Michael Vaughan Statement: ವಿರಾಟ್ ಕೊಹ್ಲಿ ಭಾರತದ ನಾಯಕನಾಗಿದ್ದರೆ, ಆತಿಥೇಯ ತಂಡವು ಹೈದರಾಬಾದ್‌’ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌’ನಲ್ಲಿ ಸೋಲನ್ನು ಎದುರಿಸುತ್ತಿರಲಿಲ್ಲ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮೊದಲ ಇನ್ನಿಂಗ್ಸ್‌’ನಲ್ಲಿ 190 ರನ್‌’ಗಳ ಪ್ರಬಲ ಮುನ್ನಡೆ ಸಾಧಿಸಿದ್ದರೂ, ಕೊಹ್ಲಿ ಇಲ್ಲದೆ ಆಡುತ್ತಿರುವ ಭಾರತ, ಸ್ಪಿನ್ ಸ್ನೇಹಿ ಪರಿಸ್ಥಿತಿಯಲ್ಲಿ 28 ರನ್‌’ಗಳ ಸೋಲನ್ನು ಎದುರಿಸಬೇಕಾಯಿತು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಇದು ಹೈದರಾಬಾದ್‌’ನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಸೋಲು.


ಇದನ್ನೂ ಓದಿ: ಆಧಾರ್ ಕಾರ್ಡ್‌ನಿಂದ 2% ಬಡ್ಡಿಯಲ್ಲಿ Loan ಸಿಗುತ್ತಾ! ಇಲ್ಲಿದೆ ಸತ್ಯಾಸತ್ಯತೆ!


ಯೂಟ್ಯೂಬ್ ಚಾನೆಲ್‌’ನಲ್ಲಿ ಮಾತನಾಡಿದ ಮೈಕೆಲ್ ವಾನ್, “ಟೆಸ್ಟ್ ಕ್ರಿಕೆಟ್‌’ನಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವವನ್ನು ಸಾಕಷ್ಟು ಮಿಸ್ ಮಾಡಿಕೊಂಡೆ” ಎಂದಿದ್ದಾರೆ.


ರೋಹಿತ್ ಕಳಪೆ ನಾಯಕತ್ವ!


ಪಂದ್ಯದ ವೇಳೆ ರೋಹಿತ್ ನಾಯಕತ್ವವನ್ನು ವಾನ್ ಟೀಕಿಸಿದ್ದರು. 'ರೋಹಿತ್ ಒಬ್ಬ ದಂತಕಥೆ ಮತ್ತು ಶ್ರೇಷ್ಠ ಆಟಗಾರ, ಆದರೆ ಅವರು ಸಂಪೂರ್ಣವಾಗಿ ಸೋತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕಳೆದ ವಾರ ಸರಣಿಯ ಆರಂಭಿಕ ಪಂದ್ಯದ ವೇಳೆ ರೋಹಿತ್ ಸಕ್ರಿಯವಾಗಿರಲಿಲ್ಲ. ಫೀಲ್ಡಿಂಗ್‌’ನಲ್ಲಿ ಅಥವಾ ಬೌಲಿಂಗ್‌’ನಲ್ಲಿ ಉತ್ತಮ ಬದಲಾವಣೆಗಳನ್ನು ಮಾಡುವಲ್ಲಿ ವಿಫಲವಾಗಿದ್ದಾರೆ ಎಂದನಿಸುತ್ತದೆ” ಎಂದು ಟೀಕಿಸಿದ್ದಾರೆ.


ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 231 ರನ್ ಗಳ ಗುರಿ ಬೆನ್ನತ್ತಿದ ಭಾರತದ ಬ್ಯಾಟ್ಸ್’ಮನ್ ಗಳು 202 ರನ್ ಗಳಿಗೆ ಆಲೌಟ್ ಆಗಿದ್ದರು. ಮೊದಲ ಇನಿಂಗ್ಸ್‌’ನಲ್ಲಿ ಅರ್ಧಶತಕ ಸಿಡಿಸಿದ್ದ ಜಡೇಜಾ, ರಾಹುಲ್ ಮತ್ತು ಯಶಸ್ವಿ ಎರಡನೇ ಇನ್ನಿಂಗ್ಸ್‌’ನಲ್ಲಿ ವಿಫಲವಾದರು.


ಇದನ್ನೂ ಓದಿ: Cricket: ನೀರು ಎಂದು ತಪ್ಪಾಗಿ ಆಸಿಡ್ ಕುಡಿದ ಭಾರತದ ಸ್ಟಾರ್ ಓಪನರ್! ಆಸ್ಪತ್ರೆಗೆ ದಾಖಲು


ಇಂಗ್ಲೆಂಡ್‌’ನ ಟಾಮ್ ಹಾರ್ಟ್ಲಿ ಎರಡನೇ ಇನ್ನಿಂಗ್ಸ್‌’ನಲ್ಲಿ 7 ಭಾರತೀಯ ಬ್ಯಾಟ್ಸ್‌ಮನ್‌’ಗಳನ್ನು ಪೆವಿಲಿಯನ್‌’ಗೆ ವಾಪಸ್ ಕಳುಹಿಸಿದರು. ರೋಹಿತ್ ಶರ್ಮಾ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಗರಿಷ್ಠ 39 ರನ್ ಗಳಿಸಿದರು. ಎರಡೂ ತಂಡಗಳು ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿವೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.