Team Indiaದ ಭವಿಷ್ಯದ ‘ಜಹೀರ್ ಖಾನ್’ 29 ವರ್ಷದ ಈ ಬೌಲರ್! ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಕಿಲಾಡಿ ಈತ
IND vs WI 4th T20, Mukesh Kumar: ಇನಿಂಗ್ಸ್’ನ 16ನೇ ಓವರ್’ಗೆ ಹಾರ್ದಿಕ್ ಪಾಂಡ್ಯ ಚೆಂಡನ್ನು ಪೇಸರ್ ಮುಖೇಶ್ ಕುಮಾರ್‌ಗೆ ನೀಡಿದರು. ಮುಖೇಶ್ ಈ ಓವರ್’ನಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬೌಲ್ಡ್ ಮಾಡಿದರು.
IND vs WI 4th T20, Mukesh Kumar: ಭಾರತ ಕ್ರಿಕೆಟ್ ತಂಡವು ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದ ಲಾಡರ್‌ಹಿಲ್’ನಲ್ಲಿ ಸರಣಿಯ ನಾಲ್ಕನೇ ಟಿ 20 ಪಂದ್ಯವನ್ನು ಆಡಿ ಗೆದ್ದಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಮಧ್ಯೆ ಓರ್ವ ಬೌಲರ್, ತನ್ನ ಬೌಲಿಂಗ್ ನಿಂದ ಎಲ್ಲರನ್ನೂ ಆಕರ್ಷಿಸಿದ್ದು, ಈತನ ಆಟದ ವೈಖರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಕೆಲವರು ಈತನನ್ನು ಟೀಂ ಇಂಡಿಯಾದ ಮುಂದಿನ ಜಹೀರ್ ಖಾನ್ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: 100 ವರ್ಷಗಳ ಬಳಿಕ ಈ ರಾಶಿಗೆ ಕುಬೇರ ಯೋಗ ತಂದ ಶನಿದೇವ: ದುಡ್ಡಿನ ಮಳೆ, ವರ್ಷಪೂರ್ತಿ ಅದೃಷ್ಟ-ಯಶಸ್ಸು
ಫ್ಲೋರಿಡಾದ (ಯುಎಸ್‌ಎ) ಲಾಡರ್’ಹಿಲ್’ನಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಶಿಮ್ರಾನ್ ಹೆಟ್ಮೆಯರ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. ಇವರಲ್ಲದೆ ಶಾಯ್ ಹೋಪ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 45 ರನ್ ಸೇರಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ ಗರಿಷ್ಠ 3 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.
ಇನಿಂಗ್ಸ್’ನ 16ನೇ ಓವರ್’ಗೆ ಹಾರ್ದಿಕ್ ಪಾಂಡ್ಯ ಚೆಂಡನ್ನು ಪೇಸರ್ ಮುಖೇಶ್ ಕುಮಾರ್‌ಗೆ ನೀಡಿದರು. ಮುಖೇಶ್ ಈ ಓವರ್’ನಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬೌಲ್ಡ್ ಮಾಡಿದರು. ಮುಖೇಶ್ ಅವರ ಓವರ್’ನ ಮೂರನೇ ಎಸೆತದಲ್ಲಿ ಹೋಲ್ಡರ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಬೌಲ್ಡ್ ಆದರು. 4 ಎಸೆತಗಳಲ್ಲಿ 3 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಈ ಬೌಲಿಂಗ್ ಸ್ಟೈಲ್’ಗೆ ಫಿದಾ ಆದ ಫ್ಯಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸಿಸಲಾಗುತ್ತಿದೆ.
ಭಾರತ ಪರ 200 ಏಕದಿನ, 92 ಟೆಸ್ಟ್ ಹಾಗೂ 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಜಹೀರ್ ಖಾನ್ ಎಡಗೈ ಮಧ್ಯಮ ವೇಗಿಯಾಗಿದ್ದರೂ, ಮುಖೇಶ್ ಬಲಗೈ ವೇಗದ ಬೌಲರ್. ಈ ಪಂದ್ಯದಲ್ಲಿ ಮುಖೇಶ್ 3 ಓವರ್ ಬೌಲ್ ಮಾಡಿ 25 ರನ್ ನೀಡಿ 1 ವಿಕೆಟ್ ಪಡೆದರು.
ಇದನ್ನೂ ಓದಿ: IND vs WI: 4ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು: Team India ವಿಜಯಕ್ಕೆ ಈ ಮೂವರೇ ಪ್ರಮುಖ ಕಾರಣ!
ವಿಂಡೀಸ್ ಸರಣಿಯಿಂದ ಪಾದಾರ್ಪಣೆ:
29 ವರ್ಷದ ಮುಖೇಶ್ ಕುಮಾರ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಟೆಸ್ಟ್ ನಂತರ ODI ಮತ್ತು ನಂತರ T20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ 8 ನೇ ಪಂದ್ಯವನ್ನು ಆಡುತ್ತಿದ್ದಾರೆ. ಈ ಹಿಂದೆ ಟೆಸ್ಟ್ ಪಂದ್ಯವೊಂದರಲ್ಲಿ 2 ವಿಕೆಟ್ ಹಾಗೂ 3 ಏಕದಿನ ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 2 ವಿಕೆಟ್’ಗಳನ್ನು ಪಡೆದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.