ನವದೆಹಲಿ: ಹ್ಯಾಮಿಲ್ಟನ್ ನ ಸೇಡ್ದನ್ ಪಾರ್ಕ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತದ ವಿರುದ್ಧ ಐತಿಹಾಸಿಕ ದಾಖಲೆ ಬರೆದಿದೆ.



COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು ಭಾರತ ತಂಡವನ್ನು 50 ಓವರ್ ಗಳಲ್ಲಿ ನಾಲ್ಕು 347 ರನ್ ಗಳಿಗೆ ಕಟ್ಟಿ ಹಾಕಿತು. ಭಾರತದ ಪರವಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ 103 ಹಾಗೂ ಕೆ.ಎಲ್.ರಾಹುಲ್ 88, ನಾಯಕ ವಿರಾಟ್ ಕೊಹ್ಲಿ 51 ರನ್ ಗಳಿಸುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾದರು.



348 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಹೆನ್ರಿ ನಿಕೊಲಸ್ 78,ರಾಸ್ ಟೇಲರ್ ಅವರ 109 ರನ್ ಗಳ ನೆರವಿನಿಂದಾಗಿ ಇನ್ನು 7 ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು. ಆ ಮೂಲಕ ಟಿ-20 ಸರಣಿಯಲ್ಲಿ 5-0 ಅಂತರದಲ್ಲಿ ಸೋತು ಸುಣ್ಣವಾಗಿದ್ದ ನ್ಯೂಜಿಲೆಂಡ್ ಗೆ ಈಗ ಈ ಗೆಲುವು ಸಮಾಧಾನ ನೀಡಿದೆ.