Major Cricket League’ನಲ್ಲೂ ಮುಂಬೈ ಇಂಡಿಯನ್ಸ್ ಹವಾ: ನ್ಯೂಯಾರ್ಕ್ ಫ್ರಾಂಚೈಸಿಯನ್ನೇ ಖರೀದಿಸಿದ ಅಂಬಾನಿ ಪಡೆ
Major Cricket League: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಮುಂಬೈ ಇಂಡಿಯನ್ಸ್ `ಎಂಐ ನ್ಯೂಯಾರ್ಕ್` ತಂಡವನ್ನು ಖರೀದಿಸಿದೆ, ಈ ಹೊಸ ತಂಡವು ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್’ನಲ್ಲಿ ಆಡಲಿದೆ. `ಮೇಜರ್ ಲೀಗ್ ಕ್ರಿಕೆಟ್` ಎಂಬುದು ಅಮೆರಿಕಾದಲ್ಲಿ ನಡೆಸಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್ ಚಾಂಪಿಯನ್ಷಿಪ್.
Major Cricket League: ನ್ಯೂಯಾರ್ಕ್/ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಮುಂಬೈ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್ ಫ್ರಾಂಚೈಸಿಯಾಗಿ 'ಎಂಐ ನ್ಯೂಯಾರ್ಕ್' ತಂಡದ ಪ್ರಸ್ತಾವಿತ ಹೊಸ ಸೇರ್ಪಡೆಯನ್ನು ಇಂದು ಘೋಷಿಸುತ್ತಿದೆ. ನ್ಯೂಯಾರ್ಕ್ ಮೂಲದ ಈ ತಂಡದಿಂದ ಮುಂಬೈ ಇಂಡಿಯನ್ಸ್ ಕುಟುಂಬ ಇನ್ನಷ್ಟು ವಿಸ್ತಾರಗೊಂಡಿದೆ. ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ನಲ್ಲಿ (ಎಂಎಲ್ಸಿ) ಆಡಲಿದೆ.
ಇದನ್ನೂ ಓದಿ: ಈ ಸಲ ಕಪ್ ನಮ್ದೆ..!! IPL ಟ್ರೋಫಿ ಪಡೆದೇ ತೀರುತ್ತೇವೆ ಅಂತಾ ಪಣತೊಟ್ಟಿದ್ದಾರೆ RCBಯ ಈ 5 ಆಟಗಾರರು
'ಬೆಳೆಯುತ್ತಿರುವ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನ್ಯೂಯಾರ್ಕ್ ಫ್ರಾಂಚೈಸಿಯನ್ನು ಸ್ವಾಗತಿಸಲು ನಾನು ಅಪಾರ ಉತ್ಸುಕಳಾಗಿದ್ದೇನೆ. ಅಮೆರಿಕದ ಕ್ರಿಕೆಟ್ ಲೀಗ್ಗೆ ಇದೇ ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿದ್ದೇವೆ. ನಿರ್ಭೀತಿ ಮತ್ತು ಮನರಂಜನೆಯ ಕ್ರಿಕೆಟ್ ಆಟದ ಜಾಗತಿಕ ಬ್ರ್ಯಾಂಡ್ ಆಗಿ ಮುಂಬೈ ಇಂಡಿಯನ್ಸ್ ಅನ್ನು ರೂಪಿಸುವ ಭರವಸೆ ನನ್ನದು. ಮುಂಬೈ ಇಂಡಿಯನ್ಸ್ ಗೆ ಇದು ಇನ್ನೊಂದು ಹೊಸ ಆರಂಭವಾಗಿದೆ. ನಾನು ಮುಂದಿನ ಉತ್ಸಾಹಿ ಪ್ರಯಾಣವನ್ನು ಎದುರು ನೋಡುತ್ತಿದ್ದೇನೆ' ಎಂದು ನೀತಾ ಅಂಬಾನಿ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಕುಟುಂಬವು ಕ್ರಿಕೆಟ್ ಆಟವನ್ನು ಜಗತ್ತಿನೆಲ್ಲೆಡೆ ವಿಸ್ತರಿಸಲು ಮತ್ತು ಉತ್ತೇಜಿಸಲು ಬದ್ಧವಾಗಿದೆ. ಜೊತೆಗೆ ಪ್ರತಿದಿನ ಬಲಿಷ್ಠವಾಗಿ ಬೆಳೆಯುತ್ತಲೇ ಇದೆ. ಈ ಕುಟುಂಬದಲ್ಲಿ ಮುಂಬೈ ಇಂಡಿಯನ್ಸ್ (ಐಪಿಎಲ್), ಎಂಐ ಕೇಪ್ಟೌನ್ (ಎಸ್ಎ20), ಎಂಐ ಎಮಿರೇಟ್ಸ್ (ಐಎಲ್ಟಿ20) ಮತ್ತು ಮುಂಬೈ ಇಂಡಿಯನ್ಸ್ (ಡಬ್ಲ್ಯುಪಿಎಲ್) ಬಳಿಕ 'ಎಂಐ ನ್ಯೂಯಾರ್ಕ್' 5ನೇ ಫ್ರಾಂಚೈಸಿ ಆಗಿದ್ದು, ಮೂರು ಭಿನ್ನ ಖಂಡಗಳಲ್ಲಿ, ನಾಲ್ಕು ಭಿನ್ನ ದೇಶಗಳಲ್ಲಿ ಮತ್ತು ಐದು ಭಿನ್ನ ಕ್ರಿಕೆಟ್ ಲೀಗ್ಗಳಲ್ಲಿ ತಂಡಗಳನ್ನು ಹೊಂದಿದಂತಾಗಿದೆ.
ವಿಶ್ವದ ಎಲ್ಲೆಡೆ ಸುಮಾರು 50 ದಶಲಕ್ಷ ಡಿಜಿಟಲ್ ಅಭಿಮಾನಿಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಅತ್ಯಂತ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿರುವ ಜಾಗತಿಕ ಕ್ರಿಕೆಟ್ ಬ್ರ್ಯಾಂಡ್ ಎನಿಸಿದೆ. ವಿಶ್ವದೆಲ್ಲೆಡೆಯ ಪ್ರಮುಖ ಫ್ರಾಂಚೈಸಿ ಲೀಗ್ಗಳಲ್ಲಿ ವರ್ಷದಲ್ಲಿ ಸರಿಸುಮಾರು 6 ತಿಂಗಳ ಕಾಲ ಕ್ರಿಕೆಟ್ ಆಡುವ ಎಂಐ ಕುಟುಂಬದ ಈ ತಂಡಗಳನ್ನು ಅಭಿಮಾನಿಗಳು ಬೆಂಬಲಿಸುತ್ತ ಮತ್ತು ಹುರಿದುಂಬಿಸುತ್ತ ಬಂದಿದ್ದಾರೆ. 2009ರಿಂದ ಮುಂಬೈ ಇಂಡಿಯನ್ಸ್ ಶೇ. 99ರಷ್ಟು ಬ್ರ್ಯಾಂಡ್ ಮೌಲ್ಯದ ಪ್ರಗತಿ ಕಂಡಿದೆ.
ಇದನ್ನೂ ಓದಿ: Test Captaincy: ಹೀನಾಯ ಸೋಲಿನ ಬಳಿ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಸ್ಟಾರ್ ಆಟಗಾರ!
'ಮೇಜರ್ ಲೀಗ್ ಕ್ರಿಕೆಟ್' ಅಮೆರಿಕಾದಲ್ಲಿ ನಡೆಸಲಾಗುವ ಮೊದಲ ವೃತ್ತಿಪರ ಟಿ20 ಕ್ರಿಕೆಟ್ ಚಾಂಪಿಯನ್ ಶಿಪ್ ಆಗಿದೆ. 2023ರ ಬೇಸಿಗೆ ಋತುವಿನಲ್ಲಿ ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: www.majorleaguecricket.com
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.