T20 World Cup 2022: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಗಂಭೀರವಾದ ಕೆಳ ಬೆನ್ನಿನ ಗಾಯದಿಂದಾಗಿ ಇಡೀ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಟಿ20 ವಿಶ್ವಕಪ್‌ಗೆ ಜಸ್ಪ್ರೀತ್ ಬುಮ್ರಾ ಬದಲಿಗೆ ಅತ್ಯಂತ ಅಪಾಯಕಾರಿ ವೇಗದ ಬೌಲರ್ ಬರಲಿದ್ದಾರೆ. ಭಾರತದ ಈ ವೇಗದ ಬೌಲರ್ ಟಿ20 ವಿಶ್ವಕಪ್‌ನಲ್ಲಿ ಸ್ಫೋಟಕ ಆಟ ಪ್ರದರ್ಶಿಸುವ ನಿರೀಕ್ಷೆಯಿದೆ. ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ವೇಗದ ಬೌಲರ್ ಅನ್ನು T20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಆಡಿಸುವ ಸುಳಿವು ನೀಡಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಭಾರತ ತಂಡದ ಅತ್ಯಂತ ಅಪಾಯಕಾರಿ ವೇಗದ ಬೌಲರ್ ಮೊಹಮ್ಮದ್ ಶಮಿ ಆಡಲಿದ್ದಾರೆ. ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಬಗ್ಗೆ ಸೂಚನೆ ನೀಡಿದ್ದಾರೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೇ ಮೊಹಮ್ಮದ್ ಶಮಿ ಅವರು ಟಿ 20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ರಾಹುಲ್ ದ್ರಾವಿಡ್ ಸೂಚಿಸಿದ್ದಾರೆ.
ಇದನ್ನೂ ಓದಿ : India vs South Africa 3rd Match: ಅಂತಿಮ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ
ಮೊಹಮ್ಮದ್ ಶಮಿ ಅವರು ದೀಪಕ್ ಚಹಾರ್ ಅವರೊಂದಿಗೆ ಟಿ 20 ವಿಶ್ವಕಪ್‌ಗಾಗಿ ಭಾರತದ ಮೀಸಲು ವೇಗದ ಬೌಲರ್‌ಗಳಲ್ಲಿ ಒಬ್ಬರು. ಕೊರೊನಾ ಸೋಂಕಿನಿಂದಾಗಿ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಆಡಲು ಸಾಧ್ಯವಾಗಲಿಲ್ಲ. ಬುಮ್ರಾ ಅವರ ಸ್ಥಾನದಲ್ಲಿ ಯಾರು ಆಡಬೇಕೆಂದು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಂತರ, ದ್ರಾವಿಡ್ ಶಮಿಗೆ ಆದ್ಯತೆ ನೀಡಬಹುದು ಎಂದು ಸುಳಿವು ನೀಡಿದ್ದಾರೆ. ಆದರೂ ಚಹಾರ್ ಮತ್ತು ಮೊಹಮ್ಮದ್ ಸಿರಾಜ್ ಸಹ ಶಮಿಗೆ ಸ್ಪರ್ಧಿಗಳಾಗಿದ್ದರು.
ನಾವು ಆಯ್ಕೆಗಳನ್ನು ನೋಡುತ್ತಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ನಮಗೆ ಅಕ್ಟೋಬರ್ 15 ರವರೆಗೆ ಸಮಯವಿದೆ. ಶಮಿ ಸ್ಟ್ಯಾಂಡ್‌ಬೈನಲ್ಲಿದ್ದಾರೆ ಆದರೆ ಕೊನೆಯ ಎರಡು ಸರಣಿಗಳನ್ನು ಆಡಲು ಸಾಧ್ಯವಾಗಲಿಲ್ಲ. ಪ್ರಸ್ತುತ ಅವರು NCA ಯಲ್ಲಿದ್ದಾರೆ ಮತ್ತು ನಾವು ಅವರ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ನಂತರವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಗಾಯದ ಸಮಸ್ಯೆಯಿಂದ ಬುಮ್ರಾ ಟೂರ್ನಿಯಿಂದ ಹೊರಗುಳಿದಿದ್ದಾರೆ. ಭಾರತ ತಂಡ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿ ಪರ್ತ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಭಾರತ ತಂಡ ಬ್ರಿಸ್ಬೇನ್‌ಗೆ ತೆರಳಲಿದೆ. ಭಾರತವು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ಗೆ ಅತ್ಯುತ್ತಮ ಬೌಲರ್. ಮೊಹಮ್ಮದ್ ಶಮಿ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವಾಗ ಚೆಂಡನ್ನು ಸ್ವಿಂಗ್ ಮಾಡುವುದರಲ್ಲಿ ನಿಪುಣರು.
ಇದನ್ನೂ ಓದಿ : Surya Kumar Yadav ಆಟಕ್ಕೆ ದಾಖಲೆಗಳು ಉಡೀಸ್: ಮಿ.360 ಮುರಿದ ರೆಕಾರ್ಡ್ ಗಳ ಪಟ್ಟಿ ಇಲ್ಲಿದೆ ನೋಡಿ
ಮೊಹಮ್ಮದ್ ಶಮಿ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ತೀಕ್ಷ್ಣವಾದ ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಮೊಹಮ್ಮದ್ ಶಮಿ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವಲ್ಲಿ ನಿಪುಣರು. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಶಮಿ ರೀತಿಯ ಬೌಲರ್‌ಗಳು ಸ್ಫೋಟಕ ಆಟ ಪ್ರದರ್ಶಿಸುವ ಸಾಧ್ಯತೆ ಹೆಚ್ಚು. ಭಾರತ ತಂಡದಲ್ಲಿ ಆಯ್ಕೆಯಾಗಿರುವ ವೇಗದ ಬೌಲರ್ ಗಳ ಪೈಕಿ 140ಕ್ಕೂ ಹೆಚ್ಚು ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವಂಥ ಬೌಲರ್ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೊಹಮ್ಮದ್ ಶಮಿಯಂತಹ ಬೌಲರ್‌ಗೆ ಅವಕಾಶ ನೀಡಬಹುದು ಎಂದು ಊಹಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.