ವೈರಲ್ ಆಯ್ತು ಎಂ ಎಸ್ ಧೋನಿಯ ಮೃತ ಗರ್ಲ್ ಫ್ರೆಂಡ್ ಫೋಟೋ..!
ಧೋನಿಯ ಗೆಳತಿಯ ಹೆಸರು ಪ್ರಿಯಾಂಕಾ. ಧೋನಿ , ಪ್ರಿಯಾಂಕಾ ಅವರನ್ನು ಬಹಳ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಮದುವೆಯಾಗಲು ನಿರ್ಧರಿಸದ್ದರಂತೆ. ಆದರೆ, ಕಾರು ಅಪಘಾತದಲ್ಲಿ ಪ್ರಿಯಾಂಕ ನಿಧನರದರು.
ನವದೆಹಲಿ : ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) , ಈ ದಿನಗಳಲ್ಲಿ ತಮ್ಮ ಪತ್ನಿ ಸಾಕ್ಷಿ ರಾವತ್ ಮತ್ತು ಮಗಳು ಜೀವ ಅವರೊಂದಿಗೆ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ವಾಸ್ತವವಾಗಿ, ಸಾಕ್ಷಿಯನ್ನು ಮದುವೆಯಾಗುವ ಮೊದಲು, ಧೋನಿಗೆ ತನ್ನ ಜೀವನದಲ್ಲಿ ಒಬ್ಬ ಹುಡುಗಿ ಇದ್ದರು. ಧೋನಿ (MS Dhoni) ಕೂಡಾ ಅವರನ್ನು ಬಹಳ ಪ್ರೀತಿಸುತ್ತಿದ್ದರಂತೆ. ಈ ವಿಚಾರ ಧೋನಿ ಬಗ್ಗೆ ಮೂಡಿ ಬಂದ ಚಿತ್ರ 'ಎಂ.ಎಸ್.ಧೋನಿ ದಿ ಅನ್ಟೋಲ್ಡ್ ಸ್ಟೋರಿ'ಯಲ್ಲಿಯೂ ಪ್ರಸ್ತಾಪವಾಗಿತ್ತು. ಆದರೆ ಅದೃಷ್ಟವಶಾತ್ ಧೋನಿ ಪ್ರೀತಿಸುತ್ತಿದ್ದ ಹುಡುಗಿ ಸಾವಿಗೀಡಾದರು.
ಧೋನಿಯ ಗೆಳತಿ ಸಾವಿಗೆ ಕಾರಣ :
ಧೋನಿಯ (MS Dhoni) ಗೆಳತಿಯ ಹೆಸರು ಪ್ರಿಯಾಂಕಾ. ಧೋನಿ , ಪ್ರಿಯಾಂಕಾ ಅವರನ್ನು ಬಹಳ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಮದುವೆಯಾಗಲು ನಿರ್ಧರಿಸದ್ದರಂತೆ. ಆದರೆ, ಕಾರು ಅಪಘಾತದಲ್ಲಿ ಪ್ರಿಯಾಂಕ (Priyanka Jha) ನಿಧನರದರು. ಈ ಘಟನೆ ನಡೆದು ಇಷ್ಟು ಸಮಯಗಳವರೆಗೆ ಮತ್ತೆ ಈ ವಿಚಾರ ಯಾಕೆ ಪ್ರಸ್ತಾಪವಾಗುತ್ತಿದೆ ಎಂಬ ಪ್ರಶ್ನೆ ಏಳಬಹುದು ಅದಕ್ಕೂ ಕಾರಣವಿದೆ. ಧೋನಿ ಮತ್ತು ಒಂದು ಹುಡುಗಿಯ ಫೋಟೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ (Social media) ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ, ಈ ಫೋಟೋದಲ್ಲಿರುವ ಹುಡುಗಿ ಪ್ರಿಯಾಂಕ ಎಂದು ಹೇಳಲಾಗಿದೆ.
ಇದನ್ನೂ ಓದಿ : IPL 2021: ಬಾಕಿ ಉಳಿದಿರುವ ಐಪಿಎಲ್ ಪಂದ್ಯಗಳು ಇಂಗ್ಲೆಂಡ್ ನಲ್ಲಿ ನಡೆಯುತ್ತವೆಯಾ?
ಪ್ರಿಯಾಂಕ ಸಾವಿನ ಘಟನೆಯಿಂದ ಧೋನಿ ಬಹಳವಾಗಿ ನೊಂದಿದ್ದರು. ಧೋನಿ ಆಪ್ತರ ಪ್ರಕಾರ, ಈ ಘಟನೆಯ ನಂತರ ಅವರು ಕ್ರಿಕೆಟ್ ನಿಂದ (Cricket) ದೂರ ಉಳಿಯುತ್ತಾರೆ ಅಂದುಕೊಂಡಿದ್ದರಂತೆ. ಆದರೆ, ಧೋನಿ ಈ ಎಲ್ಲಾ ನೋವುಗಳನ್ನು ಮೆಟ್ಟಿ ನಿಂತು ಕ್ರಿಕೆಟ್ ನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತಕ್ಕೆ ವಿಶ್ವಕಪ್ (World cup) ಗೆದ್ದುಕೊಟ್ಟ ಕೀರ್ತಿಯೂ ಇವರದ್ದು.
ಇದನ್ನೂ ಓದಿ : Virat Kohli: ಮಾಜಿ ಮಹಿಳಾ ಕ್ರಿಕೆಟರ್ ತಾಯಿ ಜೀವ ಉಳಿಸಿದ ವಿರಾಟ್ ಕೊಹ್ಲಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.