ವೆಲ್ಲಿ೦ಗ್ಟನ್: ಇಲ್ಲಿನ ವೆಸ್ಟ್ ಪ್ಯಾಕ್ ಕ್ರೀಡಾಂಗಣದಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ದ 35 ರನ್ ಗಳ ಗೆಲುವು ಸಾಧಿಸುವ ಮೂಲಕ 4-1 ಅಂತರಿಂದ ಏಕದಿನ ಸರಣಿಯನ್ನು ಕೈವಶಪಡಿಸಿಕೊಂಡಿದೆ.



COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ಅಂಬಟಿ ರಾಯಡು ಅವರ ಭರ್ಜರಿ (90) ಬ್ಯಾಟಿಂಗ್ ನೆರವಿಂದ ಮತ್ತು ಕೊನೆಯಲ್ಲಿ  ವಿಜಯ್ ಶಂಕರ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ನೆರವಿನಿಂದ 49.5 ಓವರ್ ಗಳಲ್ಲಿ 252 ರನ್ ಗಳನ್ನು ಗಳಿಸಿತು.ಭಾರತ ತಂಡವು ನೀಡಿದ 253ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು 44.1 ಓವರ್ ಗಳಲ್ಲಿ ಕೇವಲ 217 ರನ್ ಗಳಿಗೆ ಸರ್ವಪತನ ಕಂಡಿತು.



ನ್ಯೂಜಿಲೆಂಡ್  ಕೆನ್ ವಿಲಿಯಮ್ಸನ್  39, ಜೇಮ್ಸ್ ನೀಶಾಂ 44, ಹಾಗೂ ಟಾಮ್ ಲತಾಂ 37 ರನ್ ಗಳನ್ನು ಗಳಿಸಿದ್ದು ಬಿಟ್ಟರೆ ಉಳಿದವರು ಯಾರು ಅಂತಹ ಪ್ರತಿರೋಧ ತೋರಲಿಲ್ಲ.ಇನ್ನೊಂದೆಡೆ  ಭಾರತದ ಚಹಾಲ್,3  ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಕ್ರಮವಾಗಿ ಎರಡು ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣಕರ್ತರಾದರು,