Mumbai Indians Unique T20 Record: ಇಂದು ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ತಮ್ಮ ಮೊದಲ ಜಯ ದಾಖಲಿಸಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಡೆ ಗೆದ್ದು ಬೀಗಿದ್ದಲ್ಲದೆ, ವಿಶೇಷ ದಾಖಲೆಯನ್ನೇ ಬರೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2024: ವಾಂಖೇಡೆ ಮೈದಾನದಲ್ಲಿ ಹಿಟ್ ಮ್ಯಾನ್ ಘರ್ಜನೆ, ವಾರ್ನರ್-ಕೊಹ್ಲಿಯ ಸ್ಪೆಷಲ್ ಕ್ಲಬ್ ಗೆ ಎಂಟ್ರಿ!


ಬ್ಯಾಟ್ಸ್‌ಮನ್‌’ಗಳ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಮುಂಬೈ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 234 ಗಳಿಸಿತು. ಪ್ರತ್ಯುತ್ತರವಾಗಿ ಡೆಲ್ಲಿ ಎಂಟು ವಿಕೆಟ್ ನಷ್ಟಕ್ಕೆ 208 ರನ್ ಗಳಿಸುವಷ್ಟರಲ್ಲಿ 29 ರನ್‌’ಗಳಿಂದ ಪಂದ್ಯವನ್ನು ಕಳೆದುಕೊಂಡಿತು.


ಇನ್ನು ಪಂದ್ಯದ ವೇಳೆ ಮುಂಬೈ ತಂಡ ಅಮೋಘ ದಾಖಲೆಯನ್ನೂ ಮಾಡಿದೆ. ಮುಂಬೈ ಇಂಡಿಯನ್ಸ್ ಮಾಡಿದ 234 ರನ್‌’ಗಳ ಸ್ಕೋರ್’ನಲ್ಲಿ ಯಾವೊಬ್ಬ ಬ್ಯಾಟ್ಸ್’ಮನ್ ಕೂಡ ಅರ್ಧಶತಕ ಬಾರಿಸಿಲ್ಲ. ಈ ಮೂಲಕ T20 ಕ್ರಿಕೆಟ್‌’ನಲ್ಲಿ ಅರ್ಧಶತಕವಿಲ್ಲದೆ ಗರಿಷ್ಠ ಸ್ಕೋರ್ ತಲುಪಿದ ತಂಡ ಎಂದೆನಿಸಿಕೊಂಡಿದೆ.


ದೆಹಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ರೋಹಿತ್ ಶರ್ಮಾ 49, ಟಿಮ್ ಡೇವಿಡ್ 45, ಇಶಾನ್ ಕಿಶನ್ 42, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರೊಮಾರಿಯೋ ಶೆಫರ್ಡ್ ತಲಾ 39 ರನ್ ಗಳಿಸಿದರು.


ಇದನ್ನೂ ಓದಿ:  ದಷ್ಟಪುಷ್ಟ ಕೂದಲಿಗೆ ಅಮೃತ ಈ ಒಣಹಣ್ಣಿನ ಸಿಪ್ಪೆ: 5 ದಿನದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಆದ್ರೆ ಬಳಕೆ ವಿಧಾನ ಹೀಗೇ ಇರಲಿ


ಇನ್ನು ಡೆಲ್ಲಿ ಪರ ಪೃಥ್ವಿ ಶಾ 40 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ