T20 World Cup 2024: T20 ವಿಶ್ವಕಪ್ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಟೂರ್ನಿಯನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯ ವಹಿಸಲಿದ್ದು, ಐಸಿಸಿ ಟೂರ್ನಿಗೆ ಅಮೆರಿಕ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. ಆತಿಥ್ಯ ಮಾತ್ರವಲ್ಲದೆ, ಅಮೆರಿಕ ತಂಡವೂ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಅಮೆರಿಕದ ಹೊರತಾಗಿ, ಐಸಿಸಿಯ ಸಹವರ್ತಿ ತಂಡಗಳ ಪೈಕಿ ಹಲವು ತಂಡಗಳು ಟಿ20 ವಿಶ್ವಕಪ್’ನಲ್ಲಿ ಕಾಣಿಸಿಕೊಳ್ಳಲಿವೆ.
ಅಂದಹಾಗೆ ಈ ಟೂರ್ನಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಸಂಚಲನ ಮೂಡಿಸಬಲ್ಲ ಐವರು ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: SIT ಮುಂದೆ ದಾಖಲಾಗುವ ಪ್ರಕರಣಗಳಿಗೆ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ
ಅಲಿ ಖಾನ್. ಇವರು ಅಮೇರಿಕನ್ ಕ್ರಿಕೆಟ್ ಸರ್ಕ್ಯೂಟ್’ನಲ್ಲಿ ಅತ್ಯಂತ ಮಾರಕ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ವಿಶ್ವದಾದ್ಯಂತ ಹಲವು ಟಿ20 ಲೀಗ್’ಗಳಲ್ಲಿ ಆಡಿರುವ ಅವರು ಬೌಲರ್ ಆಗಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಮೈನರ್ ಲೀಗ್ ಕ್ರಿಕೆಟ್‌ನಲ್ಲಿ (MLC) ಹೂಸ್ಟನ್ ಹರಿಕೇನ್ಸ್ ಪರ ಆಡುತ್ತಿರುವ ಅಲಿ ಖಾನ್ 7 ಪಂದ್ಯಗಳಲ್ಲಿ 7.04 ರ ಎಕಾನಮಿಯೊಂದಿಗೆ 7 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶೇಷವಾಗಿ ಪವರ್‌ಪ್ಲೇನಲ್ಲಿ ಉತ್ತಮ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.
ಭಾರತೀಯ ಮೂಲದ ಓಮನ್ ಕ್ರಿಕೆಟಿಗ ಕಶ್ಯಪ್ ಪ್ರಜಾಪತಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಆಕರ್ಷಿಸಬಲ್ಲ ಆಟಗಾರ. ಪ್ರಜಾಪತಿ ಒಮಾನ್‌ನ ಅತ್ಯಂತ ಪ್ರಭಾವಿ ಬ್ಯಾಟ್ಸ್‌ಮನ್. ಒಮಾನ್ ಪರ 41 ಪಂದ್ಯಗಳಲ್ಲಿ 812 ರನ್ ಗಳಿಸಿದ್ದಾರೆ, ಇದರಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ 74* ಆಗಿದೆ. 2022ರಲ್ಲಿ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾ ವಿರುದ್ಧ ಈ ಸಾಧನೆ ಮಾಡಿದ್ದರು.
ದೀಪೇಂದ್ರ ಸಿಂಗ್ ಅವರನ್ನು ನೇಪಾಳದ ಯುವರಾಜ್ ಸಿಂಗ್ ಎಂದು ಕರೆಯಲಾಗುತ್ತದೆ. ನೇಪಾಳದ ಅತ್ಯಂತ ಅಪಾಯಕಾರಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. 24 ವರ್ಷದ ಆಲ್‌ರೌಂಡರ್ ನೇಪಾಳ ಪರ ಇದುವರೆಗೆ 64 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 146.75 ಸರಾಸರಿಯಲ್ಲಿ 1626 ರನ್ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಟಿ20 ಪಂದ್ಯದಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
37 ವರ್ಷ ವಯಸ್ಸಿನ ಸ್ಕಾಟಿಷ್ ಕ್ರಿಕೆಟಿಗ ಮತ್ತು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ತಂಡದ ನಾಯಕ ರಿಚಿ ಬೆರಿಂಗ್‌ಟನ್ ಅವರ 16 ವರ್ಷಗಳ ಅನುಭವದಿಂದಾಗಿ ಈ ಪಟ್ಟಿಯಲ್ಲಿದ್ದಾರೆ. ಬ್ಯಾಟಿಂಗ್ ಆಲ್‌ರೌಂಡರ್ ಆಗಿ, ಸ್ಕಾಟ್ಲೆಂಡ್‌ನ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡಿದ್ದಾರೆ. 87 ಪಂದ್ಯಗಳ ವೃತ್ತಿಜೀವನದಲ್ಲಿ 2040 ರನ್ ಗಳಿಸಿದ್ದಾರೆ, ಇದರಲ್ಲಿ 10 ಅರ್ಧ ಶತಕ ಮತ್ತು ಒಂದು ಶತಕ ಸೇರಿದೆ.
ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೇ ವಿರಾಟ್ ಪ್ರೇರಣೆ… ಆದ್ರೆ ವಿರಾಟ್’ಗೆ ಪ್ರೇರಣೆ ಯಾರು ಗೊತ್ತಾ? ಈ ವಿಶೇಷ ವ್ಯಕ್ತಿಯೇ ಕೊಹ್ಲಿಯ Inspiration!
ಕೋರಿ ಆಂಡರ್ಸನ್ ನ್ಯೂಜಿಲೆಂಡ್ ತಂಡದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ಈಗ ಈ ವಿಶ್ವಕಪ್’ನಲ್ಲಿ ಯುಎಸ್ಎ ಕ್ರಿಕೆಟ್ ತಂಡಕ್ಕೆ ಕೊಡುಗೆ ನೀಡಲು ಸಿದ್ಧರಾಗಿದ್ದಾರೆ. USA ಉದಯೋನ್ಮುಖ ತಂಡವಾಗಿರುವುದರಿಂದ, ಅವರಿಗೆ ಆಂಡರ್ಸನ್ ಅವರಂತಹ ಅನುಭವಿ ಆಟಗಾರರ ಅಗತ್ಯವಿದೆ. ಆಂಡರ್ಸನ್ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ್ದಾರೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ 36 ಎಸೆತಗಳಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಬೌಲರ್ ಆಗಿ 14 ವಿಕೆಟ್ ಕೂಡ ಕಬಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್