Indian team: ಭಾರತ ತಂಡಕ್ಕೆ ಹೊಸ ಕೋಚ್ ಘೋಷಣೆ! ದಿಢೀರನೆ ದೊಡ್ಡ ಜವಾಬ್ದಾರಿ ವಹಿಸಿಕೊಂಡ ಈ ಅನುಭವಿ ಆಟಗಾರ
Indian Recurve Team Coach: 2014ರ ಏಷ್ಯನ್ ಗೇಮ್ಸ್ ನಂತರ ಭಾರತ ವಿದೇಶಿ ಕೋಚ್’ನ್ನು ನೇಮಕ ಮಾಡುತ್ತಿರುವುದು ಇದೇ ಮೊದಲು. AAI ಎರಡು ಬಾರಿ ವಿಶ್ವಕಪ್ ವಿಜೇತ ಇಟಲಿಯ ಸೆರ್ಗಿಯೊ ಪಾಗ್ನಿ ಅವರನ್ನು ಸಹ ಆಯ್ಕೆ ಮಾಡಿದೆ. ಅವರು ಟರ್ಕಿ ವಿಶ್ವಕಪ್’ನಲ್ಲಿ ಸಂಯುಕ್ತ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
Indian Recurve Team Coach: ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ, ಒಲಿಂಪಿಕ್ ಚಿನ್ನದ ಪದಕ ವಿಜೇತ ಬಾಕ್ ವಾಂಗ್ ಕೀ ಅವರನ್ನು 2024 ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಮುನ್ನ ರಿಕರ್ವ್ ತಂಡದ ಮುಖ್ಯ ತರಬೇತುದಾರರನ್ನಾಗಿ ನೇಮಿಸಿದೆ.
ಇದನ್ನೂ ಓದಿ: IPL 2023: ಐಪಿಯಲ್ ವೀಕ್ಷಣೆ ಹೊಸ ದಾಖಲೆ ಬರೆದ ಆರ್ಸಿಬಿ-ಸಿಎಸ್ಕೆ ಪಂದ್ಯ!
2014ರ ಏಷ್ಯನ್ ಗೇಮ್ಸ್ ನಂತರ ಭಾರತ ವಿದೇಶಿ ಕೋಚ್’ನ್ನು ನೇಮಕ ಮಾಡುತ್ತಿರುವುದು ಇದೇ ಮೊದಲು. AAI ಎರಡು ಬಾರಿ ವಿಶ್ವಕಪ್ ವಿಜೇತ ಇಟಲಿಯ ಸೆರ್ಗಿಯೊ ಪಾಗ್ನಿ ಅವರನ್ನು ಸಹ ಆಯ್ಕೆ ಮಾಡಿದೆ. ಅವರು ಟರ್ಕಿ ವಿಶ್ವಕಪ್’ನಲ್ಲಿ ಸಂಯುಕ್ತ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ವಾಂಗ್ ಈ ಹಿಂದೆ ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಉತ್ಕೃಷ್ಟತೆಯ ಕೇಂದ್ರದ ಭಾಗವಾಗಿದ್ದರು. ಇದೀಗ ಒಲಿಂಪಿಕ್ಸ್’ಗೆ ಕೂಡ ಹೆಜ್ಜೆ ಇಟ್ಟಿದ್ದಾರೆ.
ಭಾರತೀಯ ಬಿಲ್ಲುಗಾರಿಕೆ (ಆರ್ಚರಿ)ಯ ಉನ್ನತ ಪ್ರದರ್ಶನದ ನಿರ್ದೇಶಕ(Indian Archery's High Performance Director) ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಸಂಜೀವ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, "ಭಾರತದ ರಿಕರ್ವ್ ತಂಡದ ಕೋಚ್’ಗಳನ್ನಾಗಿ ಬಾಕ್ ವಾಂಗ್ ಕೀ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಅವಧಿ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್’ವರೆಗೆ ಇರಲಿದೆ” ಎಂದು ಹೇಳಿದ್ದಾರೆ.
ತಂಡದಲ್ಲಿ ಹೊಸ ಹೆಸರುಗಳ ಸೇರ್ಪಡೆ:
ಭಾರತವು ಈ ವಿಶ್ವಕಪ್’ಗೆ ಹೆಚ್ಚಿನ ಜೂನಿಯರ್ ಆಟಗಾರರಿಗೆ ಅವಕಾಶ ನೀಡಿರುವುದರಿಂದ ಮುಂಬರುವ ವಿಶ್ವಕಪ್ ಈ ಜೋಡಿಗೆ ಮೊದಲ ದೊಡ್ಡ ಪರೀಕ್ಷೆ ಎನ್ನಬಹುದು. ಏಷ್ಯನ್ ಗೇಮ್ಸ್ (2010) ಬೆಳ್ಳಿ ಪದಕ ವಿಜೇತ ತರುಣ್ ದೀಪ್ ರೈ, ಎರಡು ಬಾರಿ ಒಲಿಂಪಿಯನ್ ಅತನು ದಾಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಬಿಲ್ಲುಗಾರ್ತಿ (Compound) ಜ್ಯೋತಿ ಸುರೇಖಾ ವೆನ್ನಮ್ ಅವರನ್ನು ಹೊರತುಪಡಿಸಿ, ಭಾರತ ತಂಡದಲ್ಲಿ ಕೆಲವು ಹೊಸ ಹೆಸರುಗಳನ್ನು ಸೇರಿಸಲಾಗಿದೆ.
ತಂಡಗಳು:
ರಿಕರ್ವ್ ಪುರುಷರ ತಂಡ: ಬಿ ಧೀರಜ್, ಅತನು ದಾಸ್, ತರುಣ್‌ದೀಪ್ ರೈ, ನೀರಜ್ ಚೌಹಾಣ್.
ರಿಕರ್ವ್ ಮಹಿಳೆಯರ ತಂಡ: ಭಜನ್ ಕೌರ್, ಅದಿತಿ ಜೈಸ್ವಾಲ್, ಅಂಕಿತಾ ಭಕತ್, ಸಿಮ್ರಂಜಿತ್ ಕೌರ್.
ಸಂಯುಕ್ತ (Compound) ಪುರುಷರು: ಪ್ರಥಮೇಶ್ ಜೋಹರ್, ರಜತ್ ಚೌಹಾಣ್, ಓಜಸ್ ಡಿಯೋಟಾಲೆ, ರಿಷಭ್ ಯಾದವ್.
ಸಂಯುಕ್ತ (Compound) ಮಹಿಳೆಯರು: ಅವನೀತ್ ಕೌರ್, ವಿ ಜ್ಯೋತಿ ಸುರೇಖಾ, ಅದಿತಿ ಸ್ವಾಮಿ, ಸಾಕ್ಷಿ ಚೌಧರಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.