ಬರೆದಿಟ್ಟುಕೊಳ್ಳಿ… IPL 2023ರ ಚಾಂಪಿಯನ್ಸ್ ಆಗೋದು ಇದೇ ತಂಡ: ಈ 3 ಕಾರಣಗಳೇ ಇದಕ್ಕೆ ಸಾಕ್ಷಿ!

IPL Champion 2023: ಮುಂಬೈ 17.50 ಕೋಟಿ ಮೌಲ್ಯದ ಆಟಗಾರನನ್ನು ಹೊಂದಿದೆ. ಆಸ್ಟ್ರೇಲಿಯಾದ 23 ವರ್ಷದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಈ ಫ್ರಾಂಚೈಸಿ ಇಷ್ಟು ದುಬಾರಿ ಮೊತ್ತಕ್ಕೆ ದೊಡ್ಡ ಮನಸ್ಸಿನಿಂದ ಖರೀದಿಸಿದೆ. ಕ್ಯಾಮರೂನ್ ಗ್ರೀನ್ ಕೂಡ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಕ್ಯಾಮರೂನ್ ಗ್ರೀನ್ ಇದುವರೆಗೆ 20 ಟೆಸ್ಟ್, 15 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

Written by - Bhavishya Shetty | Last Updated : Mar 25, 2023, 12:10 AM IST
    • ಯಾವ ತಂಡವು ಐಪಿಎಲ್ ಚಾಂಪಿಯನ್ ಆಗಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ,
    • ಕ್ಯಾಮರೂನ್ ಗ್ರೀನ್ ಅವರನ್ನು ಈ ಫ್ರಾಂಚೈಸಿ ಇಷ್ಟು ದುಬಾರಿ ಮೊತ್ತಕ್ಕೆ ದೊಡ್ಡ ಮನಸ್ಸಿನಿಂದ ಖರೀದಿಸಿದೆ.
    • ಗ್ರೀನ್ ಅವರನ್ನು ಈ ಫ್ರಾಂಚೈಸಿ ಇಷ್ಟು ದುಬಾರಿ ಮೊತ್ತಕ್ಕೆ ದೊಡ್ಡ ಮನಸ್ಸಿನಿಂದ ಖರೀದಿಸಿದೆ.
ಬರೆದಿಟ್ಟುಕೊಳ್ಳಿ… IPL 2023ರ ಚಾಂಪಿಯನ್ಸ್ ಆಗೋದು ಇದೇ ತಂಡ: ಈ 3 ಕಾರಣಗಳೇ ಇದಕ್ಕೆ ಸಾಕ್ಷಿ! title=
IPL 2023

IPL Champion 2023: ಇಂಡಿಯನ್ ಪ್ರೀಮಿಯರ್ ಲೀಗ್‌’ನ 16 ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ತಯಾರಿಯಲ್ಲಿ ತೊಡಗಿವೆ. ಆಟಗಾರರು ತಮ್ಮ ತಮ್ಮ ಫ್ರಾಂಚೈಸಿಗಳ ಜೆರ್ಸಿಯಲ್ಲಿ ಅಬ್ಬರಿಸಲು ಉತ್ಸುಕರಾಗಿದ್ದಾರೆ. ಈ ಮಧ್ಯೆ, ಐಪಿಎಲ್ ಚಾಂಪಿಯನ್ ಬಗ್ಗೆಯೂ ಭವಿಷ್ಯ ನುಡಿಯಲಾಗಿದೆ. ಯಾವ ತಂಡವು ಐಪಿಎಲ್ ಚಾಂಪಿಯನ್ ಆಗಬಹುದು ಎಂದು ಇಂದು ನಾವು ನಿಮಗೆ ಹೇಳುತ್ತೇವೆ, ಅದಕ್ಕೆ ಕೆಲವು ಕಾರಣಗಳಿವೆ.

ಇದನ್ನೂ ಓದಿ: Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ

ನಾವು ಮಾತನಾಡುತ್ತಿರುವ ತಂಡವು ಬೇರಾವುದು ಅಲ್ಲ. 5 ಬಾರಿಯ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಬಗ್ಗೆ. ಮುಂಬೈ 17.50 ಕೋಟಿ ಮೌಲ್ಯದ ಆಟಗಾರನನ್ನು ಹೊಂದಿದೆ. ಆಸ್ಟ್ರೇಲಿಯಾದ 23 ವರ್ಷದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಈ ಫ್ರಾಂಚೈಸಿ ಇಷ್ಟು ದುಬಾರಿ ಮೊತ್ತಕ್ಕೆ ದೊಡ್ಡ ಮನಸ್ಸಿನಿಂದ ಖರೀದಿಸಿದೆ. ಕ್ಯಾಮರೂನ್ ಗ್ರೀನ್ ಕೂಡ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಕ್ಯಾಮರೂನ್ ಗ್ರೀನ್ ಇದುವರೆಗೆ 20 ಟೆಸ್ಟ್, 15 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರ ಒಟ್ಟಾರೆ T20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ ಗ್ರೀನ್ 21 ಪಂದ್ಯಗಳಲ್ಲಿ 245 ರನ್ ಗಳಿಸಿ 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ ಜೊತೆಗೆ 5 ವಿಕೆಟ್ ಕೂಡ ಕಬಳಿಸಿದ್ದಾರೆ. ಗ್ರೀನ್ ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 3185 ರನ್ ಮತ್ತು 63 ವಿಕೆಟ್‌ಗಳನ್ನು ಪಡೆದಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವವೇ ಮುಂಬೈನ ದೊಡ್ಡ ಶಕ್ತಿ. ರೋಹಿತ್ ನಾಯಕತ್ವದ ಸಾಮರ್ಥ್ಯ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ರೋಹಿತ್ ಈ ತಂಡದ ನಾಯಕತ್ವವನ್ನು ಅದ್ಭುತ ರೀತಿಯಲ್ಲಿ ನಿರ್ವಹಿಸಿದ್ದಾರೆ. ಪ್ರತಿಯೊಬ್ಬ ಆಟಗಾರನಿಂದಲೂ ಅತ್ಯುತ್ತಮವಾದುದನ್ನು ಹೊರತೆಗೆಯುವುದು ಅವರ ನಾಯಕತ್ವದ ಅದ್ಭುತವಾಗಿದೆ. ರೋಹಿತ್ ಆಡಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾನೆ ಎಂದು ಹಲವು ಆಟಗಾರರು ಹೇಳಿದ್ದಾರೆ. ಐದು ಬಾರಿಯ ಐಪಿಎಲ್ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್‌’ನಲ್ಲಿ ಕೆಲವು ಆಟಗಾರರಿದ್ದು, ಅವಕಾಶ ಸಿಕ್ಕಾಗ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ 'ಮಿಸ್ಟರ್-360 ಡಿಗ್ರಿ' ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೂಡ ಇದ್ದಾರೆ. ಸದ್ಯದ ಯುಗದಲ್ಲಿ ಸೂರ್ಯಕುಮಾರ್ ಅವರನ್ನು ಟಿ20 ಕ್ರಿಕೆಟ್‌’ನ ರಾಜ ಎಂದು ಕರೆಯಲಾಗುತ್ತದೆ. 32ರ ಹರೆಯದ ಸೂರ್ಯ ಟಿ20 ಮಾದರಿಯಲ್ಲಿ ಮೂರು ಶತಕ ಹಾಗೂ 37 ಅರ್ಧ ಶತಕ ಸಿಡಿಸಿದ್ದಾರೆ. ಅವರು ಈ ಸ್ವರೂಪದಲ್ಲಿ ಒಟ್ಟಾರೆ 5898 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಸರಾಸರಿ 34.49 ಆಗಿತ್ತು.

ಇದನ್ನೂ ಓದಿ: Most Valuable Celebrity: 2022ರ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿ ಯಾರು ಗೊತ್ತಾ? ರಶ್ಮಿಕಾ, ಕೊಹ್ಲಿಗೆ ಠಕ್ಕರ್ ಕೊಟ್ಟ ಸ್ಟಾರ್ ನಟ!

ಮುಂಬೈ ಇಂಡಿಯನ್ಸ್ ಅಂತಿಮ ತಂಡ:

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೂವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ , ಜೇಸನ್ ಬೆಹ್ರೆನ್‌ಡಾರ್ಫ್, ಆಕಾಶ್ ಮಾಧ್ವಲ್, ಕ್ಯಾಮೆರಾನ್ ಗ್ರೀನ್, ಜ್ಯೆ ರಿಚರ್ಡ್‌ಸನ್, ಪಿಯೂಷ್ ಚಾವ್ಲಾ, ಡಿ ಜಾನ್ಸನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ ಮತ್ತು ರಾಘವ್ ಗೋಯಲ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News