇಕಿತ್ತು. ಇದರಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ. ಹಳೆಯ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ಪಂದ್ಯಗಳಲ್ಲಿ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: IPL 2022: ಕ್ರಿಕೆಟ್ ಅಭಿಮಾನಿಗಳಿಗೆ ಯುಗಾದಿ ಉಡುಗೊರೆ


ಕೊನೆಯವರೆಗೂ ಬ್ಯಾಟಿಂಗ್ ಮಾಡಿದ್ದರೆ ಗೆಲ್ಲುತ್ತಿದ್ದೇವು


ಪಂದ್ಯದ ಸಕಾರಾತ್ಮಕ ಅಂಶಗಳ ಕುರಿತು ಮಾತನಾಡಿದ ರೋಹಿತ್(Rohit Sharma), ‘ಬುಮ್ರಾ ಉತ್ತಮವಾಗಿ ಬೌಲಿಂಗ್ ಮಾಡಿದರು. ಮಿಲ್ಸ್ ಮತ್ತು ತಿಲಕ್ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಇಶಾನ್ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಅವರಿಬ್ಬರಲ್ಲಿ ಯಾರಾದರೂ ಕೊನೆಯವರೆಗೂ ಬ್ಯಾಟ್ ಮಾಡಿದ್ದರೆ ಗೆಲುವು ನಮ್ಮದಾಗುತ್ತಿತ್ತು. 2 ಪಂದ್ಯಗಳಲ್ಲಿ ಸೋಲು ಕಂಡಿದ್ದಕ್ಕೆ ಬೇಸರವಿದೆ. ಮುಂದಿನ ಪಂದ್ಯಗಳನ್ನು ಗೆಲ್ಲುವ ನಿಟ್ಟಿನಲ್ಲಿ ನಾವು ಪ್ಲಾನ್ ಮಾಡಬೇಕಾಗಿದೆ ಎಂದು ರೋಹಿತ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.