Hardik Pandya: ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡು ಭವಿಷ್ಯದ ಭಾರತ ತಂಡವನ್ನು ಮುನ್ನಡೆಸಲು ತಯಾರಿ ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತೆ ಭಾರತ ತಂಡಕ್ಕೆ ಕೊಡುಗೆ ನೀಡಲು ಪ್ರಯತ್ನಿಸುತ್ತಿದ್ದಾರೆ.. 


COMMERCIAL BREAK
SCROLL TO CONTINUE READING

ಈ ಋತುವಿನಲ್ಲಿ ಅವರ ಪ್ರದರ್ಶನವನ್ನು ಅವಲಂಬಿಸಿ, ಅವರು T20 ವಿಶ್ವಕಪ್ ಸರಣಿಗೆ ಭಾರತ ತಂಡದ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೆ ಈಗಾಗಲೇ ಏಕದಿನ ಕ್ರಿಕೆಟ್ ವಿಶ್ವಕಪ್ ಗೆಲುವಿನ ದಡ ಸೇರಿರುವ ರೋಹಿತ್ ಶರ್ಮಾ ಮತ್ತೆ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್ ಸರಣಿಗೆ ಅವರು ನಾಯಕತ್ವ ವಹಿಸುವ ನಿರೀಕ್ಷೆಯೂಯಿದೆ.


ಇದನ್ನೂ ಓದಿ-SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH!


ಸದ್ಯ ಭಾರತದಲ್ಲಿ ಐಪಿಎಲ್ 17ನೇ ಆವೃತ್ತಿ ನಡೆಯುತ್ತಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕಗೊಂಡಿದ್ದಾರೆ. ನಾಯಕನಾಗಿ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ರನ್‌ಗಳಿಂದ ಸೋತಿತ್ತು. 


ಇದೆಲ್ಲದರ ಹೊರತಾಗಿಯೂ 2016 ರಿಂದ ಭಾರತ ತಂಡದಲ್ಲಿ ಆಡುತ್ತಿರುವ ಹಾರ್ದಿಕ್ ಪಾಂಡ್ಯ ಅವರ ನಿವ್ವಳ ಮೌಲ್ಯವು ಮಾರ್ಚ್ 2024 ರ ಹೊತ್ತಿಗೆ ರೂ. 91 ಕೋಟಿ. ಹಾರ್ದಿಕ್ ಪ್ರತಿ ತಿಂಗಳು ಸುಮಾರು 1.2 ಕೋಟಿ ಗಳಿಸುತ್ತಾರೆ. ಇದು ಅವರು ಮೊದಲು ಗಳಿಸಿದ್ದಕ್ಕಿಂತ ಹೆಚ್ಚು. ಬಿಸಿಸಿಐ ಒಪ್ಪಂದದ ಮೂಲಕ ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಾರೆ.. 


ಗುಜರಾತ್ ಟೈಟಾನ್ಸ್ ಪರ 15 ಕೋಟಿ ರೂ.ಗೆ ಆಡಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಅದೇ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಆಡುತ್ತಿದ್ದಾರೆ.


ಇದನ್ನೂ ಓದಿ-Fact Check: ಮೈದಾನದಲ್ಲಿ ಧೋನಿ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಪತಿರಾಣ!? ವೈರಲ್ ವಿಡಿಯೋದ ಅಸಲಿಯತ್ತೇನು?


ಕ್ರಿಕೆಟ್ ಹೊರತಾಗಿ ಹಾರ್ದಿಕ್ ಪಾಂಡ್ಯ ಬ್ರ್ಯಾಂಡ್ ಡೀಲ್ ಮೂಲಕ ಕೋಟಿಗಟ್ಟಲೆ ಸಂಪಾದಿಸುತ್ತಾರೆ. 2022 ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಚಾಂಪಿಯನ್ ಆಯಿತು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಬ್ರ್ಯಾಂಡ್ ಡೀಲ್ ಗಳಲ್ಲಿ ಶೇ.30ರಿಂದ 40ರಷ್ಟು ಹೆಚ್ಚಳವಾಗಿದೆ. ಇವರು ವಿಲಿಯನ್ ರಿಲಯನ್ಸ್ ರಿಟೇಲ್ ಮತ್ತು ಸಿಲ್ವರ್ ಕನ್ಸ್ಯೂಮರ್ ಎಲೆಕ್ಟ್ರಿಕಲ್ಸ್ ಸೇರಿದಂತೆ ಹಲವಾರು ಬ್ರಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.. 


ಹಾರ್ದಿಕ್ ಪಾಂಡ್ಯ ತನ್ನ ಕುಟುಂಬದೊಂದಿಗೆ ಗುಜರಾತ್‌ನ ವಡೋದರಾದ ಪೆಂಟ್ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ 30 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಕ್ರಿಕೆಟ್ ಸೆಲೆಬ್ರಿಟಿಗಳು ಸಾಕಷ್ಟು ಕಾರುಗಳನ್ನು ಹೊಂದಿದ್ದಾರೆ. ಅದೇ ರೀತಿ, ಹಾರ್ದಿಕ್ ಪಾಂಡ್ಯ ಕೂಡ ಆಡಿ A6 ಮತ್ತು ಲಂಬೋರ್ಗಿನಿ Huracan EVO ಸೇರಿದಂತೆ ಕಾರುಗಳನ್ನು ಹೊಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ