ಐಸಿಸಿ 2023ರ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ: ಇಬ್ಬರು ಭಾರತೀಯರಿಗೆ ಈ ಪಟ್ಟಿಯಲ್ಲಿದೆ ಸ್ಥಾನ
ICC Cricketer 2023 : ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಶುಕ್ರವಾರ ಐಸಿಸಿ ಕ್ರಿಕೆಟಿಗ 2023ರ ಪ್ರಶಸ್ತಿಗೆ ನಾಲ್ಕು ಆಟಗಾರರ ಹೆಸರನ್ನು ನಾಮನಿರ್ದೇಶನ ಮಾಡಿದೆ . ಈ ಪಟ್ಟಿಯಲ್ಲಿ ಇಬ್ಬರು ಭಾರತೀಯರಿಗೆ ಹಾಗೂ ಇಬ್ಬರು ಆಸಿಸ್ ಆಟಗಾರರಿಗೆ ಅವಕಾಶ ದೊರಕಿದೆ. ವೋಟಿಂಗ್ ಪ್ರಕ್ರಿಯೆ ಮೇಲೆ ಯಾರು ಗೆಲ್ಲುತ್ತಾರೆ ಎಂದು ನಿರ್ಧರಿಸಲಾಗುತ್ತದೆ.
ICC Cricketer of the year 2023 : 2023ರ ವರ್ಷ ಪೂರ್ಣಗೊಂಡಿದ್ದು, ಇದೇ ಬೆನ್ನಲ್ಲೇ ಐಸಿಸಿ ( ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) 2023ರ ಕ್ರಿಕೆಟಿಗ ಪ್ರಶಸ್ತಿಗೆ ನಾಲ್ಕು ಜನ ಆಟಗಾರನ್ನು ನಾಮನಿರ್ದೇಶನ ಮಾಡಿದೆ. ಇದರಲ್ಲಿ ಇಬ್ಬರು ಬಾರತೀಯ ಆಟಗಾರರಿಗೆ ಹಾಗೂ ಇಬ್ಬರು ಆಸ್ಟ್ರೇಲಿಯಾ ತಂಡ ಆಟಗರಾರಿಗೆ ಅವಕಾಶ ದೊರೆತಿದೆ.
ಐಸಿಸಿ 2023ರ ಆರಂಭದಿಂದ ಇಲ್ಲಿಯವೆರಗೂ ಮೂರು ಮಾದರಿಯ ಕ್ರಿಕೆಟೆನಲ್ಲಿ ಅತ್ಯುತ್ತಮ ಪ್ರರ್ಶನ ನೀಡಿದ ಹಾಗೂ ವಿಶ್ವಕಪ್‌ನಲ್ಲಿ ಉತ್ತಮವಾಗಿ ಕಾಣಿಸಿಕೊಂಡ ಆಟಗಾರರನ್ನು ಹುಡುಕಿ ಈ ಒಂದು ಪ್ರಶಸ್ತಿಗೆ ನಾಮನಿರ್ದೇಶನ ಮಾಡದೆ.
ಇದನ್ನು ಓದಿ-2023ಐಸಿಸಿ ಪುರುಷರ ಏಕದಿನ ಕ್ರಿಕೆಟಿಗ ಪ್ರಶಸ್ತಗೆ ಆಯ್ಕೆಯಾದ ಮೂವರು ಭಾರತೀಯರು! "ರೋಹಿತ್ ಶರ್ಮಾ" ಜಸ್ಟ್ ಮಿಸ್...
ಈ ಪಟ್ಟಿಯಲ್ಲಿ ಭಾರತದ ತಂಡದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ, ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ), ರವಿಂದ್ರ ಜಡೇಜಾ (ಭಾರತ), ಟ್ರಾವಿಸ್ ಹೆಡ್(ಆಸ್ಟ್ರೇಲಿಯಾ) ಹೆಸರು ಕಂಡುಬಂದಿದೆ. ಈ ನಾಲ್ವರು ಆಟಗಾರರು 2023ರಲ್ಲಿ ಉತ್ತವಾಗಿ ಪ್ರದರ್ಶನ ನೀಡಿದ್ದು, ತಂಡದ ಪರ ಅನೇಕ ಪ್ರಮುಖ ಪಂದ್ಯಗಳನ್ನು ಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ: ತಮ್ಮ ದಾಖಲೆಗಳ ಪರಂಪರೆಯನ್ನು 2023 ರಲ್ಲಿಯೂ ಮುಂದುವರೆಸಿದ ಶ್ರೇಷ್ಠ ಆಟಗಾರರಾಗಿದ್ದಾರೆ. ಪ್ರತಿ ವರ್ಷದಂತೆ 2023ರಲ್ಲಿಯೂ ಕೂಡ ವಿರಾಟ್ ಅತ್ಯತ್ತಮ ಪ್ರದರ್ಶನ ನೀಡಿದರು. ಇವರು ಮೂರು ಮಾದರಿಗಳಿಂದ ಕೇವಲ 36 ಇನ್ನಿಂಗ್ಸ್‌ಗಳನ್ನು ಆಡಿ 2048 ರನ್ ಕಲೆಹಾಕಿದ್ಧಾರೆ.66.06ರ ಸರಾಸರಿಯಲ್ಲಿ ಬ್ಯಾಟ್ ಮಾಡಿ 8 ಶತಕಗಳನ್ನು ಹಾಗೂ 10 ಶತಕಗಳನ್ನು ಕೆಲೆಹಾಕಿದ್ಧಾರೆ.
ಇದನ್ನು ಓದಿ-ಪಾಕ್ ನಾಯಕನಿಂದ ಡೇವಿಡ್ ವಾರ್ನರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ ! ಟೆಸ್ಟ್ ಕೆರಿಯರ್ ಗೆ ವಿದಾಯ ...
ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿನಲ್ಲಿ ಭಾರತ ಪರ ಉತ್ತಮ ಪ್ರದರ್ಶನ ನೀಡಿದಲ್ಲದೇ ಹಲವಾರು ದಾಖಲೆಯನ್ನು ನಿರ್ಮಿಸಿದರು. ಕೊಹ್ಲಿ ಗಳಿಸಿದ 765 ರನ್‌ಗಳು ಒಂದೆ ಸೀಸನ್‌ನಲ್ಲಿ ಒಬ್ಬ ಬ್ಯಾಟರ್‌ಗಳಿಸಿದ ಅತ್ಯಧಿಕ ಸ್ಕೋರ್‌ಆಗಿದೆ. ಅಷ್ಟೇ ಅಲ್ಲದೇ 11 ಪಂದ್ಯಗಳನ್ನು ಆಡಿ 3 ಶತಕಗಳನ್ನು ದಾಖಲಿಸಿದರು. ತಮ್ಮ 50 ಏಕದಿನ ಶತಕವನ್ನು ವಿಶ್ವಕಪ್‌ನಲ್ಲಿ ಪೂರೈಸಿದರು.
ಪ್ಯಾಟ್ ಕಮಿನ್ಸ್ : ಅಸ್ಟ್ರೇಲಿಯ ತಂಡದ ನಾಯಕ ಪಾಟ್ ಕಮಿನ್ಸ್ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾದ ನಾಯಕರಾಗಿದ್ಧಾರೆ. ವಿಶ್ವಕಪ್‌ನಲ್ಲಿ ಬಲಿಷ್ಠ ಭಾರತವನ್ನು ಸೋಲಿಸಿ ಟ್ರೋಪಿಯನ್ನು ಮುಡಿಗೇರಿಸಿಕೊಂಡರು.ಬ್ಯಾಟಿಂಗ್ ಹಾಗೂ ಬೈಲಿಂಗ್ ಎರಡರಲ್ಲು ಮೇಲುಗೈ ಸಾದಿಸಿದಲ್ಲದೆ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದರು.
ಜಡೇಜಾ : 2023 ರಲ್ಲಿ 28 ಅಂತರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನು ಆಡಿದ್ದು, 613 ರನ್‌ಗಳಿಸಿದ್ಧಾರೆ. ಮತ್ತು 39 ಇನ್ನಿಂಗ್ಸ್‌ಗಳಲ್ಲಿ 66 ವಿಕೆಟ್‌ಗಳೊಂದಿಗೆ ಭಾರತದ ಪ್ರಮುಖ ವಿಕೆಟ್‌ಟೇಕರ್ ಆಗಿದ್ಧಾರೆ. ಅಷ್ಟೇ ಅಲ್ಲದೇ 2023ರ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ಧಾರೆ.
ಟ್ರಾವಿಸ್ ಹೆಡ್ : ಆಸ್ಟ್ರೇಲಿಯಾ ತಂಡದ ಈ ಆಟಗಾರ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಮಣಿಸಿ ತಂಡಕ್ಕೆ ಟ್ರೋಪಿಗೆಲ್ಲಲು ಪ್ರಮುಖ ಪಾತ್ರವಹಿಸಿದರು. ಆಸ್ಟ್ರೇಲಿಯಾ ತಂಡ 4 ವಿಕೆಟ್ ಉರುಳಿದಾಗ ಬಾಟಿಂಗ್ಗೆ ಬಂದ ಟ್ರಾವಿಸ್ ಹೆಡ್ ಶತಕ ಸಿಡಿಸಿ ಭಾರತಕ್ಕೆ ವಿಶ್ವಕಪ್ ಸಿಗದಂತೆ ಮಾಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ