MS Dhoni World Record in T20 WC: T20 ವಿಶ್ವಕಪ್ 2024 ಜೂನ್ 1 ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಟೀಂ ಇಂಡಿಯಾ 15 ಸದಸ್ಯರ ತಂಡ ಪ್ರಕಟಗೊಳಿಸಿದೆ. 2007ರಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಈ ಟೂರ್ನಿಯನ್ನು ಗೆದ್ದಿತ್ತು. ಅಂದಿನಿಂದ ಇಂದಿನವರೆಗೂ ತಂಡ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!


ತಮ್ಮ ನಾಯಕತ್ವದಲ್ಲಿ ಭಾರತವು ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವಂತೆ ಮಾಡಿದ ಧೋನಿ, ಟಿ 20 ವಿಶ್ವಕಪ್‌’ನಲ್ಲಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯವರೆಗೆ ಆ ದಾಖಲೆ ಟಚ್ ಮಾಡೋಕು ಯಾರಿಂದಲೂ ಸಾಧ್ಯವಾಗಿಲ್ಲ.


ಧೋನಿ T20 ವಿಶ್ವಕಪ್‌’ನಲ್ಲಿ ವಿಕೆಟ್‌ ಕೀಪರ್‌ ಆಗಿ ಹೆಚ್ಚು ಔಟ್ ಮಾಡಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ. 2007 ಮತ್ತು 2016 ರ ನಡುವೆ ಆಡಿದ ಎಲ್ಲಾ T20 ವಿಶ್ವಕಪ್‌’ಗಳ ಭಾಗವಾಗಿದ್ದರು. ಈ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ 32 ವಿಕೆಟ್‌’ಗಳನ್ನು ಪಡೆದರು, ಇದರಲ್ಲಿ 21 ಕ್ಯಾಚ್‌ ಮತ್ತು 11 ಸ್ಟಂಪಿಂಗ್‌ ಸೇರಿವೆ. ಟಿ20 ವಿಶ್ವಕಪ್‌ನಲ್ಲಿ ಒಟ್ಟು 33 ಪಂದ್ಯಗಳನ್ನು ಆಡಿದ್ದು, ಟಾಪ್-10ರಲ್ಲಿರುವ ಏಕೈಕ ಭಾರತೀಯ ಧೋನಿ.


  • ಎಂಎಸ್ ಧೋನಿ (ಭಾರತ) - 32

  • ಕಮ್ರಾನ್ ಅಕ್ಮಲ್ (ಪಾಕಿಸ್ತಾನ) - 30

  • ದಿನೇಶ್ ರಾಮ್ದಿನ್ (ವೆಸ್ಟ್ ಇಂಡೀಸ್) - 27

  • ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 26

  • ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) - 22

  • ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ) - 19

  • ಜೋಸ್ ಬಟ್ಲರ್ (ಇಂಗ್ಲೆಂಡ್) - 18

  • ಮ್ಯಾಥ್ಯೂ ವೇಡ್ (ಆಸ್ಟ್ರೇಲಿಯಾ) - 17

  • ಮಾರ್ಕ್ ಬೌಚರ್ (ದಕ್ಷಿಣ ಆಫ್ರಿಕಾ) - 16

  • ಮೊಹಮ್ಮದ್ ಶಹಜಾದ್ (ಅಫ್ಘಾನಿಸ್ತಾನ) - 13


ಇದನ್ನೂ ಓದಿ:  ಈ ಐವರು ಆಟಗಾರರು T20 ವಿಶ್ವಕಪ್’ನಲ್ಲಿ ಅಬ್ಬರಿಸೋದು ಗ್ಯಾರಂಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್