SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH!

IPL 2024: ಇತ್ತೀಚೆಗೆ ಸನ್ ರೈಸರ್ಸ್ ಹೈದ್ರಾಬಾದ್ ಇತ್ತೀಚೆಗೆ ರೋಹಿತ್ ಶರ್ಮಾ (Rohit Sharma) ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ಅವರಿಗೆ ಸಂಬಂಧಿಸಿದ ಒಂದು ಫೋಟೋ ಹಂಚಿಕೊಂಡಿತ್ತು. ಇದೀಗ ಅದು ಆ ಫೋಟೋವನ್ನು ತನ್ನ ಅಧಿಕೃತ ಖಾತೆಯಿಂದ ತೆಗೆದುಹಾಕಿದೆ. (IPL 2024 News In Kananda)  

Written by - Nitin Tabib | Last Updated : Mar 27, 2024, 06:16 PM IST
  • ಮುಂಬೈ ಹಾಗೂ ಹೈದರಾಬಾದ್ ತಂಡಗಳು ಇದುವರೆಗೆ ತಲಾ ಒಂದು ಪಂದ್ಯ ಆಡಿರುವುದು ಗಮನಾರ್ಹ.
  • ಉಭಯ ತಂಡಗಳು ತನ್ನ ಮೊದಲ ಪಂದ್ಯಗಳನ್ನು ಸೋತಿವೆ.
  • ಹೈದರಾಬಾದ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ 4 ರನ್‌ಗಳಿಂದ ಸೋಲಿಸಿತ್ತು.
SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH! title=

IPL 2024 MI vs SRH: IPL 2024 ರ ಇಂದು ಸಂಜೆ 7.30ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2024) ನ 17ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ (Sun Risers Hyderabad) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ನಡುವೆ ಪಂದ್ಯಾವಳಿಯ 8 ನೇ ಪಂದ್ಯ. ಈ ಋತುವಿನಲ್ಲಿ ಇದುವರೆಗೆ ಹೈದರಾಬಾದ್ ಮತ್ತು ಮುಂಬೈ ತಂಡಗಳು ತಲಾ ಒಂದು ಪಂದ್ಯವನ್ನು ಆಡಿವೆ. ಉಭಯ ತಂಡಗಳು ಆರಂಭಿಕ ಪಂದ್ಯದಲ್ಲಿ ಸೋಲನ್ನನುಭವಿಸಿವೆ. ಸನ್‌ರೈಸರ್ಸ್ ಹೈದರಾಬಾದ್ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಫೋಟೋವೊಂದನ್ನು ಹಂಚಿಕೊಂಡಿತ್ತು (srh deleted viral photo on rohit sharma and mayank agarwal from social media). ಆದರೆ, ಪಂದ್ಯಕ್ಕೂ ಸ್ವಲ್ಪ ಹೊತ್ತು ಮುಂಚೆ ಆ ಫೋಟೋವನ್ನು ಇದೀಗ ಡಿಲೀಟ್ ಮಾಡಲಾಗಿದೆ. ಈ ಫೋಟೋದಲ್ಲಿ ರೋಹಿತ್ ಮಯಾಂಕ್ ಅಗರ್ವಾಲ್‌ಗೆ 'ಫ್ಲೈಯಿಂಗ್ ಕಿಸ್' ನೀಡುತ್ತಿರುವುದು ಕಂಡುಬಂದಿತ್ತು (IPL 2024 News In Kannada).

ಇದನ್ನೂ ಓದಿ-IPL 2024: ಪಂದ್ಯದ ವೇಳೆ Virat Kohlil ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ, ನಂತರ ಏನಾಗಿದೆ ನೀವೇ ನೋಡಿ!

ವಾಸ್ತವದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಆಡಿತ್ತು. ಈ ಪಂದ್ಯದಲ್ಲಿ ಹರ್ಷಿತ್ ರಾಣಾ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಪಡೆದಿದ್ದರು. ಇದಾದ ಬಳಿಕ ಮಯಾಂಕ್ ಪೆವಿಲಿಯನ್ ಗೆ ಮರಳುತ್ತಿದ್ದಾಗ, ಹರ್ಷಿತ್ ಅವರಿಗೆ 'ಫ್ಲೈಯಿಂಗ್ ಕಿಸ್' ಕೊಟ್ಟು ಚುಡಾಯಿಸಿದ್ದರು. ಬಳಿಕ ಹರ್ಷಿತ್ ತಮ್ಮ ಈ ಕ್ರಮ ಭಾರಿ ಬೆಲೆಯನ್ನೇ ತೆತ್ತಿದ್ದರು. ಏಕೆಂದರೆ ಐಪಿಎಲ್ ಕೋಡ್ (IPL Code) ಉಲ್ಲಂಘಿಸಿದ ಹಿನ್ನೆಲೆ ಅವರಿಗೆ ಬಿಸಿಸಿಐ ಭಾರಿ ದಂಡ ವಿಧಿಸಿತ್ತು. ಇದಾದ ಬಳಿಕ ರೋಹಿತ್ ನೆಟ್ ಪ್ರ್ಯಾಕ್ಟಿಸ್ ವೇಳೆ ಮಯಾಂಕ್ ಗೆ ತಮಾಷೆಯ ರೀತಿಯಲ್ಲಿ ‘ಫ್ಲೈಯಿಂಗ್ ಕಿಸ್’ ನೀಡಿದ್ದರು. ಇದನ್ನು ಕೇಳಿ ಮಯಾಂಕ್ ಅಗರ್ವಾಲ್ ನಗಲು ಪ್ರಾರಂಭಿಸಿದ್ದರು. ರೋಹಿತ್ ಮತ್ತು ಮಯಾಂಕ್ ಅವರ ಈ ಫೋಟೋವನ್ನು ಹೈದರಾಬಾದ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಆದರೆ ನಂತರ ಅದನ್ನು ಡಿಲೀಟ್ ಮಾಡಿದೆ. 

ಇದನ್ನೂ ಓದಿ-IPL 2024: ನೆಟ್ ಪ್ರ್ಯಾಕ್ಟೀಸ್ ವೇಳೆ Mayank Agarwal ನನ್ನು ವಿಶಿಷ್ಟ ರೀತಿಯಲ್ಲಿ Troll ಮಾಡಿದ Rohit Sharma!

ಮುಂಬೈ ಹಾಗೂ ಹೈದರಾಬಾದ್ ತಂಡಗಳು ಇದುವರೆಗೆ ತಲಾ ಒಂದು ಪಂದ್ಯ ಆಡಿರುವುದು ಗಮನಾರ್ಹ. ಉಭಯ ತಂಡಗಳು ತನ್ನ ಮೊದಲ ಪಂದ್ಯಗಳನ್ನು ಸೋತಿವೆ.  ಹೈದರಾಬಾದ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ 4 ರನ್‌ಗಳಿಂದ ಸೋಲಿಸಿತ್ತು. ಆದರೆ, ಈ ಪಂದ್ಯದಲ್ಲಿ ಮಯಾಂಕ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಮಯಾಂಕ್ 32 ರನ್ ಗಳಿಸಿದ್ದರು. ಆದರೆ ಮುಂಬೈ ತಂಡವನ್ನು ಗುಜರಾತ್ ಟೈಟಾನ್ಸ್ ಸೋಲಿಸಿದೇ. ಮುಂಬೈಗೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವ ವಹಿಸಿದ್ದಾರೆ. ರೋಹಿತ್ ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ರೋಹಿತ್ ಕಳೆದ ಪಂದ್ಯದಲ್ಲಿ 43 ರನ್ ಗಳಿಸಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News