ಈಗಾಗಲೇ ಟಿ20 ವಿಶ್ವಕಪ್ ಪ್ರಾರಂಭವಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 23 ರಂದು ಪ್ರಾರಂಭವಾಗಲಿದೆ. ಈ ಮೂಲಕ ವಿಶ್ವಕಪ್ ಜರ್ನಿಯನ್ನು ಟೀಂ ಇಂಡಿಯಾ ಶುರು ಮಾಡಲಿದೆ. ಸದ್ಯ ಅಭ್ಯಾಸ ಪಂದ್ಯವನ್ನಾಡುತ್ತಿರುವ ಭಾರತ ಕಳೆದ ದಿನ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದೆ. ಇನ್ನು ಈ ಪಂದ್ಯದ ಕೊನೆಯ ಓವರ್ ನಲ್ಲಿ ಮೊಹಮ್ಮದ್ ಶಮಿ ಅಬ್ಬರಿಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs PAK: “ಪಾಕ್ ಪ್ರವಾಸ ಕೈಗೊಳ್ಳಲಿದೆ ಭಾರತ”: ಈ ಬಗ್ಗೆ ಜಯ್ ಶಾ ಹೇಳಿದ್ದೇ ಬೇರೆ!


ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಪ್ರಸ್ತುತ ಆಟವಾಡುತ್ತಿದೆ. ಆದರೆ ಆ ಕೊರತೆಯನ್ನು ಟೀಂ ಇಂಡಿಯಾದ ಮತ್ತೊಬ್ಬ ಸ್ಟಾರ್ ಆಟಗಾರ ತುಂಬುತ್ತಿದ್ದಾರೆ. ಹೌದು ಮೊಹಮ್ಮದ್ ಶಮಿ ಟೀಂ ಇಂಡಿಯಾ ದೊಡ್ಡ ಮ್ಯಾಚ್ ವಿನ್ನರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಿರ್ಣಾಯಕ ಅಂತಿಮ ಓವರ್ ನಲ್ಲಿ ಮೊಹಮ್ಮದ್ ಶಮಿ ಅಬ್ಬರಿಸಿದ್ದರು. ಕೊನೆಯ ಒಂದು ಓವರ್ ನಲ್ಲಿ 2,2,W,W,W,W ಪಡೆಯುವ ಮೂಲಕ ಟೀಂ ಇಂಡಿಯಾಗೆ ಗೆಲುವು ಲಭಿಸುವಂತೆ ಮಾಡಿದರು.


ಟೀಂ ಇಂಡಿಯಾದ ವಿಶ್ವಕಪ್ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಶಮಿ ಅದ್ಭುತವಾಗಿ ಆಟವಾಡಿದ್ದು, ಅವರ ಕೊನೆಯ ಓವರ್ ಹೇಗಿತ್ತು ಎಂಬುದನ್ನು ಇಲ್ಲಿ ನೋಡೋಣ.


ಮೊದಲನೇ ಬಾಲ್: ಯಾರ್ಕರ್ ಎಸೆದ ಚೆಂಡನ್ನು ಕಮ್ಮಿನ್ಸ್ ಅವರು 2 ರನ್ ಗೆ ಕನ್ವರ್ಟ್ ಮಾಡಿದರು


ಎರಡನೇ ಎಸೆತ: ಈ ಬಾಲ್ ಕೂಡ ಯಾರ್ಕರ್ ಎಸೆತವಾಗಿದ್ದು, ಕಮ್ಮಿನ್ಸ್ ಮಿಡ್ ಆನ್ ಏರಿಯಾದಲ್ಲಿ ಎರಡು ಕಲೆ ಹಾಕಿದರು.


ಮೂರನೇ ಎಸೆತ: ಶಮಿ ಎಸೆದ ಬಾಲ್ ನ್ನು ಕಮ್ಮಿನ್ಸ್ ಬೌಂಡರಿ ದಾಟಿಸಲು ಪ್ರಯತ್ನಿಸಿದರು. ಆದರೆ ಕೊಹ್ಲಿ ಬೌಂಡರಿ ಗೆರೆ ಬಳಿ ಗಾಳಿಯಲ್ಲಿ ಹಾರಿ ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದರು.


ನಾಲ್ಕನೇ ಎಸೆತ: ಅಸ್ಟೋನ್ ಅಗರ್ ರನ್ ಔಟ್


ಐದನೇ ಎಸೆತ: ಯಾರ್ಕರ್ ಬಾಲ್ ಮೂಲಕ ಜೋಶ್ ವಿಕೆಟ್ ಪತನ


ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಸ್ಟೇಡಿಯಂನಿಂದ ಮೈದಾನಕ್ಕೆ ಆಯತಪ್ಪಿ ಬಿದ್ದ ಮಗು: ಭಯಾನಕ ವಿಡಿಯೋ ನೋಡಿ


ಆರನೇ ಬಾಲ್: ಯಾರ್ಕರ್ ಮೂಲಕ ಕೇನ್ ರಿಚರ್ಡ್ ಸನ್ ಔಟಾದರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.