IPL 2023: ಕೊಹ್ಲಿಯನ್ನ ಮತ್ತೆ ಕೆಣಕಿದ್ರಾ ನವೀನ್? ವಿರಾಟ್ ಔಟ್ ಆಗುತ್ತಿದ್ದಂತೆ ಹೇಗೆ ಸೆಲೆಬ್ರೇಟ್ ಮಾಡಿದ್ರು ಗೊತ್ತಾ…
Naveen-Ul-Haq vs Virat Kohli Controversy: ಘಟನೆ ನಡೆದು 10 ದಿನ ಕಳೆದರೂ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಿನ ಮನಸ್ತಾಪ ಮಾತ್ರ ಶಮನವಾಗಿಲ್ಲ ಎಂದನಿಸುತ್ತಿದೆ. ಇದಕ್ಕೆ ಕಾರಣ ಒಂದಿಲ್ಲೊಂದು ರೀತಿಯ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡು ಕೌಂಟರ್ ಮೇಲೆ ಕೌಂಟರ್ ಕೊಡುತ್ತಿದ್ದಾರೆ
Naveen-Ul-Haq vs Virat Kohli Controversy: ಅಫ್ಘಾನಿಸ್ತಾನದ ಆಲ್ ರೌಂಡರ್ ನವೀನ್-ಉಲ್-ಹಕ್ ಮತ್ತು ಟೀಂ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ನಡುವಿನ ವೈಷಮ್ಯ-ಜಗಳ ಭಾರೀ ಸುದ್ದಿಯಾಗಿತ್ತು. ನವೀನ್ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸದಸ್ಯರಾಗಿದ್ದಾರೆ. ಮೇ 1 ರಂದು ಆರ್ ಸಿ ಬಿ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ನವೀನ್-ಉಲ್-ಹಕ್ ಮತ್ತು ವಿರಾಟ್ ಕೊಹ್ಲಿ ಜಗಳವಾಡಿದ್ದರು. ಇದಕ್ಕೆ ಸಂಬಂಧಿಸಿದ ಅನೇಕ ಫೋಟೋ-ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇನ್ನು ಈ ಘಟನೆ ನಡೆದು 10 ದಿನ ಕಳೆದರೂ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಿನ ಮನಸ್ತಾಪ ಮಾತ್ರ ಶಮನವಾಗಿಲ್ಲ ಎಂದನಿಸುತ್ತಿದೆ. ಇದಕ್ಕೆ ಕಾರಣ ಒಂದಿಲ್ಲೊಂದು ರೀತಿಯ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡು ಕೌಂಟರ್ ಮೇಲೆ ಕೌಂಟರ್ ಕೊಡುತ್ತಿದ್ದಾರೆ.
ಇದನ್ನೂ ಓದಿ:IPL 2023: ಗಾಯಗೊಂಡಿರುವ ಜೋಫ್ರಾ ಆರ್ಚರ್ ಐಪಿಎಲ್ ನಿಂದ ಹೊರಕ್ಕೆ
ಮುಂಬೈ ಮತ್ತು ಆರ್ ಸಿ ಬಿ ನಡುವಿನ ಪಂದ್ಯದ ಸಮಯದಲ್ಲಿ ನವೀನ್-ಉಲ್-ಹಕ್ ಅವರು ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ ಆರ್ ಸಿ ಬಿ ತಂಡ 199 ರನ್ ಗಳ ಬೃಹತ್ ಮೊತ್ತದ ಬಳಿಕವೂ ಸೋಲನುಭವಿಸಿತ್ತು.
ಆರ್ ಸಿ ಬಿ ಸೋಲು ಕಾಣುತ್ತಿದ್ದಂತೆ, ನವೀನ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮಾವಿನ ಹಣ್ಣಿನ ಫೋಟೋ ಶೇರ್ ಮಾಡಿಕೊಂಡು, “ಸ್ವೀಟ್ ಮ್ಯಾಂಗೋಸ್” ಎಂದು ಬರೆದುಕೊಂಡಿದ್ದಾರೆ. ಇದು RCB ಮತ್ತು ಮುಂಬೈ ನಡುವಿನ ಪಂದ್ಯದ ಸಮಯದಲ್ಲಿ ಶೇರ್ ಮಾಡಿರುವ ಫೋಟೋ ಆಗಿದ್ದು, ಫ್ಯಾನ್ಸ್ ಎಲ್ಲರೂ ಇದನ್ನು ವಿರಾಟ್ ಮತ್ತು ನವೀನ್ ಗಲಾಟೆಗೆ ಲಿಂಕ್ ಮಾಡಿದ್ದಾರೆ. ವಿರಾಟ್ ಔಟ್ ಆಗಿದ್ದಕ್ಕೆ ಮತ್ತು ಆರ್ ಸಿ ಬಿ ಸೋಲು ಕಂಡ ಕಾರಣ ನವೀನ್ ಸಂಭ್ರಮಿಸಿದ್ದಾರೆ ಎಂದು ಹೇಳುತ್ತಿದ್ದಾರೆ ನೆಟ್ಟಿಗರು.
ನವೀನ್ ಗೂ ಮೊದಲು, ವಿರಾಟ್ ಕೊಹ್ಲಿ ಲಕ್ನೋ ಮತ್ತು ಗುಜರಾತ್ ಪಂದ್ಯದ ಸಂದರ್ಭದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಇದರಲ್ಲಿ ವೃದ್ಧಿಮಾನ್ ಸಹಾ ವೇಗವಾಗಿ ಬ್ಯಾಟಿಂಗ್ ಮಾಡುತ್ತಿರುವುದರ ಬಗ್ಗೆ ವಿರಾಟ್ ಕೊಹ್ಲಿ ಬರೆದುಕೊಂಡಿದ್ದು, “ವಾವ್! ವಾಟ್ ಎ ಪ್ಲೇಯರ್” ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಹೀಗಂದಿದ್ದಕ್ಕೆ ತಿರುಗೇಟಿ ನೀಡಲು ನವೀನ್ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿರಾಟ್ ಮತ್ತು ನವೀನ್ ನಡುವಿನ ಈ ವಿವಾದವು ಮೇ 1 ರಂದು ಪ್ರಾರಂಭವಾಯಿತು. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಈ ಗಲಾಟೆ ನಡೆದಿತ್ತು. ಈ ಪಂದ್ಯದಲ್ಲಿ ನವೀನ್-ಉಲ್-ಹಕ್ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಜೊತೆ ವಾಗ್ವಾದಕ್ಕಿಳಿದಿದ್ದರು. ಕ್ರೀಸ್ ನಲ್ಲಿದ್ದ ಅಮಿತ್ ಮಿಶ್ರಾ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರಾದರೂ, ಪಂದ್ಯ ಮುಗಿಯುತ್ತಿದ್ದಂತೆ ವಿಷಯ ಬಿಗಡಾಯಿಸಿತ್ತು.
ಇದನ್ನೂ ಓದಿ: ವಿಭಿನ್ನ ಮತಗಟ್ಟೆ ಸ್ಥಾಪನೆ: ಮತಗಟ್ಟೆಯ ಸುತ್ತ ಅರಳಿದ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಗಳು
ಇನ್ನು ಪಂದ್ಯ ಮುಗಿದ ನಂತರ, ನವೀನ್ ಜೊತೆ ಮಾತ್ರವಲ್ಲದೆ ವಿರಾಟ್ ಕೊಹ್ಲಿ ಲಕ್ನೋ ಮೆಂಟರ್ ಗೌತಮ್ ಗಂಭೀರ್ ಅವರೊಂದಿಗೆ ಕೂಡ ಗಲಾಟೆ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.