Vijay Hazare Trophy Final: 4ನೇ ಬಾರಿಗೆ `ವಿಜಯ್ ಹಜಾರೆ ಟ್ರೋಫಿ` ಗೆದ್ದ ಮುಂಬೈ ತಂಡ!
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾಳಗದಲ್ಲಿ ಯುವ ಆಟಗಾರ ಪೃಥ್ವಿ ಷಾ ಸಾರಥ್ಯದ ಮುಂಬೈ 6 ವಿಕೆಟ್‌ಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು.
ನವದೆಹಲಿ: ದೇಶೀಯ ಕ್ರಿಕೆಟ್‌ನ ಬಲಿಷ್ಠ ತಂಡ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಅಲಂಕರಿಸಿತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾಳಗದಲ್ಲಿ ಯುವ ಆಟಗಾರ ಪೃಥ್ವಿ ಷಾ ಸಾರಥ್ಯದ ಮುಂಬೈ 6 ವಿಕೆಟ್‌ಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು. 2018-19ನೇ ಸಾಲಿನಲ್ಲಿ ಕಡೇ ಬಾರಿಗೆ ಚಾಂಪಿಯನ್ ಆಗಿದ್ದ ಮುಂಬೈ ಮರಳಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮತ್ತೊಂದೆಡೆ, 16 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಯುಪಿ ಮತ್ತೊಮ್ಮೆ ನಿರಾಸೆ ಕಂಡಿತು.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್(Batting) ಮಾಡಿದ ಉತ್ತರ ಪ್ರದೇಶ ತಂಡ ಮಾಧವ್ ಕೌಶಿಕ್ (158*ರನ್, 156 ಎಸೆತ, 15 ಬೌಂಡರಿ, 4 ಸಿಕ್ಸರ್) ಹಾಗೂ ಸಮರ್ಥ್ ಸಿಂಗ್ (55ರನ್, 73 ಎಸೆತ, 4 ಬೌಂಡರಿ, 3 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 312 ರನ್ ಪೇರಿಸಿತು. ಪ್ರತಿಯಾಗಿ ಮುಂಬೈ ತಂಡ ಆದಿತ್ಯ ತಾರೆ (118*ರನ್, 107 ಎಸೆತ, 18 ಬೌಂಡರಿ) ಹಾಗೂ ನಾಯಕ ಪೃಥ್ವಿ ಷಾ (73ರನ್, 39 ಎಸೆತ, 10 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 41.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 315 ರನ್‌ಗಳಿಸಿ ಜಯದ ನಗೆ ಬೀರಿತು.
IND W vs SA W: ಅಂತಾರಾಷ್ಟ್ರೀಯ ODI ಕರಿಯರ್ ನಲ್ಲಿ 7000 ರನ್ಸ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ Mithali Raj
ಉತ್ತರ ಪ್ರದೇಶ: 4 ವಿಕೆಟ್(Wicket)ಗೆ 312 (ಮಾಧವ್ ಕೌಶಿಕ್ 158*, ಸಮರ್ಥ್ ಸಿಂಗ್ 55, ಅಕ್ಷ್‌ದೀಪ್ ನಾಥ್ 55, ತನುಶ್ ಕೊಟಿಯನ್ 54ಕ್ಕೆ 2), ಮುಂಬೈ: 41.3 ಓವರ್‌ಗಳಲ್ಲಿ 4 ವಿಕೆಟ್‌ಗೆ 315 (ಪೃಥ್ವಿ ಷಾ 73, ಆದಿತ್ಯ ತಾರೆ 118*, ಶಿವಂ ದುಬೆ 42, ಯಶಸ್ವಿ ಜೈಸ್ವಾಲ್ 29, ಯಶ್ ದಯಾಲ್ 71ಕ್ಕೆ 1, ಶಿವಂ ಮಾವಿ 63ಕ್ಕೆ 1, ಶಿವಂ ಶರ್ಮ 71ಕ್ಕೆ 1, ಸಮೀರ್ ಚೌಧರಿ 43ಕ್ಕೆ 1).
ವಿಭಿನ್ನ ಗೆಟ್ ಅಪ್‍ನಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್.!ಇವರು ಯಾರು ಬಲ್ಲಿರೇನು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.