Alamgir Tareen: ಮುಲ್ತಾನ್ ಸುಲ್ತಾನ್ಸ್ ಫ್ರಾಂಚೈಸಿ ಮಾಲೀಕ ಆತ್ಮಹತ್ಯೆಗೆ ಶರಣು!
Alamgir Tareen: ಪಾಕಿಸ್ತಾನ್ ಸೂಪರ್ ಲೀಗ್ (PSL) ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ ನ ಮಾಲೀಕ ಅಲಂಗೀರ್ ತರೀನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಾಹೋರ್: ಮುಂಬರುವ ಏಕದಿನ ಮಾದರಿಯ ಏಷ್ಯಾ ಕಪ್ ಟೂರ್ನಿಯು ಪಾಕಿಸ್ತಾನ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ನಂತರ ಪಾಕಿಸ್ತಾನ ತಂಡವು ಏಕದಿನ ವಿಶ್ವಕಪ್ ಟೂರ್ನಿಗಾಗ ಭಾರತಕ್ಕೆ ಬರಲಿದೆ. ಇದಕ್ಕೂ ಮುನ್ನವೇ ನೆರೆಯ ದೇಶದಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ
ಮುಲ್ತಾನ್ ಸುಲ್ತಾನ್ಸ್ ಫ್ರಾಂಚೈಸಿ ಮಾಲೀಕ ಸೂಸೈಡ್!
ಪಾಕಿಸ್ತಾನ್ ಸೂಪರ್ ಲೀಗ್ (PSL) ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್‍ನ ಮಾಲೀಕ ಅಲಂಗೀರ್ ತರೀನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 63 ವರ್ಷದ ತರೀನ್ ಲಾಹೋರ್‍ನ ಗುಲ್ಬರ್ಗ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಡೇತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: IND vs WI: ಟಿ20 ಸರಣಿಗೆ ಹೊಸ ಕ್ಯಾಪ್ಟನ್.. ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ
ಗುಲ್ಬರ್ಗ್‌ನಲ್ಲಿರುವ ತನ್ನ ಮನೆಯಲ್ಲಿ ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಅಲಂಗೀರ್ ತರೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಲಾಹೋರ್ ಪೊಲೀಸರು ತಿಳಿಸಿದ್ದಾರೆ. ಡೇತ್‍ನೋಟ್‍ನಲ್ಲಿ ಆತ್ಮಹತ್ಯೆಯ ಕಾರಣವನ್ನು ಅವರು ತಿಳಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ತರೀನ್ ಸಂಬಂಧಿಕರ ಪ್ರಕಾರ, ಸ್ನೇಹಿತರು ಮತ್ತು ಆಪ್ತರೊಂದಿಗೆ ಅವರು ತಮ್ಮ ರೋಗದ ಬಗ್ಗೆ ಹೇಳಿರಲಿಲ್ಲ. ಡಿಸೆಂಬರ್‍ನಲ್ಲಿ ಮದುವೆಯಾಗಬೇಕಿದ್ದ ಅವರು ಅನಾರೋಗ್ಯದ ಕಾರಣ ಸೂಸೈಡ್ ಮಾಡಿಕೊಂಡಿದ್ದಾರೆ. ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿರುವ ತರೀನ್ ಪಾಕಿಸ್ತಾನದ ದಕ್ಷಿಣ ಪಂಜಾಬ್‍ನಲ್ಲಿ ಪ್ರಮುಖ ಉದ್ಯಮಿಯಾಗಿ ಹೆಸರು ಗಳಿಸಿದ್ದರು.
ರಿಜ್ವಾನ್ ನಾಯಕತ್ವ
ತರೀನ್ ಒಡೆತನದ ಮುಲ್ತಾನ್ ಸುಲ್ತಾನ್ಸ್ ತಂಡವು ಪಾಕಿಸ್ತಾನ ರಾಷ್ಟ್ರೀಯ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿದೆ. 2021ರಲ್ಲಿ ಮುಲ್ತಾನ್ ಸುಲ್ತಾನ್ ತಂಡವು ಫೈನಲ್ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಸೋಲಿಸಿ ಮೊದಲ ಬಾರಿ ಪಿಎಸ್‌ಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.
ಇದನ್ನೂ ಓದಿ: ಸಚಿನ್ ಅಲ್ಲಾ, ಧೋನಿ ಅಲ್ಲಾ, ವಿರಾಟ್ ಕೂಡ ಅಲ್ಲಾ...ಈ ಕ್ರಿಕೆಟ್ ಆಟಗಾರನ ಆಸ್ತಿ ಬರೋಬ್ಬರಿ 20,000 ಕೋಟಿ ರೂ....!
ಜೈಲಿಗೆ ಹೋಗಿದ್ದ ತರೀನ್!
ಸುಮಾರು 7 ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ತರೀನ್ ಬೆಳಕಿಗೆ ಬಂದಿದ್ದರು. 2016ರಲ್ಲಿ ಅವರು 1 ದಿನ ಜೈಲಿನಲ್ಲಿ ಕಳೆದಿದ್ದರು. ತರೀನ್ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಹೀಗಾಗಿಯೇ ಅವರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (PSL) ತಂಡವನ್ನು ಖರೀದಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.