ಕೇಂದ್ರ ತ್ರಿಕೋನ ರಾಜಯೋಗ

  • Aug 13, 2023, 08:05 AM IST
1 /6

ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗಲು ಪೂರ್ಣ ಎರಡೂವರೆ ವರ್ಷಗಳು ಬೇಕಾಗುತ್ತದೆ. ಶನಿ ದೇವನು ಕುಂಭ ರಾಶಿಯಲ್ಲಿ ಸ್ಥಿತನಾಗಿರುವ ಕಾರಣ ತ್ರಿಕೋನ ರಾಜಯೋಗವು ರೂಪುಗೊಳ್ಳುತ್ತಿದೆ .

2 /6

100 ವರ್ಷಗಳ ಬಳಿಕ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗದಿಂದ ಕೆಲ ರಾಶಿಗೆ ಅದೃಷ್ಟವಿದೆ, ಧನ ಲಾಭ ಮತ್ತು ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಈ ತ್ರಿಕೋನ ರಾಜಯೋಗದ ಲಾಭ ಯಾವ ರಾಶಿಯವರಿಗೆ ಸಿಗಲಿದೆ ಎಂದು ತಿಳಿಯೋಣ.

3 /6

ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ಯೋಗವು ಅತ್ಯಂತ ಮಂಗಳಕರವಾಗಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ, ಕುಟುಂಬದಲ್ಲಿನ ದೀರ್ಘಕಾಲದ ಸಮಸ್ಯೆಗಳು ಪರಿಹಾರವಾಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ ಮತ್ತು ಧನಲಾಭವೂ ಇರುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

4 /6

ಸಿಂಹ ರಾಶಿ: ಈ ಯೋಗದ ಸಮಯದಲ್ಲಿ ಸಿಂಹ ರಾಶಿಯವರು ಕುಟುಂಬ ಮತ್ತು ಪಾಲುದಾರರ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಗೌರವ ಹೆಚ್ಚುತ್ತದೆ.

5 /6

ಕುಂಭ ರಾಶಿ: ಈ ರಾಶಿಯ ಜನರ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಬೌದ್ಧಿಕ ಸಾಮರ್ಥ್ಯವು ಬೆಳೆಯುತ್ತದೆ. ವೈವಾಹಿಕ ಜೀವನದಲ್ಲಿ ಸುಖವೃದ್ಧಿ ಮತ್ತು ಜನರು ನಿಮ್ಮ ನಡವಳಿಕೆಯಿಂದ ಆಕರ್ಷಿತರಾಗುತ್ತಾರೆ.

6 /6

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)