Richest Woman Cricketer: ಸದ್ಯ ಮಹಿಳಾ ಪ್ರೀಮಿಯರ್ ಲೀಗ್ 2023 ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ಮಂಡಳಿ ಬಹಳ ದಿನಗಳಿಂದ ಯೋಜನೆ ರೂಪಿಸಿ ಅನುಷ್ಟಾನಕ್ಕೆ ತಂಡ ಲೀಗ್ ಇದಾಗಿದ್ದು, ಡೆಲ್ಲಿ, ಮುಂಬೈ ಮತ್ತು ಯುಪಿ ವಾರಿಯರ್ಸ್ ತಂಡ ಪ್ಲೇಆಫ್ ಹಂತ ತಲುಪಿದೆ. ಇಂದು ನಾವು ಕ್ರಿಕೆಟ್ ಲೋಕದಲ್ಲಿ ಅತ್ಯಂತ ಶ್ರೀಮಂತ ಮಹಿಳಾ ಆಟಗಾರ್ತಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕ್ರಿಕೆಟ್‍ಗೆ ತಂತ್ರಜ್ಞಾನದ ಕೊಡುಗೆ ಅಪಾರ: ಡೇಟಾ ವಿಶ್ಲೇಷಣೆ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು?


ಎಲ್ಲಿಸ್ ಪೆರ್ರಿ:


ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಇದುವರೆಗೆ ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಪೆರ್ರಿ ಒಟ್ಟು ಆದಾಯ 14 ಮಿಲಿಯನ್ ಡಾಲರ್. ಈ ಮೂಲಕ ವಿಶ್ವದ ಮಟ್ಟಿಗೆ ಮಾತನಾಡುವುದಾದರೆ ಇವರೇ ಮಹಿಳಾ ಕ್ರಿಕೆಟರ್’ಗಳ ಪೈಕಿ ಅತ್ಯಂತ ಶ್ರೀಮಂತೆ ಎನ್ನಬಹುದು.


ಹರ್ಮನ್‌ ಪ್ರೀತ್ ಕೌರ್:


ಇವರು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ. ಸದ್ಯ ಮಹಿಳಾ ಪ್ರೀಮಿಯರ್ ಲೀಗ್‌’ನಲ್ಲಿ ಮುಂಬೈ ಫ್ರಾಂಚೈಸಿಯನ್ನು ಮುನ್ನಡೆಸುತ್ತಿದ್ದಾರೆ. ಅವರ ಒಟ್ಟು ಆದಾಯ 3 ಮಿಲಿಯನ್ ಡಾಲರ್.


ಹಾಲಿ ಫರ್ಲಿಂಗ್:


ಈ ಆಸ್ಟ್ರೇಲಿಯಾದ ಆಲ್ ರೌಂಡರ್ ಫ್ರಾಂಚೈಸಿ ಕ್ರಿಕೆಟ್ ಹಾಗೂ ರಾಷ್ಟ್ರೀಯ ತಂಡದಲ್ಲಿ ಚಿರಪರಿಚಿತ. ಆದಾಯದ ವಿಷಯದಲ್ಲಿ ಫಾರ್ಲಿಂಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಇವರ ಒಟ್ಟು ಆದಾಯ 1.5 ಮಿಲಿಯನ್ ಡಾಲರ್.


ಇಶಾ ಗುಹಾ:


ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ್ತಿ ಇಶಾ ಈಗ ಫುಲ್ ಟೈಮ್ ಕಾಮೆಂಟೇಟರ್. 2001-2011ರಲ್ಲಿ ಇಂಗ್ಲೆಂಡ್ ಪರ ಆಡಿದ್ದರು. ಇಶಾ ಅವರ ಒಟ್ಟು ಆದಾಯ 1.5 ಮಿಲಿಯನ್ ಡಾಲರ್.


ಮಿಥಾಲಿ ರಾಜ್:


ಭಾರತದ ಲೆಜೆಂಡರಿ ಕ್ರಿಕೆಟ್ ಆಟಗಾರ್ತಿಯಾಗಿರುವ ಮಿಥಾಲಿ ರಾಜ್, ಟೀಂ ಇಂಡಿಯಾವನ್ನು ಮುನ್ನಡೆಸಿದ ಯಶಸ್ವಿ ನಾಯಕಿ ಕೂಡ ಹೌದು. ಮಿಥಾಲಿ ರಾಜ್ ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಸದ್ಯ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಕೆಯ ಒಟ್ಟು ಆದಾಯ 5 ಮಿಲಿಯನ್ ಡಾಲರ್. ಈ ಮೂಲಕ ಭಾರತದಲ್ಲಿ ಮಹಿಳಾ ಕ್ರಿಕೆಟರ್’ಗಳ ಪೈಕಿ ಅತ್ಯಂತ ಶ್ರೀಮಂತೆ ಮಿಥಾಲಿ ಆಗಿದ್ದಾರೆ.


ಇದನ್ನೂ ಓದಿ: Virat Kohli Dance: ಶತಕ ಬಾರಿಸಲು ರೆಡಿ ಡ್ಯಾನ್ಸ್‌ಗೂ  ರೆಡಿ  ವಿರಾಟ್‌ ಕೊಹ್ಲಿ


ಸ್ಮೃತಿ ಮಂಧಾನ:


ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಮೃತಿ ಅತ್ಯಂತ ದುಬಾರಿ ಕ್ರಿಕೆಟ್ ಆಟಗಾರ್ತಿ ಎಂದು ಸಾಬೀತುಪಡಿಸಿದ್ದರು. ಆದರೆ ಅಂದುಕೊಂಡತೆ ಲೀಗ್’ನಲ್ಲಿ ಕೊಂಚವೂ ಪ್ರದರ್ಶನ ತೋರದೆ ಕಳೆದ ದಿನ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸ್ಮೃತಿಯ ಒಟ್ಟು ಆದಾಯ 4 ಮಿಲಿಯನ್ ಡಾಲರ್.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.