WPL 2023: ಫೈನಲ್’ಗೆ ಲಗ್ಗೆಯಿಟ್ಟ ಮುಂಬೈ: ಯುಪಿಗೆ ಸಿಂಹಸ್ವಪ್ನವಾದ ಪೇಸರ್’ನಿಂದ ಇತಿಹಾಸ ಸೃಷ್ಟಿ
Mumbai Indians enters WPL 2023 final: ಯುಪಿ ತಂಡವು ಫೀಲ್ಡಿಂಗ್ ಮತ್ತು ಬ್ಯಾಟಿಂಗ್’ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿತು, ಕಿರಣ್ ನವಗಿರೆ ಮಾತ್ರ ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 43 ರನ್‌ಗಳ ಅಬ್ಬರದ ಇನ್ನಿಂಗ್ಸ್ ಅನ್ನು ಆಡಿದರು. ಆದರೆ ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು 20 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.
Mumbai Indians enters WPL 2023 final: ಮುಂಬೈ ಇಂಡಿಯನ್ಸ್ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಉದ್ಘಾಟನಾ ಪಂದ್ಯದಲ್ಲಿ ಫೈನಲ್’ಗೆ ಪ್ರವೇಶಿಸಿದೆ. ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ನಟಾಲಿ ಸ್ಕಿವರ್ ಬ್ರಂಟ್ (ಔಟಾಗದೆ 72) ಅವರ ಅದ್ಭುತ ಬ್ಯಾಟಿಂಗ್ ಮತ್ತು ವೇಗಿ ಇಸ್ಸಿ ವಾಂಗ್ (15ಕ್ಕೆ 4) ಅವರ ಅಬ್ಬರದ ಬೌಲಿಂಗ್ ಕಾರಣದಿಂದ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ 72 ರನ್’ಗಳ ಭರ್ಜರಿ ಜಯ ಸಾಧಿಸಿದೆ, 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ನಟಾಲಿಯ ಅರ್ಧಶತಕದೊಂದಿಗೆ ಬ್ಯಾಟಿಂಗ್’ಗೆ ಆಹ್ವಾನಿಸಲ್ಪಟ್ಟ ಮುಂಬೈ ಇಂಡಿಯನ್ಸ್ 4 ವಿಕೆಟ್‌ಗೆ 182 ರನ್ ಗಳಿಸಿತು. ಇದಾದ ಬಳಿಕ ಯುಪಿ ತಂಡ 17.4 ಓವರ್‌ಗಳಲ್ಲಿ 110 ರನ್ ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ: IPL 2023 : ಗುಜರಾತ್ ಟೈಟಾನ್ಸ್‌ಗೆ ಶತ್ರುವಾಗಿ ಕಾಡಲಿದ್ದಾನೆ ಸಿಎಸ್ಕೆ ತಂಡದ ಈ ಆಟಗಾರ!
ಯುಪಿ ತಂಡವು ಫೀಲ್ಡಿಂಗ್ ಮತ್ತು ಬ್ಯಾಟಿಂಗ್’ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿತು, ಕಿರಣ್ ನವಗಿರೆ ಮಾತ್ರ ಮುಂಬೈ ಇಂಡಿಯನ್ಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 43 ರನ್‌ಗಳ ಅಬ್ಬರದ ಇನ್ನಿಂಗ್ಸ್ ಅನ್ನು ಆಡಿದರು. ಆದರೆ ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು 20 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಇತಿಹಾಸ ಸೃಷ್ಟಿಸಿದ ಪೇಸರ್ ವಾಂಗ್:
ಮುಂಬೈ ಇಂಡಿಯನ್ಸ್ ಪರ ಪೇಸರ್ ವಾಂಗ್ ಅವರು ತಮ್ಮ ಮೂರನೇ ಮತ್ತು ತಂಡದ 13ನೇ ಓವರ್‌ನಲ್ಲಿ ಸತತ ಮೂರು ಎಸೆತಗಳಲ್ಲಿ ನವಗಿರೆ, ಸಿಮ್ರಾನ್ ಶೇಖ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯಾವಳಿಯ ಮೊದಲ ಹ್ಯಾಟ್ರಿಕ್ ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಇವರಲ್ಲದೆ ಸೈಕಾ ಇಶಾಕ್ 2/24, ನಟಾಲಿ ಬ್ರಂಟ್, ಹ್ಯಾಲಿ ಮ್ಯಾಥ್ಯೂಸ್ ಮತ್ತು ಜಿ ಕಲಿತಾ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: IPL 2023 : ಈ ಬಾರಿಯೂ ʼRCBʼ ಗೆಲ್ಲೋದು ಡೌಟ್..! ಮಾಜಿ ಕ್ರಿಕೆಟಿಗನ ಶಾಕಿಂಗ್ ಭವಿಷ್ಯ
ತಮ್ಮ ಸ್ಪಿನ್ ಬೌಲರ್‌ಗಳ ಬಲದಿಂದ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ತಂಡವು ಮೊದಲ 10 ಓವರ್‌ಗಳಲ್ಲಿ ಹಿಡಿತ ಸಾಧಿಸಿತು. ನಟಾಲಿ ಹೊರತುಪಡಿಸಿ, ಮುಂಬೈ ಬ್ಯಾಟ್ಸ್‌ಮನ್‌ಗಳು ಯಾರೂ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಇನ್ನು ಮುಂಬೈ ಪರ ಅಮೆಲಿಯಾ ಕೆರ್ 19 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 29 ರನ್ ಗಳಿಸಿದರು. ಕೆರ್ ಜತೆಗೂಡಿ ನಟಾಲಿ ನಾಲ್ಕನೇ ವಿಕೆಟ್‌ಗೆ 60 ರನ್ ಸೇರಿಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.