MS Dhoni- ಎಂಎಸ್ ಧೋನಿ (MS Dhoni) ಮತ್ತು ಯುವರಾಜ್ ಸಿಂಗ್ (Yuvraj Singh) ಕ್ರಿಕೆಟ್ ನ ದೊಡ್ಡ ತಾರೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತೀಚೆಗೆ ಜಾಹೀರಾತಿನ ಚಿತ್ರೀಕರಣದ ವೇಳೆ ಇಬ್ಬರೂ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಸಂತೋಷದಿಂದ ಕಾಣುತ್ತಿದ್ದರು.  ಅವರ ನಡುವೆ ಮಾತುಕತೆಯೂ ನಡೆದಿದೆ. ಟೀಮ್ ಇಂಡಿಯಾದ ಈ ಮಾಜಿ ಕ್ರಿಕೆಟಿಗರ ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಧೋನಿ-ಯುವರಾಜ್ ಭೇಟಿ:
ಎಂಎಸ್ ಧೋನಿ (MS Dhoni) ಮತ್ತು ಯುವರಾಜ್ ಸಿಂಗ್ (Yuvraj Singh) ಇಬ್ಬರೂ ಕ್ರಿಕೆಟ್ ತಾರೆಯರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ,  ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಎಲ್ಲದರ ನಡುವೆಯೂ ಕ್ರಿಕೆಟ್ ಅಭಿಮಾನಿಗಳು ಮಹಿ-ಯುವಿ ಅವರನ್ನು ಒಟ್ಟಿಗೆ ನೋಡಲು ಇಷ್ಟಪಡುತ್ತಾರೆ. ಯುವಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ವಿಶ್ವಕಪ್‌ನ ಹಳೆಯ ಪಾಲುದಾರರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.


Vijay Hazare Trophy: ಐಪಿಎಲ್ ಮೆಗಾ ಹರಾಜಿನ ಮೊದಲು, ಈ ಆಟಗಾರರಿಗೆ ಸುವರ್ಣಾವಕಾಶ


ಹಿಟ್ಟಿಂಗ್ ಚಾಂಪಿಯನ್ ಜೋಡಿ :
ಇವತ್ತಿಗೂ ಕ್ರಿಕೆಟ್ ಮೈದಾನದಲ್ಲಿ ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್ (Yuvraj Singh) ಅವರ ಬ್ಯಾಟಿಂಗ್ ಜೊತೆಯಾಟವನ್ನು ಅಭಿಮಾನಿಗಳು ಮರೆಯುವುದಿಲ್ಲ. ಇವರಿಬ್ಬರು ಸೇರಿ ಭಾರತ ತಂಡವನ್ನು 2007 ಮತ್ತು ODI ವಿಶ್ವಕಪ್ 2011 ICC T20 ವರ್ಲ್ಡ್‌ನಲ್ಲಿ ಚಾಂಪಿಯನ್ ಮಾಡಿದರು.


Viral Video: ವಿಶಿಷ್ಟ ಶೈಲಿಯಲ್ಲಿ ವೈಡ್ ಬಾಲ್ ನೀಡಿದ Umpire, ವಿಡಿಯೋ ನೋಡಿ ನೀವೂ ಆಶ್ಚರ್ಯಚಕಿತರಾಗುವಿರಿ


ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿರುವ ಮಹಿ-ಯುವಿ :
ಎಂಎಸ್ ಧೋನಿ ಮುಂದಿನ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ, ಆದರೆ ಯುವರಾಜ್ ಸಿಂಗ್ ಇಂಡಿಯಾ ಲೆಜೆಂಡ್ಸ್‌ಗಾಗಿ (India Legends) ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ  (Road Safety World Series) ಕಾಣಿಸಿಕೊಳ್ಳಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ