MS Dhoni Retirement From IPL: ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಅವರ ಅಭಿಮಾನಿಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಇದ್ದಾರೆ. ಎಂಎಸ್ ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅದೇ ಸಮಯದಲ್ಲಿ, ಕಳೆದ ಕೆಲವು ದಿನಗಳಿಂದ, ಎಂಎಸ್ ಧೋನಿ ಐಪಿಎಲ್ 2023 ರಲ್ಲಿ ಆಡುವುದಿಲ್ಲ ಎಂಬ ವರದಿಗಳೂ ಇವೆ. ಐಪಿಎಲ್‌ನಿಂದ ನಿವೃತ್ತಿಯಾಗುವ ಸುದ್ದಿಯ ಬಗ್ಗೆ ಸ್ವತಃ ಎಂಎಸ್ ಧೋನಿ ಇದೀಗ ದೊಡ್ಡ ಅಪ್ಡೇಟ್ ನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಸಿಸಿ 'ಪ್ಲೇಯರ್ ಆಫ್ ದಿ ಮಂತ್'ಗೆ ನಾಮನಿರ್ದೇಶನಗೊಂಡ ಹರ್ಮನ್‌ಪ್ರೀತ್, ಮಂಧಾನ, ಅಕ್ಸರ್


ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಇತ್ತೀಚೆಗೆ ಚೆನ್ನೈಗೆ ಹೋಗಿದ್ದರು. ಈ ಸಂದರ್ಭದಲ್ಲಿ, ಅಭಿಮಾನಿಗಳು ಎಂಎಸ್ ಧೋನಿ ಅವರನ್ನು ಐಪಿಎಲ್ 2023 ರಲ್ಲಿ ಆಡುತ್ತೀರಾ ಅಥವಾ ಇಲ್ಲವೇ ಎಂದು ಕೇಳಿದ್ದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂಎಸ್ ಧೋನಿ, 'ನಾವು ಮುಂದಿನ ವರ್ಷ ಚೆಪಾಕ್‌ಗೆ ಹಿಂತಿರುಗುತ್ತೇವೆ' ಎಂದು ಹೇಳಿದರು. ಕೊರೊನಾದಿಂದಾಗಿ, ಎಂಎಸ್ ಧೋನಿ 2019 ರಿಂದ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಆಡಿಲ್ಲ. ಧೋನಿ ಅವರ ಈ ಉತ್ತರವನ್ನು ಚೆನ್ನೈ ಸೂಪರ್ ಕಿಂಗ್ಸ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಆದರೆ ಐಪಿಎಲ್ 2022 ರ ಮೊದಲು, ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆದರು, ನಂತರ ರವೀಂದ್ರ ಜಡೇಜಾ ವಹಿಸಿಕೊಂಡರು, ಆದರೆ ಅದರ ನಂತರ ಧೋನಿ ಮತ್ತೆ ಸಿಎಸ್‌ಕೆ ತಂಡದ ನಾಯಕರಾದರು. ಜಡೇಜಾ ಅವರು 8 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು, ಅದರಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದಿದ್ದಾರೆ, ಉಳಿದ 6 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಡೇಜಾ ನಾಯಕತ್ವದಿಂದ ಕೆಳಗಿಳಿಯಬೇಕಾಯಿತು. ಐಪಿಎಲ್ 2022 ರ ಋತುವಿನಲ್ಲಿ, ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ 2023 ರಲ್ಲಿ ಚೆನ್ನೈ ಪರ ಆಡುವುದಾಗಿ ಹೇಳಿದ್ದರು.


ಇದನ್ನೂ ಓದಿ: Sachin Tendulkar-MS Dhoni: ಕ್ರಿಕೆಟ್ ದೇವರನ್ನು ಭೇಟಿಯಾದ ಥಾಲಾ! ಕಾರಣವೇನು ಗೊತ್ತಾ?


ಧೋನಿ ಬಗ್ಗೆ ಮಾತನಾಡುವುದಾದರೆ, ಅವರು ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕಾಗಿ ಎಲ್ಲಾ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ರೀತಿ ಪ್ರಶಸ್ತಿ ಗೆದ್ದ ಏಕೈಕ ನಾಯಕರಾಗಿದ್ದಾರೆ. ಧೋನಿ 23 ಡಿಸೆಂಬರ್ 2004 ರಂದು ಬಾಂಗ್ಲಾದೇಶದ ವಿರುದ್ಧ ODI ಪಾದಾರ್ಪಣೆ ಮಾಡಿದರು. ಇದರ ನಂತರ 2007 ರ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿ ಧೋನಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ನೀಡಲಾಯಿತು. ಅವರು ಭಾರತವನ್ನು T20 ವಿಶ್ವಕಪ್ 2007, ವಿಶ್ವಕಪ್ 2011 ಮತ್ತು ಚಾಂಪಿಯನ್ಸ್ ಟ್ರೋಫಿ 2013ರ ಪ್ರಶಸ್ತಿಗಳಿಗೆ ಮುನ್ನಡೆಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.