Unique Cricket Records: ಕ್ರಿಕೆಟ್ ಆಟದಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆಯುವುದು ಪ್ರತಿಯೊಬ್ಬ ಬೌಲರ್‌ನ ಕನಸಾಗಿರುತ್ತದೆ. ಆದರೆ ಇಲ್ಲಿಯವರೆಗೆ ಇತಿಹಾಸದಲ್ಲಿ ಕೆಲವೇ ಕೆಲವು ಬೌಲರ್‌ಗಳು ಮಾತ್ರ ಈ ಸಾಧನೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬರು ಮೊಹಮ್ಮದ್‌ ಸಿರಾಜ್.‌ 2023ರ ಏಷ್ಯಾಕಪ್‌ನಲ್ಲಿ ಸಿರಾಜ್‌ ಶ್ರೀಲಂಕಾ ತಂಡದ ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂದು ಥೂ..! ಕರಾಬ್‌ ಲುಕ್‌ ಗುರು.. ಅಂದವರು ಇಂದು ಪ್ಲೀಸ್‌.. ಪ್ಲೀಸ್‌ ಒಂದು ಸೆಲ್ಫಿ ಅಂತ ಈಕೆ ಹಿಂದೆ ಬಿದ್ದಿದ್ದಾರೆ..!


ಏಷ್ಯಾ ಕಪ್ 2023ರ ಫೈನಲ್ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಕಿಲ್ಲಿಂಗ್‌ ಬೌಲಿಂಗ್ ಅಬ್ಬರ ಎಷ್ಟಿತ್ತೆಂದರೆ, ಅತ್ತ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಅಳುವುದೊಂದೇ ಬಾಕಿ ಎಂಬಂತಿತ್ತು. ಅಂದು ಸಿರಾಜ್ 7 ಓವರ್‌ಗಳಲ್ಲಿ 21 ರನ್ ನೀಡಿ 6 ವಿಕೆಟ್ ಪಡೆದಿದ್ದರು.  6 ವಿಕೆಟ್‌ಗಳ ಸಾಧನೆ ಸಾಮಾನ್ಯ ವಿಷಯಲ್ಲ. ಆದರೆ ಅದಕ್ಕೂ ಮುನ್ನ ಕೇವಲ 16 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದರು ಎಂಬುದು ಗಮನಾರ್ಹ ವಿಷಯ.


ಇದನ್ನೂ ಓದಿ: ನವರಾತ್ರಿಯ ಪ್ರಯುಕ್ತ ಮನರಂಜನೆಯ ಹೂರಣವನ್ನು ಹೊತ್ತು ಬರ್ತಿದೆ "ಸುವರ್ಣ ದಸರಾ ದರ್ಬಾರ್"..!


2003ರಲ್ಲಿ ಶ್ರೀಲಂಕಾದ ಬೌಲರ್ ಚಮಿಂದಾ ವಾಸ್ ಬಾಂಗ್ಲಾದೇಶ ವಿರುದ್ಧ ಇದೇ ರೀತಿಯ ಸಂಚಲನ ಮೂಡಿಸಿದ್ದರು. ಅವರು ಕೂಡ 16 ಎಸೆತಗಳಲ್ಲಿ 5 ವಿಕೆಟ್ ಕಬಳಿಸುವ ಮೂಲಕ ತಲ್ಲಣಗೊಳಿಸಿದರು. ಆದರೆ ಏಷ್ಯಾಕಪ್ ಫೈನಲ್‌ನಲ್ಲಿ ಈ ಸಾಧನೆ ಮಾಡುವ ಮೂಲಕ ಸಿರಾಜ್ ಶ್ರೀಲಂಕಾವನ್ನು ಬೆಂಡೆತ್ತಿದ್ದರು. ಒಂದೇ ಓವರ್‌ನಲ್ಲಿ 4 ವಿಕೆಟ್ ಪಡೆದು ಸಂಚಲನ ಮೂಡಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews