ICC mens odi cricketer of the year 2023 : 2023ರಲ್ಲಿ ಭಾರತವು ಮೂರು ಮಾದರಿಯ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಏಷಿಯಾಕಪ್ ಟಿ20ಯನ್ನು ಕೂಡ ಗೆದ್ದುಕೊಂಡಿದೆ. ಆದರೆ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯವೊಂದರಲ್ಲಿ ಎಡವಿತ್ತು. ಅದನ್ನು ಹೊರೊತು ಪಡಿಸಿದರೆ ಟೀಂ ಇಂಡಿಯಾ 2023ರ ವರ್ಷದ ಹಲವು ಟೂರ್ನಿಮೆಂಟ್ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2023ರ ವರ್ಷದ ಏಕದಿನ ಪ್ರಶಸ್ತಿಗೆ ನಾಲ್ಕು ಆಟಗಾರರನ್ನು ಹೆಸರಿಸಿದೆ. ಈ ಪಟ್ಟಿಯಲ್ಲಿ ಭಾರತ ಮೂವರು ಆಟಗಾರರನ್ನು ಸೇರಿದಂತೆ ನ್ಯೂಜಿಲೆಂಡ್ ತಂಡದ ಒಬ್ಬ ಆಟಗಾರನ ಹೆಸರು ಈ ಪಟ್ಟಿಯಲ್ಲಿ ಸೇರಿದೆ.
ಇದನ್ನು ಓದಿ-SA Vs IND: ಕೇಪ್ ಟೌನ್‌ನಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಬಳಿಕ ವಿರಾಟ್ ಕೊಹ್ಲಿಯ ತಮಾಷೆಯ ಪೋಸ್ ವೈರಲ್
ಐಸಿಸಿಯು 2023ರಲ್ಲಿ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿದ ಅರ್ಹ ನಾಲ್ಕು ಜನ ಆಟಗಾರರನ್ನು ಹುಡುಕಿ ಅವರ ಹೆಸರನ್ನು ಪ್ರಕಟಿಸಿದೆ. ಆ ನಾಲ್ಕು ಆಟಗಾರರನ್ನು ಕ್ರಮವಾಗಿ ಶುಭ್ಮನ್‌ಗಿಲ್, ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ, ಅಷ್ಟೆಯಲ್ಲದೇ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಶುಭ್ಮನ್ ಗಿಲ್ : ಈ ನಾಲ್ಕು ಜನ ಆಟಗಾರರು ತಂಡದ ಪರ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 2023ರ ವರ್ಷವು ಶುಭ್ಮನ್‌ಗಿಲ್ ಪಾಲಿಗೊಂತು ಸ್ಮರಣಿಯ ವರ್ಷವಾಗಿದೆ. ಏಕದಿನ ಕಿಕೆಟ್‌ನಲ್ಲಿ 29 ಪಂದ್ಯಗಳನ್ನು ಆಡಿದ್ದು,63.36ರ ಸರಾಸರಿಯಲ್ಲಿ 1584 ರನ್ ಕಲೆಹಾಕಿದ್ಧಾರೆ. ಅಷ್ಟೇ ಅಲ್ಲದೇ 24 ಕ್ಯಾಚ್‌ಗಳನ್ನು ಪಡೆದಿದ್ಧಾರೆ. ವರ್ಷದ ಆರಂಭದಲ್ಲೇ ನೈಜಿಲೆಂಡ್ ವಿರುದ್ದ 208ರನ್‌ಗಳಿಸಿ ಮಿಂಚಿದ್ದರು.
ಇದನ್ನು ಓದಿ-ದಕ್ಷಿಣ ಆಫ್ರಿಕಾದ ಈ ಆಟಗಾರನಿಗೆ ನಮನ ಸಲ್ಲಿಸಿದ ಕೊಹ್ಲಿ !ಟೆಸ್ಟ್ ಕೆರಿಯರ್ ಗೆ ಗುಡ್ ಬೈ
ಶುಭ್ಮನ್ ಅವರು ಸಿಡಿಸಿದ 208ರನ್ 2023ರ ವರ್ಷದ ಭಾರತದ ಪರ ಏಕದಿನದ ಅತ್ಯಧಿಕ ಸ್ಕೋರ್ ಆಗಿದೆ. ಅಷ್ಟೇ ಅಲ್ಲದೇ ಗಿಲ್ 2023ರ ವರ್ಷ ಭಾರತದ ಪರ ಏಕದಿನದಲ್ಲಿ 1500ರ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ಧಾರೆ. ಇವರ ಬ್ಯಾಟ್‌ನಿಂದ 5 ಸೆಂಚೂರಿಗಳು ಹೊರಬಂದಿವೆ.
ಮೊಹಮದ್ ಶಮಿ : 2023 ODI ಪರುಷ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಏಕೈಕ ಬೌಲರ್ ಆಗಿದ್ಧಾರೆ. ಇವರು ವಿಶ್ವಕಪ್‌ನಲ್ಲಿ ತೋರಿದ ಪ್ರದರ್ಶನವು ಅವಿಸ್ಮರಣೀಯವಾಗಿದೆ. ಹಾರದಿಕ್ ಪಾಂಡ್ಯ ಬದಲಿಗೆ ಟೀಂ ಇಂಡಿಯ ಪರ ವಿಶ್ವಕಪ್‌ನಲ್ಲಿ ಕಣಕ್ಕಿಳಿದರು, ಅನೇಕ ಪಂದ್ಯಗಳ ಗೆಲುವಿಗೆ ಕಾರಣ ಕರ್ತರಾದರು.
ಶಮಿ ಏಕದಿನದಲ್ಲಿ 19 ಪಂದ್ಯಗಳನ್ನು ಆಡಿ 43 ವಿಕೆಟ್ ಕಬಳಿಸಿದ್ಧಾರೆ. ಇನ್ನು 2023 ವಿಶ್ವಕಪ್‌ನಲ್ಲಿ ಕೇವಲ 7 ಪಂದ್ಯಗಳಿಂದ 10.7 ಸರಾಸರಿಯಲ್ಲಿ 24 ಪಡೆದುಕೊಂಡು ಅತೀ ಹೆಚ್ಚು ವಿಕೆಟ್ ಟೇಕರ್ ಆಗಿ ಹೊರ ಹೊಮ್ಮಿದರು. ಇವರು ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡಷ್ ವಿರುದ್ದ ಪಡೆದ 7/57 ಗಳು ದಾಖಲೆಯಾಗಿದೆ.
ವಿರಾಟ್ ಕೊಹ್ಲಿ : ಇವರು ಭಾರತ ತಂಡದ ಶ್ರೇಷ್ಠ ಆಟಗಾರರಾಗಿದ್ದು, ಈ ವರ್ಷವು ತಮ್ಮ ತಮ್ಮ ದಾಖಲೆಗಳ ಪರಂಪರೆಯನ್ಗನು ಮುಂದುವೆರೆಸಿ ಕೊಂಡುಬಂದಿದ್ಧಾರೆ. 2023ರಲ್ಲಿ ಇವರ ಪ್ರದರ್ಶನವು ಉನ್ನತ ಮಟ್ಟವನ್ನು ತಲುಪಿತ್ತು. ಆಡಿದ 11 ಪಂದ್ಯಗಳಿಂದ 765 ರನ್‌ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಸೀಸನ್‌ನಲ್ಲಿ ಅತೀಹೆಚ್ಚು ರನ್‌ಗಳಿದ ದಾಖಲೆಯನ್ನು ನಿರ್ಮಿಸಿದರು. ಅಷ್ಟೇ ಅಲ್ಲದೇ ವಿ.ಕಪ್‌ನಲ್ಲಿ ಅಮೋಘ 3 ಸೆಂಚೂರಿಗಳನ್ನು ಬಾರಿಸಿ ಏಕದಿನದಲ್ಲಿ ತಮ್ಮ 50 ಶತಕವನ್ನು ಪೂರೈಸಿದರು.
ಕೊಹ್ಲಿ 2023ರಲ್ಲಿ 27 ಏಕದಿನ ಪಂದ್ಯಗಳಲ್ಲಿ 24 ಇನ್ನಿಂಗ್ಸ್ ಆಡಿದ್ದು 1377 ರನ್‌ಗಲಿಸಿದ್ಧಾರೆ. 6 ಶತಕಗಳನ್ನು ಹಾಗು 8 ಅರ್ಧಶತಕಗಳನ್ನು ಬಾರಿಸಿದ್ದು, 72.47ರ ಸರಾಸರಿಯಲ್ಲಿ ಬ್ಯಾಟ್ ಮಾಡಿದ್ಧಾರೆ.
ಡೇರಿಲ್ ಮಿಚೆಲ್ : ನ್ಯೂಜಿಲೆಂಡ್ ತಂಡದ ಆಟಗಾರ ಡೇರಿಲ್ ಮಿಚೆಲ್ ಅವರು 2023ರ ಪರುಷರ ಏಕದಿನ ಕ್ರಿಕೇಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ಧಾರೆ.ಇವರು 26 ಪಂದ್ಯಗಳನ್ನು ಆಡಿದ್ದು 1204 ರನ್ ಗಳಿಸಿದ್ದಲ್ಲದೇ 9 ವಿಕೆಟ್‌ಗಳನ್ನು ಪಡೆದಿದ್ದಾರೆ. 5 ಶತಕಗಳನ್ನು ಮತ್ತು 3 ಅರ್ಧ ಶತಕಗಳನ್ನು 2023ರಲ್ಲಿ ಗಳಿಸಿದ್ದಾರೆ.
ರೋಹಿತ್ ಶರ್ಮಾ ಅವರು 2023ರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗರಾರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ಧಾರೆ. ಆದರು ಇವರು 2023ರ ಪುರುಷರ ಏಕದಿನ ಕ್ರಿಕೆಟಿಗ ಪಟ್ಟಿಯಿಂದ ಹೊರಗುಳಿದಿದ್ದಾರೆ. 27 ಪಂದ್ಯಗಳನ್ನು ಆಡಿದ್ದು, 1255 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡ