ಸಿಂಧು, ಸಾನಿಯಾ, ಸೈನಾ ಸಾಧನೆ ಸ್ಮರಿಸಿದ ಪ್ರಧಾನಿ ಮೋದಿ
ಹೈದರಾಬಾದ್: ಇಲ್ಲಿ ಮೂರು ದಿನಗಳ ಜಾಗತಿಕ ಉಧ್ಯಮಶಿಲತಾ ಸಮ್ಮೇಳನಕ್ಕಾಗಿ ಮಹಿಳಾ ಉದ್ಯಮಿಗಳ ಆಯೋಗದೊಂದಿಗೆ ಭಾರತಕ್ಕೆ ಆಗಮಿಸಿರುವ ಇವಾಂಕಾ ಟ್ರಂಪ್, ಪ್ರಧಾನಿ ಮೋದಿಯು ಹೊಂದಿರುವ ಮಹಿಳಾ ಸಶಕ್ತಿಕರಣದ ವಿಚಾರಗಳನ್ನು ಅದರಲ್ಲೂ ಮಾನವನ ಸಂಪೂರ್ಣ ಪ್ರಗತಿಯು ಅದು ಮಹಿಳೆಯರ ಪ್ರಗತಿಯ ಮೂಲಕವಾಗುವಂತದ್ದು ಎನ್ನುವ ಪ್ರಧಾನಿಯ ಮಾತುಗಳನ್ನು ಅವರು ಕೊಂಡಾಡಿದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ 'ಮಹಿಳೆಯು ಶಕ್ತಿಯ ಅವತಾರ,ಮತ್ತು ಶಕ್ತಿ ದೇವತೆಯ ಪ್ರತಿರೂಪವೆಂದರು ಆದ್ದರಿಂದ ನಮ್ಮ ದೇಶದ ಅಭಿವೃದ್ದಿಗೆ ಮಹಿಳೆಯ ಸಶಕ್ತೀಕರಣ ಅತಿ ಅವಶ್ಯಕವೆಂದರು.
ಇದೆ ಸಂಧರ್ಭದಲ್ಲಿ ಕ್ರೀಡಾ ಜಗತ್ತಿನಲ್ಲಿ ಭಾರತಿಯ ಮಹಿಳೆಯರ ಪಾತ್ರದ ಕುರಿತಾಗಿ ಮಾತನಾಡುತ್ತಾ 'ಹೈದರಬಾದ್ ಒಂದರಲ್ಲಿಯೇ ಸೈನಾ ನೆಹ್ವಾಲ್ ಪಿ.ವಿ.ಸಿಂಧು ಮತ್ತು ಸಾನಿಯಾ ಮಿರ್ಜಾ ರಂತಹ ಜಾಗತಿಕ ಕ್ರೀಡಾ ತಾರೆಗಳು ಈ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.