IPL 2023: ಗಾಯಗೊಂಡಿರುವ ಜೋಫ್ರಾ ಆರ್ಚರ್ ಐಪಿಎಲ್ ನಿಂದ ಹೊರಕ್ಕೆ 

ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ  ಜೋಫ್ರಾ ಆರ್ಚರ್ ಅವರು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿದಿದ್ದಾರೆ.ಅವರು ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಅವರು ಇಂಗ್ಲೆಂಡ್ ಗೆ ಮರಳಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಂಗಳವಾರ ದೃಢಪಡಿಸಿದೆ.

Written by - Zee Kannada News Desk | Last Updated : May 9, 2023, 05:39 PM IST
  • ಜೋರ್ಡಾನ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಿದ್ದಾರೆ.
  • ಅವರು ಇಂಗ್ಲೆಂಡ್ ತಂಡವನ್ನು 87 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿ 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IPL 2023: ಗಾಯಗೊಂಡಿರುವ ಜೋಫ್ರಾ ಆರ್ಚರ್ ಐಪಿಎಲ್ ನಿಂದ ಹೊರಕ್ಕೆ  title=

ಮುಂಬೈ: ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ವೇಗಿ  ಜೋಫ್ರಾ ಆರ್ಚರ್ ಅವರು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿದಿದ್ದಾರೆ.ಅವರು ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಅವರು ಇಂಗ್ಲೆಂಡ್ ಗೆ ಮರಳಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮಂಗಳವಾರ ದೃಢಪಡಿಸಿದೆ.

ಇದನ್ನೂ ಓದಿ: Rocking Star  Yash: ಏನಿದು ರಾಕಿ ಭಾಯ್‌ ಯಶ್ ಹೊಸ ಗೆಟಪ್‌ ! ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು? ಇಲ್ಲಿದೆ ನೋಡಿ ವಿವರ..

"ಆರ್ಚರ್ ಬಲ ಮೊಣಕೈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.ಆದಾಗ್ಯೂ, ಇತ್ತೀಚೆಗೆ ಆಡುತ್ತಿರುವಾಗ ಅಸ್ವಸ್ಥತೆ ಕಂಡು ಬಂದಿದ್ದರಿಂದಾಗಿ ಈಗ ಅವರಿಗೆ ವಿಶ್ರಾಂತಿ ಮತ್ತು ಪುನರ್ವಸತಿ ಅವಧಿಗೆ ಇಂಗ್ಲೆಂಡ್ ಗೆ ಮರಳಲಿದ್ದಾರೆ.ಸಂಪೂರ್ಣ ಚೇತರಿಸಿಕೊಳ್ಳಲು ಅವರಿಗೆ ಉತ್ತಮ ಅವಕಾಶವನ್ನು ನೀಡಲಾಗುತ್ತದೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಜೋಫ್ರಾ ಆರ್ಚರ್ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್  ಪರವಾಗಿ ಐದು ಪಂದ್ಯಗಳನ್ನು ಆಡಿದ್ದಾರೆ, ಆದರೆ ಅಷ್ಟು ಪರಿಣಾಮಕಾರಿಯಾಗಿಲ್ಲ,ಇದುವರೆಗೆ ಎರಡು ವಿಕೆಟ್ ಪಡೆದಿದ್ದು,ಪ್ರತಿ ಓವರ್ ಗೆ ಸರಾಸರಿ 9.50 ರನ್ಗಳನ್ನು ನೀಡಿದ್ದಾರೆ.ಈಗ ಜೋಫ್ರಾ ಆರ್ಚರ್ ಬದಲಿಗೆ ಕ್ರಿಸ್ ಜೋರ್ಡಾನ್ ಅವರು ಉಳಿದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಲಿದ್ದಾರೆ.

ಇದನ್ನೂ ಓದಿ: ಅಪ್ಪನಿಗೆ ಕುಡಿತದ ಚಟ, ಊಟಕ್ಕೂ ಕಷ್ಟ ನಟಿ ಅನುಪಮಾ ಗೌಡ ಕಣ್ಣೀರ ಕಥೆ!

2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ನಂತರ, ಜೋರ್ಡಾನ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಿದ್ದಾರೆ.ವೇಗಿ ಇಂಗ್ಲೆಂಡ್ ತಂಡವನ್ನು 87 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿ 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News