Test Captaincy: ಹೀನಾಯ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಸ್ಟಾರ್ ಆಟಗಾರ!

Dimuth Karunaratne Step Down Test Captaincy: ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಕೀವೀಸ್ ಪಡೆ ಜಯಗಳಿಸಿದೆ. ಈ ಬಳಿಕ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಲು ಶ್ರೀಲಂಕಾ ಆಟಗಾರ ದಿಮುತ್ ಕರುಣಾರತ್ನೆ ಮುಂದಾಗಿದ್ದಾರೆ ಎನ್ನಲಾಗಿದೆ.

Written by - Bhavishya Shetty | Last Updated : Mar 20, 2023, 04:46 PM IST
    • ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಿತು.
    • ನ್ಯೂಜಿಲೆಂಡ್ ಜಯಗಳಿಸಿ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
    • ಈ ಸೋಲಿನ ಬಳಿಕ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
Test Captaincy: ಹೀನಾಯ ಸೋಲಿನ ಬಳಿಕ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಸ್ಟಾರ್ ಆಟಗಾರ! title=
Dimuth Karunaratne

Dimuth Karunaratne Step Down Test Captaincy: ಟೀಂ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಸರಣಿಯನ್ನು ಆಡುತ್ತಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಿತು. ಶ್ರೀಲಂಕಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಇನಿಂಗ್ಸ್ ಮತ್ತು 58 ರನ್‌ಗಳಿಂದ ಜಯಗಳಿಸಿ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಸೋಲಿನ ಬಳಿಕ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: Team India : ಟೀಂ ಇಂಡಿಯಾ Playing 11 ನಿಂದ ಸೂರ್ಯಕುಮಾರ್ ಯಾದವ್ ಔಟ್!?

ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲಿನ ನಂತರ ದಿಮುತ್ ಕರುಣಾರತ್ನೆ ನಾಯಕತ್ವ ತ್ಯಜಿಸುವ ಮನಸ್ಸು ಮಾಡಿದ್ದಾರೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ಗೆ ಹೊಸ ಟೆಸ್ಟ್ ನಾಯಕನನ್ನು ಆಯ್ಕೆ ಮಾಡುವಂತೆ ಶ್ರೀಲಂಕಾದ ಆಯ್ಕೆದಾರರ ಬಳಿ ದಿಮುತ್ ಕರುಣಾರತ್ನೆ ಕೇಳಿಕೊಂಡಿದ್ದಾರೆ.

ಐರ್ಲೆಂಡ್ ಸರಣಿಯ ನಂತರ ಟೆಸ್ಟ್ ನಾಯಕತ್ವವನ್ನು ತ್ಯಜಿಸುವುದಾಗಿ ಹೇಳಿದ್ದಾರೆ. “ಶ್ರೀಲಂಕಾ ಆಯ್ಕೆಗಾರರ ​​ಉತ್ತರಕ್ಕಾಗಿ ನಾನು ಇನ್ನೂ ಕಾಯುತ್ತಿದ್ದೇನೆ. ಆದರೆ ಶ್ರೀಲಂಕಾ ಹೊಸ ನಾಯಕನನ್ನು ಪಡೆದರೆ, ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ಗೆ ಅದು ಉತ್ತಮವಾಗಿರುತ್ತದೆ ಎಂದು ನಾನು ನಂಬುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: MS Dhoni : ಕ್ಯಾಪ್ಟನ್ ಕೂಲ್ ಧೋನಿಗೆ ಈ ಪಾನಕ ಅಂದ್ರೆ ತುಂಬಾ ಇಷ್ಟ: ಪ್ರ್ಯಾಕ್ಟೀಸ್ ಟೈಂನಲ್ಲೂ ಹೇಗೆ ಕುಡಿಯುತ್ತಿದ್ದಾರೆ ನೋಡಿ

ಟೀಂ ಇಂಡಿಯಾ ಆಸ್ಟ್ರೇಲಿಯಾ ಸಮಬಲ:

ಮಾರ್ಚ್ 17ರಿಂದ ಪ್ರಾರಂಭವಾದ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದೆ. ಕಳೆದ ದಿನ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು ಇದುವೇ ಕಾರಣದಿಂದ ಭಾರತ ಆಸೀಸ್ ವಿರುದ್ಧ ಸೋಲು ಕಾಣುವಂತಾಗಿತ್ತು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News