N Jagadeesan Vijay Hazare Trophy: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಆದರೆ ಇಂಗ್ಲೆಂಡ್‌ನ ಅಲಿ ಬ್ರೌನ್ ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಭಾರತದ ಯುವ ಬ್ಯಾಟ್ಸ್‌ಮನ್ ಈ ಇಬ್ಬರೂ ಆಟಗಾರರನ್ನು ಸೋಲಿಸಿ ಲಿಸ್ಟ್-ಎ ಕ್ರಿಕೆಟ್‌ನ ದೊಡ್ಡ ವಿಶ್ವ ದಾಖಲೆಯನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: World Record in Cricket: 15 ಎಸೆತಗಳಲ್ಲಿ ಟಿ20 ಪಂದ್ಯ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು ಈ ಅಪರಿಚಿತ ತಂಡ!


ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ಗಳು:


ವಿಜಯ್ ಹಜಾರೆ ಟ್ರೋಫಿ 2022 ಪ್ರಸ್ತುತ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದೆ. ಈ ಪಂದ್ಯಾವಳಿಯಲ್ಲಿ, ತಮಿಳುನಾಡು ಪರ ಆಡುತ್ತಿರುವ ಬ್ಯಾಟ್ಸ್‌ಮನ್ ಎನ್ ಜಗದೀಶನ್ ಅವರು ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮಾಡಿದ್ದಾರೆ. ಎನ್ ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ.


ಎನ್ ಜಗದೀಶನ್ ಅವರ ಐತಿಹಾಸಿಕ ಇನ್ನಿಂಗ್ಸ್:


ಎನ್ ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ 141 ಎಸೆತಗಳಲ್ಲಿ 277 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಎನ್ ಜಗದೀಶನ್ ಅವರ ಬ್ಯಾಟ್‌ನಿಂದ 25 ಬೌಂಡರಿ ಮತ್ತು 15 ಸಿಕ್ಸರ್‌ಗಳು ಹೊರಬಂದವು. ಇವರಿಗಿಂತ ಮೊದಲು ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಲಿ ಬ್ರೌನ್ ಮೊದಲಿಗಿತ್ತು. ಅವರು 2002 ರಲ್ಲಿ 268 ರನ್ ಗಳಿಸಿದ್ದರು. ಆದರೆ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ 264 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: IND vs NZ: 'Suryakumar ಇನ್ನೂ ನಂಬರ್ 1 ಆಗಿಲ್ಲ': ಸೋಲಿನ ನಂತರ Tim Southee ಹೀಗಂದಿದ್ದೇಕೆ?


ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ:


ವಿಜಯ್ ಹಜಾರೆ ಟ್ರೋಫಿಯಲ್ಲಿ ಎನ್ ಜಗದೀಶನ್ ಸತತ 5 ನೇ ಪಂದ್ಯದಲ್ಲಿ 100 ರನ್ ಗಡಿ ದಾಟಿದ್ದಾರೆ. ಈ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ಪೃಥ್ವಿ ಶಾ, ರಿತುರಾಜ್ ಗಾಯಕ್ವಾಡ್ ಮತ್ತು ದೇವದತ್ ಪಡಿಕ್ಕಲ್ ತಲಾ 4 ಶತಕ ಸಿಡಿಸಿದ್ದರು. ಈ ಪಂದ್ಯಕ್ಕೂ ಮುನ್ನ ಅವರು ಹರಿಯಾಣ ವಿರುದ್ಧ 128, ಆಂಧ್ರ ವಿರುದ್ಧ 114, ಛತ್ತೀಸ್‌ಗಢ ವಿರುದ್ಧ 107, ಗೋವಾ ವಿರುದ್ಧ 168 ರನ್ ಗಳಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.