ʼರಚಿನ್ʼಗೆ ಸಚಿನ್ ಮತ್ತು ರಾಹುಲ್ ದ್ರಾವಿಡ್ ಹೆಸರಿಟ್ಟಿಲ್ಲ..! ನ್ಯೂಜಿಲೆಂಡ್ ಕ್ರಿಕೆಟಿಗನ ತಂದೆ ಸ್ಪಷ್ಟನೆ
Rachin Ravindra : ಬೆಂಗಳೂರಿನಿಂದ ನ್ಯೂಜಿಲೆಂಡ್ಗೆ ವಲಸೆ ಹೋಗಿರುವ ರಚಿನ್ ಅವರ ತಂದೆ, ತಮ್ಮ ಮಗನಿಗೆ ಕ್ರಿಕೆಟ್ ಗಾಡ್ ಸಚಿನ್ ತೆಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಹೆಸರನ್ನು ಮಿಶ್ರಣಗೊಳಿಸಿ ಹೆಸರಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದು ಶುದ್ಧ ಸುಳ್ಳು ಎಂದು ಇದೀಗ ತಿಳಿದು ಬಂದಿದೆ. ಬನ್ನಿ ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ.
Rachin Ravindra name fact : ಯುವ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅದ್ವಿತೀಯ ಪ್ರದರ್ಶನ ನೀಡಿದ್ದಾರೆ. ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲೇ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ಇದು ವರೆಗೆ ರಚಿನ್ ಮೂರು ಶತಕಗಳನ್ನು ಸಿಡಿಸಿದ್ದಾರೆ. ಸಧ್ಯ ಅವರ ಹೆಸರಿನ ಕುರಿತು ಇಂಟ್ರಸ್ಟಿಂಗ್ ವಿಚಾರ ಒಂದು ಹೊರಬಿದ್ದಿದೆ.
ಹೌದು.. ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಮೊದಲ ಹೆಸರುಗಳಿಂದ ರಚಿನ್ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಕ್ರಿಕೆಟಿಗ ರಚಿನ್ ಅವರ ತಂದೆ ಸಚಿನ್ ಮತ್ತು ರಾಹುಲ್ ಅಪ್ಪಟ ಅಭಿಮಾನಿಯಾಗಿದ್ದು, ತಮ್ಮ ಮಗನಿಗೆ ಇಬ್ಬರು ಕ್ರಿಕೆಟಿಗರ ಹೆಸರು ಇಟ್ಟಿದ್ದಾರೆ ಎಂದು ನಂಬಲಾಗಿತ್ತು. ಅದ್ರೆ ಇದು ಸುಳ್ಳು ಎಂದು ಇದೀಗ ತಿಳಿದು ಬಂದಿದೆ.
ಇದನ್ನೂ ಓದಿ:ಮಧ್ಯರಾತ್ರಿ ಯಾರಿಗೂ ತಿಳಿಯಂದಂತೆ ರಸ್ತೆ ಬದಿ ಮಲಗಿದ್ದವರಿಗೆ ಗರಿ ಗರಿ ನೋಟು ಹಚಿದ ಕ್ರಿಕೆಟರ್ ! ಇಲ್ಲಿದೆ ವಿಡಿಯೋ
ಈ ಕುರಿತು ರಚಿನ್ ತಂದೆ ಸ್ಪಷ್ಟತೆ ನೀಡಿದ್ದಾರೆ. ರಚಿನ್ ಎಂಬ ಹೆಸರನ್ನು ವಾಸ್ತವವಾಗಿ ಅವರ ಪತ್ನಿ ಸೂಚಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ, ರಾಹುಲ್ ಮತ್ತು ಸಚಿನ್ ಹೆಸರುಗಳ ಮಿಶ್ರಣ ಅಲ್ಲ, ಉದ್ದೇಶಪೂರ್ವಕವಾಗಿ ಭಾರತೀಯ ಕ್ರಿಕೆಟ್ ತಾರೆಗಳ ಹೆಸರನ್ನು ಇಡಲಾಗಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ.
"ರಚಿನ್ ಹುಟ್ಟಿದಾಗ, ನನ್ನ ಹೆಂಡತಿ ಈ ಹೆಸರನ್ನು ಸೂಚಿಸಿದಳು, ಹೆಸರು ಚೆನ್ನಾಗಿತ್ತು ಅಂತ ಇಡಲಾಯಿತು. ಅಲ್ಲದೆ, ಉಚ್ಚರಿಸಲು ಸುಲಭ ಮತ್ತು ಚಿಕ್ಕದಾಗಿದೆ. ಕೆಲವು ವರ್ಷಗಳ ನಂತರ ನಾವು ಈ ಹೆಸರು ರಾಹುಲ್ ಮತ್ತು ಸಚಿನ್ ಅವರ ಹೆಸರುಗಳ ಮಿಶ್ರಣವಾಗಿದೆ ಅಂತ ನಾವು ಅರಿತುಕೊಂಡೆವು. ನಮ್ಮ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡುವ ಉದ್ದೇಶದಿಂದ ಅಥವಾ ಬೇರೆ ಯಾವುದೇ ಕಾರಣದಿಂದ ಈ ಹೆಸರಿಟ್ಟಿಲ್ಲ ಎಂದು ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಈ ಬ್ಯಾಟಿಂಗ್ ಮಾಂತ್ರಿಕನಿಗೆ RCB ಗಾಳ ! ಈತನಿಗಾಗಿ ಕೋಟಿ ಕೋಟಿ ಹರಿಸಲು ಮುಂದಾದ ತಂಡ
ಸಧ್ಯ ನ್ಯೂಜಿಲೆಂಡ್ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಹೋರಾಡಲು ಸಜ್ಜಾಗಿದೆ. 2019 ರ ಸೆಮಿಫೈನಲ್ ಮರುಕಳಿಸಲಿದೆ. ಆದ್ರೆ ಆಗ ನ್ಯೂಜಿಲೆಂಡ್ ಗೆದ್ದಿತ್ತು. ಆದ್ರೆ ಈ ಬಾರಿ ಭಾರತ ಗೆಲ್ಲುವ ಎಲ್ಲಾ ಮುನ್ಸೂಚನೆಗಳಿವೆ. ನಾಕೌಟ್ ಪಂದ್ಯ ಬುಧವಾರ (ನವೆಂಬರ್ 15) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.