ನವದೆಹಲಿ: ಸಚಿನ್ ತೆಂಡೂಲ್ಕರ್ ಅವರ ಪುತ್ರ ಮತ್ತು ಮುಂಬೈ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಕಳೆದ ಎರಡು ಸೀಸನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.ಆದಾಗ್ಯೂ ಅವರು ಈ ಬಾರಿ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗಿದ್ದರು.ಈ ಹಿನ್ನೆಲೆಯಲ್ಲಿ ಈಗ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಅವರು ಅರ್ಜುನ್ ತೆಂಡೂಲ್ಕರ್ ಸ್ಥಾನ ಪಡೆಯಲು ಕೆಲವೊಂದು ವಿಭಾಗಗಳಲ್ಲಿ ಸುಧಾರಿಸಬೇಕು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ವರ್ಷದ ಆರಂಭದಲ್ಲಿ ನಡೆದ ಐಪಿಎಲ್ 2022 ಮೆಗಾ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗಳಿಗೆ ಖರೀಧಿಸಿತ್ತು. ಅವರು ಎರಡನೇ ಬಾರಿಗೆ ಹರಾಜಿನಲ್ಲಿ ಆಯ್ಕೆಯಾಗಿದ್ದರು ಕೂಡ 11 ರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.ಹಾಗಾಗಿ 11 ಬಳಗದಲ್ಲಿ ಸ್ಥಾನ ಪಡೆಯಲು ಅರ್ಜುನ್ ತೆಂಡೂಲ್ಕರ್ ಮಾಡಬೇಕಾಗಿರುವುದೇನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಶೇನ್ ಬಾಂಡ್ 'ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸುಧಾರಿಸಬೇಕು ಎಂದು ಹೇಳಿದ್ದರು.


ಇನ್ನೊಂದೆಡೆಗೆ ಮುಂಬೈ ಇಂಡಿಯನ್ಸ್ ತಂಡವು ಹರಾಜಿನಲ್ಲಿ ಖರೀದಿಸಿದ 24 ಆಟಗಾರರಲ್ಲಿ 21 ಆಟಗಾರರಿಗೆ ಅವಕಾಶವನ್ನು ನೀಡಿತ್ತು, ಈ ಬಾರಿ ನಿರಾಶಾದಾಯಕ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡವು ಕನಿಷ್ಠ ಕೊನೆಯ ಪಂದ್ಯದಲ್ಲಾದರೂ ಅರ್ಜುನ್  ತೆಂಡೂಲ್ಕರ್ ಅವರಿಗೆ 11 ರ ಬಳಗದಲ್ಲಿ ಸ್ಥಾನ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೊನೆಗೂ ಅವರಿಗೆ ಕೊನೆಯ ಪಂದ್ಯದಲ್ಲಿಯೂ ಅವಕಾಶ ಸಿಗದಿರುವುದು ಬಹುತೇಕರಿಗೆ ನಿರಾಸೆಯನ್ನುಂಟು ಮಾಡಿತು.


ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಭಯದಿಂದ ನಡುಗುತ್ತಿರುವುದೇಕೆ?


ಇದಕ್ಕೂ ಮುನ್ನ ಅರ್ಜುನ್‌ ತಂಡದಲ್ಲಿ ಸ್ಥಾನ ಪಡೆಯುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಸಚಿನ್ ತೆಂಡೂಲ್ಕರ್ 'ಹನ್ನೊಂದರಲ್ಲಿ ಅವಕಾಶ ಪಡೆಯುವ ಬಗ್ಗೆ ಯೋಚಿಸುವ ಬದಲು ಅವರ ಆಟದತ್ತ ಗಮನ ಹರಿಸಬೇಕು, ಇನ್ನೂ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಎಂದಿಗೂ ತೊಡಗಿಸಿಕೊಂಡಿಲ್ಲ.ನಾನು ಈ ಎಲ್ಲ ವಿಷಯಗಳನ್ನು ಮ್ಯಾನೇಜ್‌ಮೆಂಟ್‌ಗೆ ಬಿಡುತ್ತೇನೆ, ಏಕೆಂದರೆ ನಾನು ಯಾವಾಗಲೂ ಹೀಗೆಯೇ ಕಾರ್ಯನಿರ್ವಹಿಸುತ್ತಿದ್ದೇನೆ, ”ಎಂದು ಸಚಿನ್ ತೆಂಡೂಲ್ಕರ್ ಹೇಳಿದರು.


ಇದನ್ನೂ ಓದಿ: ಛತ್ರಪತಿ ಶಿವಾಜಿ ಆಗ್ತಾರಾ ರಾಕಿಂಗ್‌ ಸ್ಟಾರ್‌ ಯಶ್‌! ವೈರಲ್‌ ಆಗ್ತಿರುವ ಪೋಸ್ಟರ್‌ ಅಸಲಿಯತ್ತೇನು?https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.