ಒಂದೆಡೆ World Cup ಸೆಮಿಸ್, ಮತ್ತೊಂದೆಡೆ T20: ಮಹಿಳಾ-ಪುರುಷ ತಂಡಕ್ಕೆ ಇಂದಿನ ಎದುರಾಳಿ ಮಾತ್ರ New Zealand

U19 World Cup and IND vs NZ T20: ಏಕದಿನ ಸರಣಿಯ ನಂತರ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಸರಣಿಯನ್ನು ಗೆಲ್ಲುವ ಹಂಬಲದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ನಾಯಕತ್ವವೂ ಪರೀಕ್ಷೆಗೆ ಒಳಗಾಗಲಿದೆ. ಇನ್ನೊಂದೆಡೆ ಅನೇಕ ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಉತ್ತಮ ಪ್ರದರ್ಶನ ನೀಡಲು ಬಯಸುತ್ತಿದ್ದಾರೆ.

Written by - Bhavishya Shetty | Last Updated : Jan 27, 2023, 12:22 PM IST
    • ಒಂದೆಡೆ ವಿಶ್ವಕಪ್ ಅಂಡರ್ 19 ಸೆಮಿ ಫೈನಲ್ ನಲ್ಲಿ ಭಾರತದ ಮಹಿಳಾಮಣಿಗಳು ಆಟವಾಡಲಿದೆ
    • ಇನ್ನೊಂದೆಡೆ ಟೀಂ ಇಂಡಿಯಾ ಪುರುಷರ ತಂಡ ಟಿ 20 ಸರಣಿಯನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ
    • ಎರಡೂ ಪಂದ್ಯಗಳು ಇಂದು ನಡೆಯಲಿದ್ದು, ಉಭಯ ತಂಡಗಳಿಗೆ ಎದುರಾಳಿ ಮಾತ್ರ ನ್ಯೂಜಿಲೆಂಡ್
ಒಂದೆಡೆ World Cup ಸೆಮಿಸ್, ಮತ್ತೊಂದೆಡೆ T20: ಮಹಿಳಾ-ಪುರುಷ ತಂಡಕ್ಕೆ ಇಂದಿನ ಎದುರಾಳಿ ಮಾತ್ರ New Zealand
Team India Cricket

U19 World Cup and IND vs NZ T20: ಇಂದು ಟೀಂ ಇಂಡಿಯಾ ಕ್ರಿಕೆಟ್ ಲೋಕದಲ್ಲಿ ಮಹತ್ತರವಾದ ದಿನ. ಒಂದೆಡೆ ವಿಶ್ವಕಪ್ ಅಂಡರ್ 19 ಸೆಮಿ ಫೈನಲ್ ನಲ್ಲಿ ಭಾರತದ ಮಹಿಳಾಮಣಿಗಳು ಆಟವಾಡಲಿದ್ದು, ಇನ್ನೊಂದೆಡೆ ಟೀಂ ಇಂಡಿಯಾ ಪುರುಷರ ತಂಡ ಟಿ 20 ಸರಣಿಯನ್ನು ಗೆಲ್ಲಲು ಯೋಜನೆ ರೂಪಿಸುತ್ತಿದೆ. ಈ ಎರಡೂ ಪಂದ್ಯಗಳು ಇಂದು ನಡೆಯಲಿದ್ದು, ಉಭಯ ತಂಡಗಳಿಗೆ ಎದುರಾಳಿ ಮಾತ್ರ ನ್ಯೂಜಿಲೆಂಡ್ ಆಗಿದೆ.

ಇದನ್ನೂ ಓದಿ: ಕೆ ಎಲ್ ರಾಹುಲ್ ಮದುವೆಗೆ ವಿರಾಟ್ ಮತ್ತು ಧೋನಿ ನೀಡಿದ ಗಿಫ್ಟ್ ಮೌಲ್ಯ ಎಷ್ಟು ಗೊತ್ತಾ ?

ಏಕದಿನ ಸರಣಿಯ ನಂತರ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಸರಣಿಯನ್ನು ಗೆಲ್ಲುವ ಹಂಬಲದಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ನಾಯಕತ್ವವೂ ಪರೀಕ್ಷೆಗೆ ಒಳಗಾಗಲಿದೆ. ಇನ್ನೊಂದೆಡೆ ಅನೇಕ ಯುವ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಉತ್ತಮ ಪ್ರದರ್ಶನ ನೀಡಲು ಬಯಸುತ್ತಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತದ ಟಿ20 ತಂಡವನ್ನು ಮರುವಿನ್ಯಾಸಗೊಳಿಸಲಾಗಿದ್ದು, ಇದರಲ್ಲಿ ಹಲವು ಪ್ರಮುಖ ಆಟಗಾರರಿಗೆ ಸ್ಥಾನ ಸಿಕ್ಕಿಲ್ಲ. ಈ ತಂಡ ಇತ್ತೀಚೆಗೆ ಶ್ರೀಲಂಕಾವನ್ನು 2-1 ಅಂತರದಿಂದ ಸೋಲಿಸಿತ್ತು.

ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಪೃಥ್ವಿ ಶಾ ಟಿ20 ತಂಡಕ್ಕೆ ಮರಳಿದ್ದಾರೆ. ಅವರು ಅಸ್ಸಾಂ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 379 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಈ 23 ವರ್ಷದ ಆಟಗಾರ ಜುಲೈ 2021 ರಲ್ಲಿ ತನ್ನ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹಾರ್ದಿಕ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಐಸಿಸಿ U19 ಮಹಿಳೆಯರ T20 ವಿಶ್ವಕಪ್‌ನ ಆಕರ್ಷಕ ಸೂಪರ್ ಸಿಕ್ಸ್ ಹಂತವು ಅಂತ್ಯಗೊಂಡಿದ್ದು, ಇಂದಿನಿಂದ ಸೆಮಿಫೈನಲ್ ಪಂದ್ಯ ಶುರುವಾಗಲಿದೆ. ಇದೀಗ ಸೆಮಿಫೈನಲ್ ಪಂದ್ಯಗಳು ಶುಕ್ರವಾರ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿದೆ. ನ್ಯೂಜಿಲೆಂಡ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ಇದನ್ನೂ ಓದಿ: IND vs NZ: ಪಾಂಡ್ಯರಿಂದ ಸಿಗುತ್ತಾ ಈ ಆಟಗಾರನಿಗೆ ಅವಕಾಶ: ಒಂದೇ ಒಂದು ಚಾನ್ಸ್ ಗಾಗಿ ಹಾತೊರೆಯುತ್ತಿದ್ದಾರೆ ಈ ಕ್ರಿಕೆಟರ್!

ಎರಡು ಸೆಮಿಫೈನಲ್‌ಗಳ ವಿಜೇತರು ಭಾನುವಾರದ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಾರೆ. ಇದು ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿದೆ. ಭಾರತ ಈ ಹಿಂದೆ ದಕ್ಷಿಣ ಆಫ್ರಿಕಾ, ಯುಎಇ ಮತ್ತು ಸ್ಕಾಟ್ಲೆಂಡ್ ತಂಡಗಳನ್ನು ಸೋಲಿಸಿ ಸ್ಪರ್ಧೆಯಲ್ಲಿ ಡಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಸೂಪರ್ ಸಿಕ್ಸ್ ಸುತ್ತಿನ ಪ್ರಾರಂಭದಲ್ಲಿ, ಅವರು ಆಸ್ಟ್ರೇಲಿಯಾದಿಂದ ಅಲ್ಪ 87 ರನ್‌ಗಳಿಗೆ ಬೌಲ್ಡ್ ಆಗಿದ್ದರು. ಆದರೆ ಮರುದಿನವೇ ಶ್ರೀಲಂಕಾ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಮತ್ತೆ ಎದ್ದುನಿಂತಿದ್ದರು. ಈ ಬಳಿಕ ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News