ಬೆಂಗಳೂರು: ಸೆಪ್ಟೆಂಬರ್ 14, 2022: ಅಸಾಧಾರಣ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ, ಶ್ರೀ ಲಿಖಿತ್ ಕುಮಾರ್ YP ಅವರು 2022 ರ ಸೆಪ್ಟೆಂಬರ್ 7 ರಿಂದ 10 ರವರೆಗೆ ಸ್ವಿಟ್ಜರ್ಲೆಂಡ್‍ನ ಬರ್ನ್‍ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ 2022 (WSC2022) ರಲ್ಲಿ ಪ್ರೋಟೋಟೈಪ್ ಮಾಡೆಲಿಂಗ್‍ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ ವಾರವೂ ಮಳೆ ಆರ್ಭಟ : ಹವಾಮಾನ ಇಲಾಖೆ ಮಾಹಿತಿ


ಲಿಖಿತ್ ಅವರು ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ಮೆಕಟ್ರಾನಿಕ್ಸ್‍ನಲ್ಲಿ ಡಿಪ್ಲೊಮಾವನ್ನು ಮುಗಿಸಿದ್ದಾರೆ ಮತ್ತು ಸ್ಪರ್ಧೆಗಾಗಿ ಈ ವರ್ಷದ ಆರಂಭದಿಂದ ತರಬೇತಿಯನ್ನು ಪಡೆಯುತ್ತಿದ್ದರು. ವರ್ಲ್ಡ್ ಸ್ಕಿಲ್ಸ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರೊಟೊಟೈಪ್ ಮಾಡೆಲಿಂಗ್ ಸ್ಕಿಲ್‍ಗೆ ಮುಖ್ಯ ಪರಿಣಿತರಾಗಿರುವ ಟೊಯೋಟಾ ಇಂಡಿಯಾ ಎಕ್ಸ್‍ಪರ್ಟ್ ಶ್ರೀ ಭಾಸ್ಕರ್ ಸಿಂಗ್ ಅವರು ತರಬೇತಿಯನ್ನು ನೀಡಿದ್ದಾರೆ.ಲಿಖಿತ್ ಅವರು ಈ ಕಾಯಕದಲ್ಲಿ ರಾಷ್ಟ್ರೀಯ ಕೌಶಲ್ಯ ಸ್ಪರ್ಧೆಯಾದ ಇಂಡಿಯಾಸ್ಕಿಲ್ಸ್ 2021 ಅನ್ನು ಗೆದ್ದಿದ್ದಾರೆ ಮತ್ತು ಕೌಶಲ್ಯ ಶ್ರೇಷ್ಠತೆಯ ಚಿನ್ನದ ಮಾನದಂಡವಾದ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಿಂದ ಗುರುತಿಸಲ್ಪಟ್ಟ ನಂತರ ಈಗ ಭಾರತದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.


ರೈತರೊಬ್ಬರ ಮಗನಾದ ಲಿಖಿತ್ ಈ ಮಹತ್ವದ ಸಾಧನೆಯ ಮೂಲಕ ತನಗೆ ಮತ್ತು ತನ್ನ ಕುಟುಂಬಕ್ಕೆ ಪ್ರಖ್ಯಾತಿಯನ್ನು ತಂದಿದ್ದಾನೆ. ತರಬೇತಿ ಸಂಸ್ಥೆಯಿಂದ ಆಯ್ಕೆಯಾಗುವುದು, ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯನ್ನು ಗೆಲ್ಲುವುದು ಮತ್ತು ಈಗ ಅಂತರಾಷ್ಟ್ರೀಯ ವೇದಿಕೆಯಲ್ಲಿ ದೇಶಕ್ಕಾಗಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ, ಲಿಖಿತ್ ಸಾಧನೆಯ ಹಾದಿಯಲ್ಲಿನ ಯಾವುದೇ ಪ್ರಯತ್ನವನ್ನೂ ಬಿಟ್ಟಿಲ್ಲ.Viral Video: ಗುಂಪು ಗುಂಪಾಗಿ ವ್ಯಕ್ತಿಯ ಮೇಲೆ ಬೀದಿ ನಾಯಿಗಳ ದಾಳಿ! ಆಮೇಲೇನಾಯ್ತು ನೋಡಿ


ವೇದ್ ಮಣಿ ತಿವಾರಿ, COO, NSDC, ಹೇಳಿದರು: ಈ ಜಾಗತಿಕ ವೇದಿಕೆಯಲ್ಲಿ ಭಾರತದ ಯುವಜನರು ಭಾಗವಹಿಸುವುದು ಮತ್ತು ಗುರುತಿಸಿಕೊಳ್ಳುವುದನ್ನು ನೋಡುವುದು ಉತ್ತೇಜನಕಾರಿಯಾಗಿದೆ. ಲಿಖಿತ್ ಕುಮಾರ್ ಮತ್ತು ಅವರ ಕುಟುಂಬಕ್ಕೆ ನನ್ನ ಅಭಿನಂದನೆಗಳು. ಭಾರತದ ಯುವಕರು ಹೊಸ ಯುಗದ ವ್ಯಾಪಾರಗಳಲ್ಲಿ ಪರಿಣತಿಯನ್ನು ಪಡೆಯುತ್ತಿದ್ದಾರೆ ಮತ್ತು ಭವಿಷ್ಯದ ಕೆಲಸದ ತಯಾರಿಗೆ ಸಿದ್ಧರಾಗುತ್ತಿದ್ದಾರೆ ಎಂಬುದಕ್ಕೆ ಲಿಖಿತ್‍ನ ಗೆಲುವು ಸಾಕ್ಷಿಯಾಗಿದೆ. ಭಾರತದ ಯುವ ಪ್ರತಿಭೆಗಳ ಸಾಮಥ್ರ್ಯವನ್ನು ಬಳಸಿಕೊಳ್ಳುವುದು ಮತ್ತು ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಂತಹ ಜಾಗತಿಕ ವೇದಿಕೆಗಳಲ್ಲಿ ಅವರ ಪ್ರೊಫೈಲ್ ಅನ್ನು ಹೆಚ್ಚಿಸುವ ಕಡೆ ನಮ್ಮ ಸಂಪೂರ್ಣ ಗಮನವಿದೆ. ಇದರೊಂದಿಗೆ, ನುರಿತ ಕಾರ್ಯಪಡೆಯು ನಮ್ಮನ್ನು ಪ್ರಪಂಚದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವ ಬೆನ್ನೆಲುಬಾಗಿರುವುದರಿಂದ ನಾವು ಭಾರತ ಮತ್ತು ಪಾಲುದಾರ ದೇಶಗಳಿಗೆ ಪ್ರಬಲವಾದ ಕೌಶಲ್ಯ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸುವುದನ್ನು ಮುಂದುವರಿಸುತ್ತೇವೆ.


ವರ್ಲ್ಡ್ ಸ್ಕಿಲ್ಸ್  ಸ್ಪರ್ಧೆಯು ಜಾಗತಿಕ ಉದ್ಯಮದ ಮಾನದಂಡಗಳನ್ನು ಪ್ರತಿಬಿಂಬಿಸುವ ವಿಶ್ವದ ಅತಿದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶ್ರೇಷ್ಠತೆಯ ಕಾರ್ಯಕ್ರಮವಾಗಿದೆ.ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ 2022 ಚೀನಾದ ಶಾಂಘೈನಲ್ಲಿ ನಡೆಯಬೇಕಿತ್ತು. ಶಾಂಘೈನಲ್ಲಿನ ಸದ್ಯದ ಲಾಕ್‍ಡೌನ್‍ಗಳು ಮತ್ತು ಚೀನಾದಲ್ಲಿ ನಡೆಯುತ್ತಿರುವ ಸಾಂಕ್ರಾಮಿಕದ ನಿವಾರಣೆ ಮತ್ತು ನಿಯಂತ್ರಣದ ನಿರ್ಬಂಧಗಳ ಕಾರಣದಿಂದಾಗಿ, ಈಗ ಅರವತ್ತೆರಡು ಕೌಶಲ್ಯ ಸ್ಪರ್ಧೆಗಳನ್ನು 15 ದೇಶಗಳು ಮತ್ತು ವಲಯಗಳಲ್ಲಿ 12 ವಾರಗಳ ಕಾಲ 7 ಸೆಪ್ಟೆಂಬರ್ ಮತ್ತು 26 ನವೆಂಬರ್ 2022 ರ ನಡುವೆ ನಡೆಸಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.