Team India: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತಿರುವ ಭಾರತ, ನಾಳೆಯಿಂದ ಅಂದರೆ  ನವೆಂಬರ್ 17ರಿಂದ ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. 2024 ರ ಟಿ 20 ವಿಶ್ವಕಪ್‌ಗೆ ಸಿದ್ಧತೆಗಳು ಪ್ರಾರಂಭವಾಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಸ್ಟಾರ್ ಕ್ರಿಕೆಟರ್ ಗಳ ಅನುಪಸ್ಥಿತಿಯಲ್ಲಿ ಅಂಗಣಕ್ಕೆ ಇಳಿದಿದೆ. ಈ ಸರಣಿಯ ಸಮಯದಲ್ಲಿ ನಿರ್ಭೀತ ಮತ್ತು ಕ್ರಿಕೆಟ್ ನ ಹೊಸ ಮುಖವನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ಸ್ಟ್ಯಾಂಡ್-ಇನ್ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs NZ Series: ಭಾರತ- ನ್ಯೂಜಿಲೆಂಡ್ ಸಿರೀಸ್ ಟಿವಿಯಲ್ಲಿ ಬರಲ್ಲ: ಈ ಆಪ್ ಮೂಲಕ ಮಾತ್ರ ನೋಡಬಹುದು!


2021ರ ಟಿ 20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿದ ನಂತರ, ಭಾರತವು ಬ್ಯಾಟಿಂಗ್ ನಲ್ಲಿ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡಿದೆ. ಇದು ದ್ವಿಪಕ್ಷೀಯ ಸರಣಿಗಳಲ್ಲಿ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿದೆ. ಆದರೆ ಟಿ 20 ವಿಶ್ವಕಪ್ 2022 ರ ಹೊತ್ತಿಗೆ ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ಉತ್ತಮವಾಗಿದ್ದರೂ ಸಹ ಫೀಲ್ಡಿಂಗ್ ಉತ್ತಮವಾಗಿರಲಿಲ್ಲ. ವಿಶೇಷವಾಗಿ ಮೊದಲ ಆರು ಓವರ್‌ಗಳಲ್ಲಿ, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಇಂಗ್ಲೆಂಡ್‌ನ ಅಬ್ಬರದ ಆಟಕ್ಕೆ ಹೋಲಿಸಿದರೆ ಸೆಮಿಫೈನಲ್‌ನಲ್ಲಿ ಭಾರತದ ಆಟ ಕಳಪೆಯಾಗಿತ್ತು.


ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರ ಅನುಪಸ್ಥಿತಿಯು ಯುವ ಆಟಗಾರರಾದ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್‌ಗೆ ವರದಾನವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಮತ್ತು ಶುಭಮನ್ ಗಿಲ್ ಓಪನರ್ ಗಳಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.


ಇದನ್ನೂ ಓದಿ: ಟಿ 20 ಟೀಮ್ ಇಂಡಿಯಾಗೆ ಹೊಸ ನಾಯಕನ ಅಗತ್ಯವಿದೆ ಎಂದ ರವಿಶಾಸ್ತ್ರಿ


ಇಶಾನ್ ಕಿಶನ್ ಕೂಡ ಈ ವರ್ಷ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ತಂಡದ ಮ್ಯಾನೇಜ್‌ಮೆಂಟ್‌ ರಿಷಬ್‌ ಪಂತ್‌ಗೆ ಅಗ್ರ ಕ್ರಮಾಂಕದಲ್ಲಿ ಉತ್ತಮ ಅವಕಾಶ ನೀಡಬಹುದು. 2022 ರ T20 ವಿಶ್ವಕಪ್‌ನಲ್ಲಿ ಮೊದಲ 4 ಪಂದ್ಯಗಳಿಂದ ರಿಷಬ್ ಪಂತ್ ಅವರನ್ನು ಪ್ಲೇಯಿಂಗ್ XI ನಿಂದ ಹೊರಗಿಡಲಾಯಿತು. ಏಕೆಂದರೆ ಭಾರತವು ದಿನೇಶ್ ಕಾರ್ತಿಕ್ ಅವರಿಗೆ ಹೆಚ್ಚಿನ ಆದ್ಯತೆ ನೀಡಿತು. ಆದರೆ ಕಾರ್ತಿಕ್ ಮಾತ್ರ ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲರಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.