Hardik Pandya Comments: ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ CSK 20 ರನ್‌ಗಳಿಂದ ಜಯಗಳಿಸಿತ್ತು. ಮುಂಬೈ ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಸಿಡಿಸಿದರೂ ತಂಡ ಸೋಲನುಭವಿಸಿತು... ಈ ಪಂದ್ಯದ ಕೊನೆಯಲ್ಲಿ ಬ್ಯಾಟಿಂಗ್ ಗೆ ಬಂದ ಧೋನಿ 4 ಎಸೆತಗಳಲ್ಲಿ 20 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯದ ನಂತರ ಧೋನಿಯನ್ನು ಹೊಗಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆ


"CSK ಗೆಲುವಿನ ಹಿಂದಿರುವ ಸೂತ್ರಧಾರ ಧೋನಿಯವರು.. ಅವರಿಗೆ ಆಟವನ್ನು ಹೇಗೆ ಆಡಬೇಕು ಎನ್ನುವುದು ತುಂಬಾ ಚೆನ್ನಾಗಿ ಗೊತ್ತು.. ಅಲ್ಲದೇ ಅವರು ತಮ್ಮ ತಂಡದವರಿಗೂ ಅದನ್ನು ಹೇಳಿಕೊಡುತ್ತಾರೆ.. ಅದೇ ರೀತಿ ಈ ಪಂದ್ಯದಲ್ಲಿ ಚೆನ್ನೈ ತಂಡ ಯೋಜನೆ ಪ್ರಕಾರ ಆಡಿದೆ.. ನಾವು ಈ ಭಾರೀ ಬೃಹತ್‌ ಗುರಿಯನ್ನು ಬೆನ್ನಟ್ಟಿ ಆಕ್ರಮಣಕಾರಿ ಆಟ ಆರಂಭಿಸಿದವು.. ಆದರೆ ಪತಿರಾನ್‌ ಸತತ ವಿಕೆಟ್‌ ಪಡೆದಿದ್ದರಿಂದ ನಾವು ಅದೇ ಆಟವನ್ನು ಮುಂದುವರೆಸಿಕೊಳ್ಳಲು ಸಾಧ್ಯವಾಗಲಿಲ್ಲ.. ಈ ಸೋಲಿನಿಂದ ಪಾಠ ಕಲಿತು ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತೇವೆ" ಎಂದು ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ.. 


ಇದನ್ನೂ ಓದಿ-Virat Kohli: ಜೈಪುರದಲ್ಲಿ ಅನಾವರಣಗೊಳ್ಳಲಿದೆ ʼಕಿಂಗ್‌ ಕೊಹ್ಲಿʼ ಪ್ರತಿಮೆ! ಫಸ್ಟ್ ಲುಕ್ ಹೇಗಿದೆ ನೀವೇ ನೋಡಿ!!


ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಈ ವೇಳೆ ಆರಂಭಿಕರಾಗಿ ಬಂದ ರಹಾನೆ ವಿಫಲರಾದರು. ಮತ್ತೋರ್ವ ಆರಂಭಿಕ ಆಟಗಾರ ರಚಿನ್ ರವೀಂದ್ರ 21 ರನ್ ಗಳಿಸಿ ಉತ್ತಮ ಪ್ರದರ್ಶನ ತೋರಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಿವಂ ದುಬೆ ಕೂಡ ಅರ್ಧಶತಕ ಸಿಡಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.