Philip Hughes Cricketer: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಫಿಲಿಪ್ ಹ್ಯೂಸ್ 2014ರ ಇದೇ ದಿನ ಅಂದರೆ ನವೆಂಬರ್ 27 ರಂದು ನಿಧನರಾಗಿದ್ದರು. ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ 63 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಬೌನ್ಸರ್‌ನಿಂದ ತಲೆಗೆ ಪೆಟ್ಟು ಬಿದ್ದು ಪ್ರಜ್ಞಾಹೀನವಾಗಿ ಕುಸಿದುಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಎರಡು ದಿನಗಳ ನಂತರ ಚಿಕಿತ್ಸೆ ಫಲಿಸದೆ ನಿಧನರಾಗಿದ್ದರು. ಇಂದಿಗೆ ಹ್ಯೂಸ್‌ ಇಹಲೋಕ ತ್ಯಜಿಸಿ 10 ವರ್ಷಗಳಾಗಿದ್ದು, ಮಾಜಿ ಕ್ರಿಕೆಟಿಗರು ಸೇರಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅವರನ್ನು ನೆನಪಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಚಳಿಗಾಲದಲ್ಲಿ ಕಡಿಮೆ ನೀರು ಕುಡಿದ್ರೆ ಮೂಳೆಗಳ ಮೇಲೆ ಕೆಟ್ಟ ಪರಿಣಾಮ; ಸೊಂಟ & ಕೀಲು ನೋವಿಗೆ ಪರಿಹಾರ!


ಕ್ರಿಕೆಟ್ ಆಸ್ಟ್ರೇಲಿಯಾ ತನ್ನ X ಖಾತೆಯಲ್ಲಿ ಫಿಲಿಪ್ ಹ್ಯೂಸ್ ಅವರ ನೆನಪಿಗಾಗಿ ಅವರ ಫೋಟೋವನ್ನು ಹಂಚಿಕೊಂಡಿದೆ, "ಫಾರೆವರ್ ನಾಟ್ ಔಟ್ ಆನ್ 63. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ. 10 ವರ್ಷಗಳ ನಂತರವೂ ನಾವು ಫಿಲಿಪ್ ಹ್ಯೂಸ್ ಅವರನ್ನು ನೆನಪಿಸಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದೆ.


ಮಾಜಿ ಕ್ರಿಕೆಟಿಗ ಮತ್ತು ಹ್ಯೂಸ್‌ಗೆ ಆತ್ಮೀಯ ಎಂದು ಹೇಳಲಾದ ಮೈಕಲ್ ಕ್ಲಾರ್ಕ್ ಕೂಡ ಫಿಲಿಪ್ ಹ್ಯೂಸ್ ಅವರನ್ನು ನೆನಪಿಸಿಕೊಂಡಿದ್ದಾರೆ. ಕ್ಲಾರ್ಕ್ ತಮ್ಮ ಪೋಸ್ಟ್‌ನಲ್ಲಿ ʼ408ʼ ಎಂದು ಬರೆದುಕೊಂಡಿದ್ದಾರೆ. ಅಂದರೆ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ ಆಡಿದ್ದ 408 ನೇ ಆಟಗಾರ ಹ್ಯೂಸ್‌ ಆಗಿದ್ದರು.


ಇದನ್ನೂ ಓದಿ: ಅಗ್ಗದ ಬೆಲೆಯಲ್ಲಿ ವಿಮಾನ ಯಾನಕ್ಕೆ ಅವಕಾಶ ! ಹೀಗೆ ಟಿಕೆಟ್ ಬುಕ್ ಮಾಡಿದರೆ ಸಿಗುವುದು ಆಫರ್ 


ಫಿಲಿಪ್ ಹ್ಯೂಸ್ 26 ಟೆಸ್ಟ್ ಪಂದ್ಯಗಳ 49 ಇನ್ನಿಂಗ್ಸ್‌ಗಳಲ್ಲಿ ಒಟ್ಟು 1535 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 160 ಆಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ 32.65 ಸರಾಸರಿಯಲ್ಲಿ 3 ಶತಕ ಮತ್ತು 7 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, 25 ODI ಪಂದ್ಯಗಳಲ್ಲಿ 826 ರನ್ ಗಳಿಸಿದರು, ಇದರಲ್ಲಿ ಎರಡು ಶತಕಗಳು ಮತ್ತು 4 ಅರ್ಧ ಶತಕಗಳು ಸೇರಿವೆ. ಅವರ ಗರಿಷ್ಠ ಸ್ಕೋರ್ ಔಟಾಗದೆ 138 ರನ್ ಆಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.