Mahendra Singh Dhoni Production House: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮಾತ್ರವಲ್ಲ ತಮ್ಮ ನಾಯಕತ್ವದಿಂದಲೂ ಹೆಸರುವಾಸಿಯಾಗಿದ್ದಾರೆ. ತಮ್ಮ ಶಾಂತ ಮತ್ತು ಬುದ್ಧಿವಂತ ಮನಸ್ಸಿನಿಂದ ಟೀಮ್ ಇಂಡಿಯಾಕ್ಕೆ ಅನೇಕ ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇದೀಗ ಸಿನಿಮಾ ಲೋಕದಲ್ಲಿ ತಮ್ಮ ಕೈಚಳಕ ತೋರಿಸಲು ರೆಡಿಯಾಗಿದ್ದಾರೆ. ಅವರ ಪ್ರೊಡಕ್ಷನ್ ಹೌಸ್ ನಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ ಅನೌನ್ಸ್ ಆಗಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಒಂದೆಡೆ World Cup ಸೆಮಿಸ್, ಮತ್ತೊಂದೆಡೆ T20: ಮಹಿಳಾ-ಪುರುಷ ತಂಡಕ್ಕೆ ಇಂದಿನ ಎದುರಾಳಿ ಮಾತ್ರ New Zealand


ಇದು ಧೋನಿ ನಿರ್ಮಾಣದಲ್ಲಿ ತಯಾರಾದ ಮೊದಲ ಸಿನಿಮಾ:


ಮಹೇಂದ್ರ ಸಿಂಗ್ ಧೋನಿ ಅವರ ನಿರ್ಮಾಣ ಸಂಸ್ಥೆ ಧೋನಿ ಎಂಟರ್‌ಟೈನ್‌ಮೆಂಟ್ ಮೊದಲ ತಮಿಳು ಚಿತ್ರವನ್ನು ನಿರ್ಮಿಸಿದೆ. ಅದರ ಹೆಸರು 'ಲೆಟ್ಸ್ ಗೆಟ್ ಮ್ಯಾರೀಡ್'. ಈ ಚಿತ್ರದ ಮೋಷನ್ ಪೋಸ್ಟ್ ಅನ್ನು ಧೋನಿ ಎಂಟರ್ಟೈನ್ಮೆಂಟ್ನ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ನಾದಿಯಾ, ಹರೀಶ್ ಕಲ್ಯಾಣ್ ಮತ್ತು ಇವಾನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯೋಗಿ ಬಾಬು ಕೂಡ ಈ ಸಿನಿಮಾದ ಭಾಗವಾಗಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ರಮೇಶ್ ತಮಿಳ್ಮಣಿ ಅವರಿಗೆ ವಹಿಸಲಾಗಿದೆ. ರಮೇಶ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.



 


 


ಈ ಚಿತ್ರದ ನಿರ್ಮಾಪಕರು ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್. ಈ ಚಿತ್ರವನ್ನು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: IND vs NZ: ಬಿಸಿಸಿಐ ಅವಕಾಶ ನೀಡಿದ್ದ ಈ ಆಟಗಾರನನ್ನು ಪ್ಲೇಯಿಂಗ್ XIನಿಂದ ಹೊರಗಿಟ್ಟ ನಾಯಕ ಹಾರ್ದಿಕ್ ಪಾಂಡ್ಯ!


2 ವಿಶ್ವಕಪ್ ಗೆದ್ದ ಟೀಂ ಇಂಡಿಯಾ:


ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007 ರ ಟಿ 20 ವಿಶ್ವಕಪ್, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಡಿಆರ್‌ಎಸ್ ತೆಗೆದುಕೊಳ್ಳುವ ಮತ್ತು ಬೌಲಿಂಗ್ ಅನ್ನು ಅದ್ಭುತವಾಗಿ ಬದಲಾಯಿಸುವಲ್ಲಿ ಮಹಾನ್ ಮಾಸ್ಟರ್ ಆಗಿದ್ದಾರೆ. ಧೋನಿ ವಿಶ್ವದ ಅತ್ಯುತ್ತಮ ಫಿನಿಶರ್‌ಗಳ ಪಟ್ಟಿಯಲ್ಲಿದ್ದಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.