ಕ್ರಿಕೆಟ್ ಪಂದ್ಯದ ವೇಳೆ ಸ್ಟೇಡಿಯಂನಿಂದ ಮೈದಾನಕ್ಕೆ ಆಯತಪ್ಪಿ ಬಿದ್ದ ಮಗು: ಭಯಾನಕ ವಿಡಿಯೋ ನೋಡಿ

ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಕ್ಲಿಪ್‌ನಲ್ಲಿ, ಮಗು ತನ್ನ ಎರಡೂ ಪಾದಗಳ ಬ್ಯಾಲೆನ್ಸ್ ಕಳೆದುಕೊಂಡು ತಲೆಕೆಳಗಾಗಿ ಬಿದ್ದಿದೆ. ತಕ್ಷಣವೇ ಸ್ಥಳದಲ್ಲಿ ವ್ಯಕ್ತಿ ಓಡಿ ಬಂದು ಮಗುವನ್ನು ಕಾಪಾಡಿದ್ದಾರೆ.

Written by - Bhavishya Shetty | Last Updated : Oct 18, 2022, 04:00 PM IST
    • ಕ್ರಿಕೆಟ್ ಪಂದ್ಯದ ವೇಳೆ ಮಗುವೊಂದು ಆಯತಪ್ಪಿ ಕೆಳ ಬಿದ್ದಿದೆ
    • ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ನಡುವೆ ನಡೆಯುತ್ತಿದ್ದ ಟಿ 20 ವಿಶ್ವಕಪ್ ಪಂದ್ಯ
    • ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕ್ರಿಕೆಟ್ ಪಂದ್ಯದ ವೇಳೆ ಸ್ಟೇಡಿಯಂನಿಂದ ಮೈದಾನಕ್ಕೆ ಆಯತಪ್ಪಿ ಬಿದ್ದ ಮಗು: ಭಯಾನಕ ವಿಡಿಯೋ ನೋಡಿ title=
cricket accident

ಸೋಮವಾರ ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ನಡುವಿನ ಟಿ 20 ವಿಶ್ವಕಪ್ ಪಂದ್ಯವು ನಡೆಯುತ್ತಿತ್ತು, ಈ ಸಂದರ್ಭದಲ್ಲಿ ಮಗುವೊಂದು ಆಯತಪ್ಪಿ ಕೆಳ ಬಿದ್ದಿರುವ ಘಟನೆ ನಡೆಯಿತು. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: IND vs PAK: “ಪಾಕ್ ಪ್ರವಾಸ ಕೈಗೊಳ್ಳಲಿದೆ ಭಾರತ”: ಈ ಬಗ್ಗೆ ಜಯ್ ಶಾ ಹೇಳಿದ್ದೇ ಬೇರೆ!

ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಕ್ಲಿಪ್‌ನಲ್ಲಿ, ಮಗು ತನ್ನ ಎರಡೂ ಪಾದಗಳ ಬ್ಯಾಲೆನ್ಸ್ ಕಳೆದುಕೊಂಡು ತಲೆಕೆಳಗಾಗಿ ಬಿದ್ದಿದೆ. ತಕ್ಷಣವೇ ಸ್ಥಳದಲ್ಲಿ ವ್ಯಕ್ತಿ ಓಡಿ ಬಂದು ಮಗುವನ್ನು ಕಾಪಾಡಿದ್ದಾರೆ.

 

 

ಪಂದ್ಯದ ಮೊದಲ ಇನಿಂಗ್ಸ್‌ನ 14 ನೇ ಓವರ್‌ನ ನಂತರ ಈ ಘಟನೆ ನಡೆದಿದೆ. ಆಗ ಸ್ಕಾಟ್ಲೆಂಡ್ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಬ್ರಾಡ್‌ಕಾಸ್ಟರ್‌ನ ಗಮನವು ವಿಂಡೀಸ್ ವಿಕೆಟ್‌ಕೀಪರ್ ನಿಕೋಲಸ್ ಪೂರನ್ ಮೇಲೆ ಇತ್ತು. ಆದರೆ ಈ ಘಟನೆ ನಡೆಯುತ್ತಿದ್ದಂತೆ ತಕ್ಷಣವೇ ಮಗುವಿನ ಕಡೆಗೆ ಗಮನ ಹರಿಸಿದರು. .

ಇನ್ನು ಅಂದಿನ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಹೋಬರ್ಟ್‌ನಲ್ಲಿ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ ಸ್ಕಾಟ್ಲೆಂಡ್ ವೆಸ್ಟ್ ಇಂಡೀಸ್ ಅನ್ನು 42 ರನ್‌ಗಳಿಂದ ಸೋಲಿಸಿತು.

ಜಾರ್ಜ್ ಮುನ್ಸಿ 53 ಎಸೆತಗಳಲ್ಲಿ ಔಟಾಗದೆ 66 ರನ್ ಗಳಿಸಿದರು ಮತ್ತು ಕ್ಯಾಲಮ್ ಮ್ಯಾಕ್ಲಿಯೋಡ್ 14 ಎಸೆತಗಳಲ್ಲಿ 23 ರನ್ ಗಳಿಸಿ ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 160 ರನ್ ಗಳಿಸಿದರು. ಅಲ್ಜಾರಿ ಜೋಸೆಫ್ ಮತ್ತು ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್ ಪಡೆದರೆ, ಓಡಿಯನ್ ಸ್ಮಿತ್ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: BCCI President : ಕನ್ನಡಿಗ ರೋಜರ್ ಬಿನ್ನಿಗೆ ಬಿಸಿಸಿಐ ಅಧ್ಯಕ್ಷ ಪಟ್ಟ

ಮೊತ್ತವನ್ನು ರಕ್ಷಿಸಿದ ಸ್ಕಾಟ್ಲೆಂಡ್ ವೆಸ್ಟ್ ಇಂಡೀಸ್ ಅನ್ನು 18.3 ಓವರ್‌ಗಳಲ್ಲಿ 118 ರನ್‌ಗಳಿಗೆ ಆಲೌಟ್ ಮಾಡಿತು. ಮಾರ್ಕ್ ವ್ಯಾಟ್ ಮೂರು ವಿಕೆಟ್ ಪಡೆದರೆ, ಬ್ರಾಡ್ ವೀಲ್ ಮತ್ತು ಮೈಕಲ್ ಲೀಸ್ಕ್ ತಲಾ ಎರಡು ವಿಕೆಟ್ ಪಡೆದರು. ಜೋಶ್ ಡೇವಿ ಮತ್ತು ಸಫ್ಯಾನ್ ಷರೀಫ್ ತಲಾ ಒಂದು ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News